ಮರಳು ದಿಬ್ಬಗಳ ತೆರವು: ಅರ್ಜಿ ಆಹ್ವಾನ
ಮಂಗಳೂರು, ಮಾರ್ಚ್ 10, 2021: ದಕ್ಷಿಣ ಕನ್ನಡ ಜಿಲ್ಲೆಯ ಕರಾವಳಿ ನಿಯಂತ್ರಣ ವಲಯದಲ್ಲಿ ಮೀನುಗಾರಿಕಾ ದೋಣಿಗಳ ಸಂಚಾರಕ್ಕೆ ಅಡಚಣೆ ಉಂಟು ಮಾಡುತ್ತಿರುವ 13 ಮರಳು ದಿಬ್ಬಗಳನ್ನು ತೆರವುಗೊಳಿಸಲು ಕರ್ನಾಟಕ ರಾಜ್ಯ ಕರಾವಳಿ ವಲಯ ನಿರ್ವಾಹಣಾ ಪ್ರಾಧಿಕಾರವು 2020ರ ಸೆಪ್ಟಂಬರ್ 18 ರಂದು ಸಿ.ಆರ್.ಝಡ್ ಕ್ಲಿಯರೆನ್ಸ್ ನೀಡಿದೆ.
ಈ ಸಂಬಂಧ ಪ್ರಸ್ತುತ ಸಾಲಿನ ಮಾರ್ಚ್ 8 ರಂದು ನಡೆದ ಜಿಲ್ಲಾ ಸದಸ್ಯರ ಸಮಿತಿ ಸಭೆಯ ತೀರ್ಮಾನದಂತೆ ಸಿ ಆರ್ ಝಡ್ ಪ್ರದೇಶದಲ್ಲಿ 2011-12 ನೇ ಸಾಲಿನಲ್ಲಿ ಅಥವಾ ಅದಕ್ಕಿಂತ ಮೊದಲು ಗುತ್ತಿಗೆ ಅಥವಾ ತ್ಕಾತ್ಕಾಲಿಕ ಪರವಾನಿಗೆ ಹೊಂದಿರುವ ಅರ್ಹ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಪ್ರಸ್ತುತ ಸಿ ಆರ್ ಝಡ್ ಪ್ರದೇಶದಲ್ಲಿ ಮರಳು ದಿಬ್ಬಗಳನ್ನು ತೆರವುಗೊಳಿಸಲು ಅನುಮತಿ ನೀಡಲು ಅರ್ಹರಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸಲು ಮಾರ್ಚ್ 26 ಕೊನೆಯ ದಿನ. ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಉಪ ನಿರ್ದೇಶಕರ ಕಛೇರಿ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ, 1 ನೇ ಮಹಡಿ, ಜುಗಲ್ ಟವರ್ಸ್, ಮಲ್ಲಿಕಟ್ಟೆ ಮಂಗಳೂರು ಕಚೇರಿ ದೂ. ಸಂಖ್ಯೆ: 0824-2429932 ಅಥವಾ [email protected] ನ್ನು ಸಂಪರ್ಕಿಸಬಹುದು ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.