ವಿಶೇಷ ಗ್ರಾಮ ಸಭೆ ಮೂಲಕ ಕೋವಿಡ್-19 ಲಸಿಕೆ ಪಡೆಯಲು ಜನರಲ್ಲಿ ಜಾಗೃತಿ: ಪ್ರಿಯಾಂಗಾ ಎಂ

 ವಿಶೇಷ ಗ್ರಾಮ ಸಭೆ ಮೂಲಕ ಕೋವಿಡ್-19 ಲಸಿಕೆ ಪಡೆಯಲು ಜನರಲ್ಲಿ ಜಾಗೃತಿ: ಪ್ರಿಯಾಂಗಾ ಎಂ
Share this post

ಕಾರವಾರ, ಮಾರ್ಚ್ 18, 2021: ಕೋವಿಡ್-19 ಪರೀಕ್ಷೆ ಜೊತೆಗೆ ಲಸಿಕೆ ವಿತರಣೆ ಪೂರ್ಣಗೊಳಿಸುವ ಉದ್ದೇದಿಂದ ಜಿಲ್ಲೆಯ ಪ್ರತೀ ಗ್ರಾಮ ಪಂಚಾಯತ್‍ನಲ್ಲಿ ವಿಶೇಷ ಗ್ರಾಮ ಸಭೆ ನಡೆಸಿ ಸದಸ್ಯರಿಗೆ, ವಿವಿಧ ಸಂಘ, ಸಂಸ್ಥೆಗಳ ಪದಾಧಿಕಾರಿಗಳಿ ಕೋವಿಡ್-19 ಎರಡನೇ ಅಲೆ ತಡೆಯ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ. ನಂತರದಲ್ಲಿ ಸಾರ್ವಜನಿಕರನ್ನು ಮನವೊಲಿಸಿ ಲಸಿಕೆ ಹಾಕಿಸುವಂತೆ ತಿಳಿಸಲಾಗುತ್ತಿದೆ ಎಂದು ಜಿಲ್ಲಾ ಪಂಚಾಯತ್‍ನ ಸಿಇಒ ಪ್ರಿಯಾಂಗಾ ಎಂ. ಹೇಳಿದರು.

ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಜಿಲ್ಲಾ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ಜಿಪಂ ಸದಸ್ಯ ಶಿವಾನಂದ ಹೆಗಡೆ ಅವರು ಕೋವಿಡ್-19 ಎರಡನೇ ಅಲೆಯ ತಡೆಗಾಗಿ ಯಾವೆಲ್ಲ ಕ್ರಮ ಕೈಗೊಳ್ಳಲಾಗಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಕೋವಿಡ್-19 ಎರಡನೇ ಅಲೆ ತಡೆಗಾಗಿ ರಾಜ್ಯ ಸರಕಾರವೇ ಕೆಲವು ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದ್ದು, ಮಹಾರಾಷ್ಟ್ರ, ಕೇರಳಾ ಸೇರಿದಂತೆ ಬೇರೆ ರಾಜ್ಯಗಳಿಂದ ಕರ್ನಾಟಕಕ್ಕೆ ಆಗಮಿಸುವವರು ಕೋವಿಡ್-19 ಪರೀಕ್ಷೆ ಮಾಡಿಸಿದ 72 ಗಂಟೆಯೋಳಗಿನ ಆರ್‍ಟಿಪಿಸಿಆರ್ ಪ್ರಮಾಣ ಪತ್ರ ತೆಗೆದುಕೊಂಡು ಬರಬೇಕಾಗಿದೆ ಎಂದರು.

