ಮಡಂತ್ಯಾರ್ ಸೇಕ್ರೆಡ್ ಹಾರ್ಟ್ ಕಾಲೇಜಿನ ವಾರ್ಷಿಕ ಕ್ರೀಡಾಕೂಟ
ಮಡಂತ್ಯಾರ್, ಮಾರ್ಚ್ 23, 2021: ಮಡಂತ್ಯಾರ್ ಸೇಕ್ರೆಡ್ ಹಾರ್ಟ್ ಕಾಲೇಜಿನ ವಾರ್ಷಿಕ ಕ್ರೀಡಾಕೂಟವು ಮಾರ್ಚ್ 16 ರಂದು ನಡೆಯಿತು.
ಸೆಕ್ರೆಡ್ ಹಾರ್ಟ್ ವಿದ್ಯಾಸಂಸ್ಥೆಗಳ ಸಂಚಾಲಕರಾದ ವಂದನೀಯ ಫಾ| ಬೇಸಿಲ್ ವಾಸ್ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು. ಕಾಲೇಜಿನ ಹಳೆ ವಿದ್ಯಾರ್ಥಿ, ಬೆಳ್ತoಗಡಿ ತಾಲ್ಲೂಕು ಅಮೇಚೂರು ಕಬಡ್ಡಿ ಅಸೋಸಿಯೇಷನ್ ಇದರ ಅಧ್ಯಕ್ಷರಾಗಿರುವ ಶ್ರೀ ರಾಜಶೇಖರ ಶೆಟ್ಟಿಯವರು ಸಮಾರಂಭದ ಮುಖ್ಯ ಅತಿಥಿಗಳಾಗಿದ್ದರು.
Also read: Dr K Harish Kumar posted as Belagavi DC
ಕಾಲೇಜಿನ ಹ ಳೆವಿದ್ಯಾರ್ಥಿನಿ ಪ್ರಸ್ತುತ ಓಮನ್ ದೇಶದ ಮಸ್ಕಾತ್ ನಲ್ಲಿ ಉದ್ಯೋಗಿಯಾಗಿರುವ ಶ್ರೀಮತಿ ಅನ್ನಮ್ಮ ವರ್ಕಿ ಇವರು ಕ್ರೀಡಾಕೂಟವನ್ನು ಉದ್ಘಾಟಿಸಿದರು.
“ಮೂವತ್ತು ವರ್ಷಗಳ ಹಿಂದೆ ಈ ಕಾಲೇಜಿನ ವಿದ್ಯಾರ್ಥಿನಿಯಾಗಿದ್ದಾಗ ಇಲ್ಲಿ ಸಾಧನೆಗೆ ಆಟದ ಮೈದಾನವಿರಲಿಲ್ಲ ಆಗಿನ ಪ್ರಾಂಶುಪಾಲರಾಗಿದ್ದ ವಂದನೀಯ ರಾಬರ್ಟ್ ಕ್ರಾಸ್ತಾ ಅವರು ನಮ್ಮನ್ನು ಪ್ರೋತ್ಸಾಹಿಸಿ ಚಿಕ್ಕದಾದ ಆಟದ ಮೈದಾನವನ್ನು ನಿರ್ಮಿಸಿಕೊಟ್ಟಿದ್ದರು. ಈಗಿನ ವಿದ್ಯಾರ್ಥಿಗಳಿಗೆ ಎಲ್ಲ ಸವಲತ್ತುಗಳಿವೆ. 400 ಮೀಟರ್ ಸುತ್ತಳತೆಯ ಈ ಆಟದ ಮೈದಾನದಲ್ಲಿ ಅಭ್ಯಾಸ ಮಾಡಿದರೆ ಒಲಿoಪಿಕ್ಸ್ ನಲ್ಲೂ ಭಾಗವಹಿಸಬಹುದು,” ಎಂದು ವಿದ್ಯಾರ್ಥಿಗಳನ್ನು ಹುರಿದುಂಬಿಸಿದರು.
Also read: Mangaluru enforces strict COVID norms
ಇದೇ ಸಂದರ್ಭದಲ್ಲಿ ಇತ್ತೀಚೆಗೆ ಕೊಡಗು ವಲಯದಲ್ಲಿ ಜಯ ಗಳಿಸಿದ ಕಾಲೇಜಿನ ಫುಟ್ಬಾಲ್ ತಂಡ ಹಾಗೂ ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದಲ್ಲಿ ವಿಜೇತರಾದ ಕ್ರಿಕೆಟ್ ತಂಡವನ್ನು ಅಭಿನoದಿಸಲಾಯಿತು.
ಕ್ರೀಡಾಕೂಟವು ಸೇಕ್ರೆಡ್ ಹಾರ್ಟ್ ಕಾಲೇಜು ವಿದ್ಯಾರ್ಥಿಗಳ ಆಕರ್ಷಕ ಪಥಸಂಚಲನದೊಂದಿಗೆ ಪ್ರಾರಂಭವಾಯಿತು.
ಸೇಕ್ರೆಡ್ ಹಾರ್ಟ್ ಚರ್ಚ್ ಪಾಲನಾ ಮಂಡಳಿ ಉಪಾಧ್ಯಕ್ಷರಾದ ಶ್ರೀ ಲಿಯೋ ರೋಡ್ರಿಗಸ್, ಕಾಲೇಜಿನ ಹಳೆ ವಿದ್ಯಾರ್ಥಿ ರಾಷ್ಟೀಯ ಕಬಡ್ಡಿ ತಂಡವನ್ನು ಪ್ರತಿನಿಧಿಸಿದ ಹಕೀಂ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಪ್ರಾನ್ಸಿಸ್ ವಿ. ವಿ ಇವರು ಸಮಾರಂಭದಲ್ಲಿ ಉಪಸ್ಥಿತರಿದ್ದರು.
ಕಾಲೇಜಿನ ಪ್ರಾಂಶುಪಾಲ ಡಾ. ಜೋಸೆಫ್ ಎನ್ ಎಮ್ ಸ್ವಾಗತಿಸಿದರು. ಶಾರೀರಿಕ ಶಿಕ್ಷಣ ನಿರ್ದೇಶಕರಾದ ಶ್ರೀಮಾನ್ ಪ್ರಕಾಶ್ ಡಿಸೋಜ ಇವರು ಧನ್ಯವಾದ ಸಮರ್ಪಿಸಿದರು. ನೆಲ್ಸನ್ ಮೋನಿಸ್ ಕಾರ್ಯಕ್ರಮ ನಿರೂಪಿಸಿದರು. ಸಭಾಕಾರ್ಯಕ್ರಮದ ಬಳಿಕ ವಿದ್ಯಾರ್ಥಿಗಳಿಗೆ ವಿವಿಧ ಕ್ರೀಡಾ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.
ವರದಿ
ಶ್ರೇಯಸ್ ಅಂತರ
ಸೇಕ್ರೆಡ್ ಹಾರ್ಟ್ ಕಾಲೇಜು ಮಡಂತ್ಯಾರ್
Also read: Ujire Rubber Market: March 23