ರೈತ ಮಕ್ಕಳಿಗೆ ತೋಟಗಾರಿಕೆ ತರಬೇತಿ

 ರೈತ ಮಕ್ಕಳಿಗೆ ತೋಟಗಾರಿಕೆ ತರಬೇತಿ
Share this post

ಉಡುಪಿ, ಮಾರ್ಚ್ 22, 2021: ತೋಟಗಾರಿಕೆ ಇಲಾಖೆ ವತಿಯಿಂದ ರೈತರ ಮಕ್ಕಳಿಗೆ 10 ತಿಂಗಳ ತರಬೇತಿ ಕಾರ್ಯಕ್ರಮವನ್ನು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತೋಟಗಾರಿಕೆ ತರಬೇತಿ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಗಿದ್ದು, ತರಬೇತಿ ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ.

ಜಿಲ್ಲೆಯ ಸಾಮಾನ್ಯ ವರ್ಗದ 4 ಹಾಗೂ ಪರಿಶಿಷ್ಟ ಜಾತಿಯ 1 ಒಟ್ಟು 5 ಅಭ್ಯರ್ಥಿಗಳ ಗುರಿ ಇದ್ದು, ಸದರಿ ಗುರಿಯಲ್ಲಿ 4 ಪುರುಷರಿಗೆ ಹಾಗೂ 1 ಮಹಿಳೆಯರಿಗೆ ಮೀಸಲಿರುತ್ತದೆ.

ಮಹಿಳೆಯರಿಗಾಗಿ ಮುನಿರಾಬಾದ್ ತರಬೇತಿ ಕೇಂದ್ರ ಕೊಪ್ಪಳ, ಗದಗ ತರಬೇತಿ ಕೇಂದ್ರ ಹಾಗೂ ರಂಗಸಮುದ್ರ ತರಬೇತಿ ಕೇಂದ್ರ ಮೈಸೂರು ಇಲ್ಲಿ ಪ್ರತ್ಯೇಕವಾಗಿ ತರಬೇತಿಗೆ ಅವಕಾಶ ಕಲ್ಪಿಸಲಾಗಿರುತ್ತದೆ.

ಅರ್ಜಿ ಶುಲ್ಕವು ಸಾಮಾನ್ಯ ಅಭ್ಯರ್ಥಿಗಳಿಗೆ 30 ರೂ. ಹಾಗೂ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡದವರಿಗೆ 15 ರೂ. ಇದ್ದು, ಸದರಿ ಮೊತ್ತವನ್ನು IPO / ಡಿಡಿಯನ್ನು ತೋಟಗಾರಿಕೆ ಉಪನಿರ್ದೇಶಕರು, ಜಿಲ್ಲಾ ಪಂಚಾಯತ್, ಉಡುಪಿ ಇವರ ಹೆಸರಿನಲ್ಲಿ ಪಡೆಯಬೇಕು.

ಆಸಕ್ತರು ಹೆಚ್ಚಿನ ಮಾಹಿತಿಗಾಗಿ ಏಪ್ರಿಲ್ 17 ರ ಒಳಗೆ ಉಡುಪಿ, ಕುಂದಾಪುರ ಹಾಗೂ ಕಾರ್ಕಳ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಚೇರಿಯನ್ನು ಸಂಪರ್ಕಿಸುವಂತೆ ಜಿಲ್ಲಾ ಪಂಚಾಯತ್ ತೋಟಗಾರಿಕೆ ಉಪನಿರ್ದೇಶಕರ ಪ್ರಕಟಣೆ ತಿಳಿಸಿದೆ.

Subscribe to our newsletter!

Other related posts

error: Content is protected !!