ಕಾರವಾರ ಹಾಗೂ ಅಂಕೋಲಾದಲ್ಲಿ ಮಾ. 17ರಿಂದ ಚೆಕ್ ಪೋಸ್ಟ್‍ಗಳನ್ನ ಪ್ರಾರಂಭಿಸಲಾಗಿದೆ. ಕರೋನಾ ಪರೀಕ್ಷೆ, ಹೋಂ ಕ್ವಾರಂಟೇನ್, ಸಾಮಾಜಿಕ ಅಂತರ ಕಾಪಾಡುವುದು, ಮಾಸ್ಕ್ ಧರಿಸುವುದು, ಸಾನಿಟೈಸರ್ ಬಳಕೆ ಕುರಿತು ಎಲ್ಲ ತಹಶಿಲ್ದಾರ್‍ಗಳಿಗೂ ಸೂಚಿಸಲಾಗಿದೆ

ಪ್ರಿಯಾಂಗಾ ಎಂ

ಮುಖ್ಯಮಂತ್ರಿಗಳು ಈ ಕುರಿತು ರಾಜ್ಯದ ಎಲ್ಲ ಜಿಲ್ಲಾಧಿಕಾರಿ ಹಾಗೂ ಜಿಪಂ ಸಿಇಒಗಳೋಂದಿಗೆ ವಿಡಿಯೋ ಸಂವಾದ ನಡೆಸಿ ಕೋವಿಡ್-19 ಎರಡನೇ ಅಲೆ ತಡೆಯ ಬಗಗೆ ಅಧಿಕಾರಿಗಳು ಹೆಚ್ಚಿನ ಕಾಳಜಿವಹಿಸಿ ಕರ್ತವ್ಯ ನಿರ್ವಹಸಲು ತಿಳಿಸಿದ್ದಾರೆ ಎಂದು ಹೇಳಿದರು.

ಕೋವಿಡ್-19 ಎರಡನೇ ಅಲೆ ತಡೆಗಾಗಿ ಮುಂಜಾಗ್ರತಾ ಕ್ರಮ ಕೈಗೊಂಡಿದ್ದು, 60 ವರ್ಷ ಮೇಲ್ಪಟ್ಟವರು, ಹೊರ ರಾಜ್ಯದಿಂದ ಬರುವವರು ಹಾಗೂ ಕಾರ್ಮಿಕರಿಗೆ ವಿಶೇಷವಾಗಿ ಕರೋನಾ ಪರೀಕ್ಷೆ ನಡೆಸುವಂತೆ ಸೂಚನೆ ಬಂದಿದೆ. ಹೀಗಾಗಿ ಜಿಲ್ಲೆಯಲ್ಲಿ ಪ್ರತಿದಿನ 1200 ಕರೋನಾ ಪರೀಕ್ಷೆಗಳನ್ನ ಮಾಡಲಾಗುತ್ತಿದೆ. ಜೋತೆಗೆ ಕರೋನಾ ಪ್ರಾರಂಭದ ಹಂತದಲ್ಲಿ ಕೈಗೊಂಡಂತಹ ಎಲ್ಲ ಕಾರ್ಯ ಚಟುವಟಿಕೆಗಳನ್ನು ಪುನಃ ಆರಂಭಿಸಿದ್ದು, ಜಿಲ್ಲಾ ಪೋಲೀಸ್ ಇಲಾಖೆ ಹಾಗೂ ಇತರೆ ಇಲಾಖೆಗಳ ಸಹಕಾರದೊಂದಿಗೆ ಕಾರವಾರ ಹಾಗೂ ಅಂಕೋಲಾದಲ್ಲಿ ಮಾ. 17ರಿಂದ ಚೆಕ್ ಪೋಸ್ಟ್‍ಗಳನ್ನ ಪ್ರಾರಂಭಿಸಲಾಗಿದೆ. ಕರೋನಾ ಪರೀಕ್ಷೆ, ಹೋಂ ಕ್ವಾರಂಟೇನ್, ಸಾಮಾಜಿಕ ಅಂತರ ಕಾಪಾಡುವುದು, ಮಾಸ್ಕ್ ಧರಿಸುವುದು, ಸಾನಿಟೈಸರ್ ಬಳಕೆ ಕುರಿತು ಎಲ್ಲ ತಹಶಿಲ್ದಾರ್‍ಗಳಿಗೂ ಸೂಚಿಸಲಾಗಿದೆ ಎಂದರು.

