ನೀರು ಅತ್ಯಮೂಲ್ಯ: ಡಾ. ನತೀನ್ ಪಿಕಳೆ
ಕಾರವಾರ, ಮಾರ್ಚ್ 22, 2021: ನೀರುತಾಯಿಯ ಹಾಲು ಇದ್ದಹಾಗೆ, ಅದಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ ಎಂದು ನಗರಸಭೆ ಅಧ್ಯಕ್ಷಡಾ. ನಿತೀನ್ ಪಿಕಳೆ ಹೇಳಿದರು.
ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ನಗರಸಭೆಕಾರವಾರ ಹಾಗೂ ಜಿಲ್ಲಾ ನ್ಯಾಯವಾದಿಗಳ ಸಂಘ ಕಾರವಾರ ಇವರ ಸಂಯುಕ್ತಆಶ್ರಯದಲ್ಲಿ ಕಾರವಾರ ನಗರ ಸಭೆ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾದ ವಿಶ್ವ ಜಲ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಾರ್ವಜನಿಕರ, ಜನ ಪ್ರತಿನಿಧಿಗಳ ಮತ್ತು ಅಧಿಕಾರಿಗಳ ಒಮ್ಮತದ ಸಹಕಾರ ಇದ್ದಲ್ಲಿ ಮಾತ್ರ ನಗರದ ಅಭಿವೃದ್ಧಿ ಸಾಧ್ಯವಾಗುತ್ತದೆ. ಎಲ್ಲದಕ್ಕೂ ನಗರಸಭೆಯನ್ನ ದೂರುವುದು ಸರಿಯಲ್ಲ.
ಏಪ್ರಿಲ್ ಹಾಗೂ ಮೇ ತಿಂಗಳಲ್ಲಿ ಆಗುವ ನೀರಿನ ಬರವನ್ನ ನೀಗಿಸಲು ನಗರಸಭೆ ಸ್ಥಳೀಯ ನೀರಿನ ಮೂಲಗಳನ್ನು ಉಪಯೋಗಿಸಿಕೊಳ್ಳಲು ಇಂದಿನಿಂದಲೇ ಪೂರ್ವಭಾವಿಯಾಗಿ ವಿವಿಧಕ್ರಮ ತೆಗೆದುಕೊಳ್ಳುತ್ತಿದೆ, ಈ ಕುರಿತಾಗಿ ನಗರಲ್ಲಿಇರುವ ಬಾವಿಗಳಲ್ಲಿ ಇರುವ ಹೂಳನ್ನ ತೆಗೆದು ಸ್ವಚ್ಛಗೊಳಿಸಿ ಪಂಪಗಳನ್ನ ಅಳವಡಿಸಿ ನೀರಿನ ಬಳಕೆಗೆ ಅನುವು ಮಾಡಿಕೊಡಲಾಗುತ್ತಿದೆ ಎಂದರು.
ಕಾರ್ಯಕ್ರಮದ ಮುಖ್ಯಅತಿಥಿಯಾಗಿ ಭಾಗವಹಿಸಿದ್ದ, ಹಿರಿಯ ಸಿವಿಲ್ ನ್ಯಾಯಾದೀಶ ಹಾಗೂಜಿಲ್ಲಾ ಕಾನೂನುಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಟಿ ಗೋವಿಂದಯ್ಯ ಮಾತನಾಡಿ,
ನೀರನ್ನು ಕೃತಕವಾಗಿ ಉತ್ಪಾದನೆ ಮಾಡಲು ಸಾಧ್ಯವಿಲ್ಲ, ನೀರಿನ ಮಹತ್ವಅರಿತು ಮಿತವಾಗಿ ಬಳಸುವುದು ಸೂಕ್ತ.
ನೀರಿನ ಸಮಸ್ಯೆಗೆ ಅಧಿಕಾರಿ ಅಥವಾ ನಗರಸಭೆಗಳ ಕೆಲಸ ಮಾತ್ರವಲ್ಲದೆ ಸಾರ್ವಜನಿಕರ ಪಾತ್ರವೂ ಇದ್ದು, ಇದರ ಬಗ್ಗೆ ಎಲ್ಲರೂ ಅರಿತು ಜಾಗೃತರಾಗಬೇಕು.ಪ್ರಪಂಚವೇ ಒಂದು ಕುಟುಂಬ ಎಲ್ಲಿ ಹಾನಿಯಾದರು ಅದೂ ನಮ್ಮ ಮೇಲೆಯೂ ಪರಿಣಾಮ ಬೀರುತ್ತದೆ.
