ಯಾಂತ್ರೀಕೃತ ಮೀನುಗಾರಿಕೆ ದೋಣಿ ನಿರ್ಮಾಣಕ್ಕೆ ಸಾಧ್ಯತಾ ಪ್ರಮಾಣ ಪತ್ರ ಪಡೆಯಲು ಮತ್ತು ಅವಧಿ ವಿಸ್ತರಣೆಗೆ ಅವಕಾಶ

 ಯಾಂತ್ರೀಕೃತ ಮೀನುಗಾರಿಕೆ ದೋಣಿ ನಿರ್ಮಾಣಕ್ಕೆ ಸಾಧ್ಯತಾ  ಪ್ರಮಾಣ ಪತ್ರ ಪಡೆಯಲು ಮತ್ತು ಅವಧಿ ವಿಸ್ತರಣೆಗೆ ಅವಕಾಶ
Share this post

ಮಂಗಳೂರು, ಮಾರ್ಚ್ 23, 2021: ಜಿಲ್ಲೆಯಲ್ಲಿ ಯಾಂತ್ರೀಕೃತ ಮೀನುಗಾರಿಕೆ ದೋಣಿಗಳ ನಿರ್ಮಾಣಕ್ಕೆ ಸಾಧ್ಯತಾ ಪತ್ರ ಪಡೆಯಲು ಮೀನುಗಾರಿಕೆ ಇಲಾಖೆಗೆ ಅರ್ಜಿ ಸಲ್ಲಿಸಿ, ಸಾಧ್ಯತಾ ಪ್ರಮಾಣ ಪತ್ರ ಪಡೆಯದವರಿಗೆ ಮರು ಅವಕಾಶ ಕಲ್ಪಿಸಲಾಗಿದೆ.

2016 ನೇ ನವೆಂಬರ್ 21 ರೊಳಗೆ ಅರ್ಜಿ ಸಲ್ಲಿಸಿದ ಅರ್ಜಿದಾರರರು ನಿಯಮಾನುಸಾರ ಸಂಬಂಧಿತ ವಿಧಾನಸಭಾ ಕ್ಷೇತ್ರದ ಶಾಸಕರ ಶಿಫಾರಸ್ಸು ಪತ್ರ ಹಾಗೂ ನಿಗದಿತ ಶುಲ್ಕ, ಅಗತ್ಯ ದಾಖಲಾತಿಗಳ ಜೊತೆಗೆ ಈ ಬಗ್ಗೆ ನಿರ್ಮಾಣ ಹಂತದ ಮಾಹಿತಿಯನ್ನು ಸಲ್ಲಿಸಬೇಕು.

ಈಗಾಗಲೇ ಸಾಧ್ಯತಾ ಪತ್ರ ಪಡೆದು ಇನ್ನೂ ದೋಣಿ ನಿರ್ಮಿಸಲು ಸಾಧ್ಯವಾಗಿಲ್ಲದ ಅರ್ಜಿದಾರರಿಗೂ ಸರಕಾರದ ಆದೇಶದಂತೆ ಸಾಧ್ಯತಾ ಪತ್ರದ ಅವಧಿ ವಿಸ್ತರಣೆಗೆ ಅವಕಾಶ ಕಲ್ಪಿಸಲಾಗಿದೆ.

ಅರ್ಜಿದಾರರು ಪ್ರಸ್ತುತ ಸಾಲಿನ ದಾಖಲೆಗಳನ್ನು ಎಪ್ರಿಲ್ 10ರೊಳಗೆ ಅಗತ್ಯ ಸಲ್ಲಿಸಬೇಕು.

ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಮೀನುಗಾರಿಕೆ ಹಿರಿಯ ಸಹಾಯಕ ನಿರ್ದೇಶಕರು ದ.ಕ. ಜಿಲ್ಲಾ ಪಂಚಾಯತ್ ಕಚೇರಿ ಕಟ್ಟಡ, 2ನೇ ಮಹಡಿ, ಉರ್ವಾಸ್ಟೋರ್, ಮಂಗಳೂರು ಅಥವಾ ದೂ. ಸಂಖ್ಯೆ: 0824-2451292 ನ್ನು ಸಂಪರ್ಕಿಸಬಹುದು ಎಂದು ಮೀನುಗಾರಿಕೆ ಹಿರಿಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Subscribe to our newsletter!

Other related posts

error: Content is protected !!