ಜಿಲ್ಲೆಯಲ್ಲಿ 1 ಲಕ್ಷ 40 ಸಾವಿರ ಜನ 60 ವರ್ಷ ಮೇಲ್ಪಟ್ಟವರಿದ್ದು, ಈ ಪೈಕಿ 15 ಸಾವಿರ ಜನರು ಈಗಾಗಲೇ ಲಸಿಕೆ ಪಡೆದುಕೊಂಡಿದ್ದಾರೆ. ಇನ್ನುಳಿದ 1 ಲಕ್ಷ 25 ಸಾವಿರದಷ್ಟು ಜನ ಲಸಿಕೆ ಪಡೆಯಬೇಕಿದೆ. ಹೀಗಾಗಿ ಎಲ್ಲ ಪ್ರಾಥಮಿಕ ಹಾಗೂ ಸಮೂದಾಯ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ ಆಶಾ ಕಾರ್ಯಕರ್ತರಿಗೆ ಇಂತಿಷ್ಟು ಗುರಿ ನಿಗದಿಪಡಿಸಲಾಗಿದೆ. ಆ ಮೂಲಕ ಆಧಾರ್ ಕಾರ್ಡ್ ಮೂಲಕ 60 ವರ್ಷ ಮೇಲ್ಪಟ್ಟವರ ಮಾಹಿತಿ ಕಲೆ ಹಾಕುತ್ತಿದ್ದು, ಪ್ರತಿಯೊಬ್ಬರೂ ಲಸಿಕೆ ಪಡೆದುಕೊಳ್ಳುವಂತೆ ಮನವಿ ಮಾಡಲಾಗುತ್ತಿದೆ.

ಲಸಿಕೆ ವಿತರಣೆ ಹಾಗೂ ಸರಬರಾಜಿನಲ್ಲಿ ಯಾವುದೇ ತೊಂದರೆಯಿಲ್ಲ. ಜಿಲ್ಲೆಗೆ ಅಗತ್ಯವಿರುವಷ್ಟು ಲಸಿಕೆ ಬಂದಿದೆ. ಹೀಗಾಗಿ ಸಾರ್ವಜನಿಕರು ತಮ್ಮ ಸಮೀಪದ ಪ್ರಾಥಮಿಕ ಹಾಗೂ ಸಮೂದಾಯ ಆರೋಗ್ಯ ಕೇಂದ್ರಗಳಲ್ಲಿ ಲಸಿಕೆ ಪಡೆದುಕೊಳ್ಳಬಹುದು. ಕೋವಿಡ್-19 ಪರೀಕ್ಷೆ ಜೊತೆಗೆನೇ ಲಸಿಕೆ ವಿತರಣೆ ಪೂರ್ಣಗೊಳಿಸುವ ಉದ್ದೇದಿಂದ ಜಿಲ್ಲೆಯ ಪ್ರತೀ ಗ್ರಾಮ ಪಂಚಾಯತ್‍ನಲ್ಲಿ ವಿಶೇಷ ಗ್ರಾಮ ಸಭೆ ನಡೆಸಿ ಸದಸ್ಯರಿಗೆ, ವಿವಿಧ ಸಂಘ, ಸಂಸ್ಥೆಗಳ ಪದಾಧಿಕಾರಿಗಳಿ ಕೋವಿಡ್-19 ಎರಡನೇ ಅಲೆ ತಡೆಯ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ. ನಂತರದಲ್ಲಿ ಸಾರ್ವಜನಿಕರನ್ನು ಮನವೋಲಿಸಿ ಲಸಿಕೆ ಹಾಕಿಸುವಂತೆ ತಿಳಿಸಲಾಗುತ್ತಿದೆ ಎಂದರು.

Subscribe to our newsletter!

Other related posts

error: Content is protected !!