ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ
ಮಂಗಳೂರು, ಮಾರ್ಚ್ 12, 2021: ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಪ್ರಸ್ತುತ ಸಾಲಿನಲ್ಲಿ ಪರಿಶಿಷ್ಟ ಜಾತಿ/ ಪರಿಶಿಷ್ಟ ವರ್ಗದ ವಿದ್ಯಾರ್ಥಿಗಳಿಗೆ ಮೆಟ್ರಿಕ್ ನಂತರದ ಹೊಸ ಮತ್ತು ನವೀಕರಣ ವಿದ್ಯಾರ್ಥಿ ವೇತನ ಮಂಜೂರಾತಿಗ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸಲು ಮಾರ್ಚ್ 20 ಕೊನೆಯ ದಿನ.
ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ವೆಬ್ಸೈಟ್ http://ssp.postmatric.karnataka.gov.in ಅಥವಾ ಸಹಾಯಕ ನಿರ್ದೇಶಕರ ಕಛೇರಿ(ಗ್ರೇಡ್-1) ಸಮಾಜ ಕಲ್ಯಾಣ ಇಲಾಖೆ, ಮಂಗಳೂರು ತಾಲೂಕು, ರಸಿಕ್ ಚೇಂಬರ್ 3ನೇ ಮಹಡಿ ಸೆಂಟ್ರಲ್ ಮಾರ್ಕೆಟ್ ರೋಡ್, ಮಂಗಳೂರು-575001, ದೂರವಾಣಿ ಸಂಖ್ಯೆ: 0824-2441269/ 2423619, ಅಥವಾ ಸಕಾಲ ಸಹಾಯವಾಣಿ ಸಂಖ್ಯೆ: 080-44554455 ನ್ನು ಸಂಪರ್ಕಿಸಬಹುದು ಎಂದು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