ಯೋಗ ಜೀವನದ ಅಂಗ: ಉಮನಾಥ್ ಕೋಟ್ಯಾನ್

 ಯೋಗ ಜೀವನದ ಅಂಗ: ಉಮನಾಥ್ ಕೋಟ್ಯಾನ್
Share this post

ಮಂಗಳೂರು, ಮಾರ್ಚ್ 18, 2021:  ಬುದ್ದಿ, ದೇಹ, ಮನಸ್ಸ್ಸು ಎಲ್ಲವನ್ನು ನಿಯಂತ್ರಿಸಿ ಆರೋಗ್ಯ ಕೊಡುವ ಶಕ್ತಿ ಯೋಗದಲ್ಲಿದೆ. ಯೋಗ ಜೀವನದ ಅಂಗವಾದಲ್ಲಿ ನಮ್ಮ ಆರೋಗ್ಯ ಸದೃಡವಾಗಲಿದೆ ಎಂದು ಶಾಸಕ ಉಮನಾಥ್ ಕೋಟ್ಯಾನ್ ಹೇಳಿದರು.

ದ.ಕ ಜಿಲ್ಲಾ ಪಂಚಾಯತ್,  ಆಯುಷ್ ಇಲಾಖೆ, ಆಳ್ವಾಸ್ ಆಯುರ್ವೇದ, ಆಳ್ವಾಸ್ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವೈದ್ಯಕೀಯ ಮಹಾವಿದ್ಯಾಲಯ ಮೂಡುಬಿದಿರೆ ಇವರ ಸಹಯೋಗದಲ್ಲಿ ನಡೆದ ವಿವಿಧ ಆಯುಷ್ ಸೇವೆಗಳ ಆರಂಭ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.  

ನಾವು ಪ್ರತಿ ನಿತ್ಯದ ನಮ್ಮ ದೈನಂದಿನ ಚಟುವಟಿಕೆಯಲ್ಲಿ ಯೋಗವನ್ನು ಒಂದು ಅಂಗವಾಗಿ ತೆಗೆದುಕೊಂಡಲ್ಲಿ ಆರೋಗ್ಯವಂತರಾಗುವುದರೊಂದಿಗೆ ನಮ್ಮ ಮುಂದಿನ ಪೀಳಿಗೆಗೂ ಉತ್ತಮ ಮಾರ್ಗದರ್ಶನವನ್ನು ನೀಡಬಹುದು.  ಆಯುಷ್ ಇಲಾಖೆಯು ವಿವಿಧ ಸೇವೆಗಳನ್ನು ನೀಡುತ್ತಿರುವುದರಿಂದ  ಜನರಿಗೆ ಉತ್ತಮ ವ್ಯವಸ್ಥೆ ಲಭಿಸುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯ ವಿನೋದ್ ಬೇಲೂರು, ತಾಲೂಕು ಪಂಚಾಯತ್ ಸದಸ್ಯೆ ರಶ್ಮಿ ಆಚಾರ್ಯ, ಬಳ್ಕುಂಜೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಮತಾ ಪುಂಜ, ಉಪಾಧ್ಯಕ್ಷ ಆನಂದ ಕೊಲ್ಲೂರು, ಸದಸ್ಯೆ ಸುಜಾತ ಕೊಲ್ಲೂರು, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಅಳ್ವಾ,  ಆಳ್ವಾಸ್ ಆಯುರ್ವೇದ ಕಾಲೇಜಿನ ಪ್ರಾಂಶುಪಾಲರಾದ ಡಾ.ಸುಜಿತ್, ಆಳ್ವಾಸ್ ನ್ಯಾಚುರೋಪಥಿ ಮತ್ತು ಯೋಗ ಕಾಲೇಜಿನ ಪ್ರಾಂಶುಪಾಲರಾದ ಡಾ. ವನಿತಾ ಶೆಟ್ಟಿ. ಆಳ್ವಾಸ್ ಹೋಮಿಯೋಪತಿ ಕಾಲೇಜಿನ ಪ್ರಾಂಶುಪಾಲರಾದ ಡಾ. ರೋಷನ್ ಪಿಂಟೋ ಉಪಸ್ಥಿತರಿದ್ದರು.

Subscribe to our newsletter!

Other related posts

error: Content is protected !!