ಸಹಕಾರ ಸಂಘಗಳಿಗೆ ಸಹಾಯಧನ ಬಿಡುಗಡೆ

 ಸಹಕಾರ ಸಂಘಗಳಿಗೆ ಸಹಾಯಧನ ಬಿಡುಗಡೆ
Share this post

ಉಡುಪಿ, ಮಾರ್ಚ್ 09, 2021: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನರು ನಿರ್ವಹಿಸುತ್ತಿರುವ ಸಹಕಾರ ಸಂಘಗಳನ್ನು ಆರ್ಥಿಕವಾಗಿ ಸದೃಢಗೊಳಿಸುವ ಸಲುವಾಗಿ ಷೇರು ಬಂಡವಾಳದ ರೂಪದಲ್ಲಿ 20 ಲಕ್ಷ ರೂ.ಗಳ ಮೊತ್ತವನ್ನು ಷರತ್ತಿಗೊಳಪಟ್ಟು ಬಿಡುಗಡೆಗೊಳಿಸಲಾಗುತ್ತಿದೆ.

ಅರ್ಹ ಸಹಕಾರ ಸಂಘಗಳು ನಿಗದಿತ ನಮೂನೆಯ ಅರ್ಜಿಯನ್ನು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿಗಳಾದ ಉಡುಪಿ, ಕುಂದಾಪುರ, ಕಾರ್ಕಳ ಇವರಿಂದ ಪಡೆದು, ಜಿಲ್ಲಾ ಸಹಕಾರ ಸಂಘಗಳ ಉಪ ನಿಬಂಧಕರಿಂದ ಶಿಫಾರಸು ಪಡೆದು, ಅರ್ಜಿ ಹಾಗೂ ಪೂರಕ ದಾಖಲೆಗಳನ್ನು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿಗೆ ಸಲ್ಲಿಸುವಂತೆ ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರ ಪ್ರಕಟಣೆ ತಿಳಿಸಿದೆ. 

Subscribe to our newsletter!

Other related posts

error: Content is protected !!