ಮಂಗಳೂರು: ಕೃಷಿ ಸಮಸ್ಯೆಗೆ ಪರಿಹಾರ

 ಮಂಗಳೂರು: ಕೃಷಿ ಸಮಸ್ಯೆಗೆ ಪರಿಹಾರ
Share this post

ಮಂಗಳೂರು, ಮಾರ್ಚ್ 16, 2021:   ರೈತರಿಗೆ ಕೃಷಿ ಸಮಸ್ಯೆಗೆ ಪರಿಹಾರ ಪಡೆಯಲು ಅನುಕೂಲವಾಗುವಂತೆ ಕೃಷಿ ಸಂಜೀವಿನಿ ಎಂಬ ವಿನೂತನ ಯೋಜನೆಯು  ಜಾರಿಗೆ ಬಂದಿದೆ.

ರೈತರು ತಮ್ಮ ಜಮೀನಿನಲ್ಲಿ ಮಣ್ಣು ಪರೀಕ್ಷೆ, ಕೀಟ ಮತ್ತು ರೋಗಗಳು ಸೇರಿದಂತೆ ಮತ್ತಿತರ ಸಮಸ್ಯೆಗಳು ಕಂಡು ಬಂದಲ್ಲಿ ಉಚಿತ ಸಹಾಯವಾಣಿ ಸಂಖ್ಯೆ: 155313  ಗೆ ಕರೆ ಮಾಡಿದಲ್ಲಿ ತಮ್ಮ ಜಮೀನಿಗೆ ಸಂಚಾರಿ ಸಸ್ಯ ಆರೋಗ್ಯ ಚಿಕಿತ್ಸಾಲಯದ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲಿಸಿ ಪರಿಹಾರ ನೀಡಲಿದ್ದಾರೆ.

ರೈತರು ಇದರ ಸದುಪಯೋಗ ಪಡೆಯುವಂತೆ ಜಿಲ್ಲಾ ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Subscribe to our newsletter!

Other related posts

error: Content is protected !!