ಜಿಲ್ಲಾ ನ್ಯಾಯಾದೀಶರ ಸಂಘದ ಅಧ್ಯಕ್ಷ ಅನಿರುದ್ ಜಿ ಹಳದಿಪುರ ರವರು ಮಾತನಾಡಿ, ಜನರು ಮದುವೆ ಮತ್ತು ಸಮಾರಂಭಗಳಲ್ಲಿ ಹಾಗೂ ಪ್ರತಿನಿತ್ಯ ತಮ್ಮ ದೈನಂದಿನ ಬಳಕೆಯಲ್ಲಿ ನೀರಿ ಮಹತ್ವಅರಿಯದೇ ಬಳಕೆ ಮಾಡುತ್ತಾರೆ. ಪ್ರತಿ ಹನಿ ನೀರು ಪೋಲಾಗದಂತೆ ನೋಡಿಕೊಳ್ಳಬೇಕು ಎಂದರು.
ನ್ಯಾಯವಾದಿ ಹಾಗೂ ಉಪನ್ಯಾಸಕರಾದ ನಾಗರಾಜ್ ನಾಯ್ಕ್ ಮಾತನಾಡಿ ದೇಶದಲ್ಲಿ ಗಾಳಿ ನೀರು ಬೆಳಕು ಸೇರಿದಂತೆ ಎಲ್ಲ ವಿಷಯಗಳು ಕಾನೂನಿನ ಅಡಿಯಲ್ಲಿವೆ. ಕಾರವಾರದಲ್ಲಿಹೆಚ್ಚು ಗಿಡಗಳನ್ನ ನೆಟ್ಟು ಸ್ವಚ್ಛ ಹಾಗೂ ಸುಂದರ ಪರಿಸರವನ್ನುಕಾಪಾಡಿಕೊಂಡಿರುವ ನಗರಸಭೆಯ ಕೆಲಸ ಶ್ಲಾಘನೀಯ ಎಂದು ಹೇಳಿದರು.
ನಗರಸಭೆಯ ಪೌರಯುಕ್ತ ಆರ್. ಪಿ. ನಾಯ್ಕ್ ಮಾತನಾಡಿ ಈ ವರ್ಷವೂ 1000 ಗಿಡಗಳನ್ನ ನೆಡುವ ಯೋಜನೆ ಹಮ್ಮಿಕೊಂಡಿದ್ದೇವೆ.ನಗರದ 8 ವಾರ್ಡ್ ನಿಂದ 15ಲಕ್ಷ ಲೀಟರ್ ಕೊಳಚೆ ನೀರು ಪ್ರತಿನಿತ್ಯ ಹರಿದು ಹೋಗುತ್ತಿದ್ದುಅದನ್ನ ಶುದ್ಧೀಕರಣ ಮಾಡಿ ನಗರದ ಉದ್ಯಾನವನಗಳಿಗೆ ಉಪಯೋಗಿಸುವ ಹಾಗೂ ನಗರದಲ್ಲಿ ನೆಟ್ಟಿರುವ ಗಿಡಗಳಿಗೆ ಬಳಸಲಾಗುವುದು. ಇದಕ್ಕಾಗಿ ಈ ವರ್ಷದ ಬಜೆಟ್ ನಲ್ಲಿ 2 ಕೋಟಿ ರೂಪಾಯಿಗಳನ್ನ ಮೀಸಲೀಡಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ನ್ಯಾಯವಾದಿ ರಾಜೇಶ್ವರಿ ನಾಯ್ಕ್, ನಗರಸಭೆಯ ಸ್ಥಾಯಿ ಸಮಿತಿಯ ಅಧ್ಯಕ್ಷೆ ಸಂದ್ಯಾ ಬಾಡಕರ್, ನಗರಸಭೆ ಉಪಾಧ್ಯಕ್ಷ, ಮತ್ತು ಸಿಬ್ಬಂದಿ , ಸಾರ್ವಜನಿಕರು ಉಪಸ್ಥಿತರಿದ್ದರು.