ಶಾಸಕ ಕಾಮತ್ ರಿಂದ ಗೂಡ್ ಶೆಡ್ ರಸ್ತೆ ಪರಿಶೀಲನೆ

 ಶಾಸಕ ಕಾಮತ್ ರಿಂದ ಗೂಡ್ ಶೆಡ್ ರಸ್ತೆ ಪರಿಶೀಲನೆ
Share this post

ಮಂಗಳೂರು, ಮಾರ್ಚ್ 05, 2021: ಮಂಗಳೂರು ಮಹಾನಗರ ಪಾಲಿಕೆಯ ಪೋರ್ಟ್ ವಾರ್ಡಿನ ಗೂಡ್ ಶೆಡ್ ರಸ್ತೆ ಹದಗೆಟ್ಟಿರುವ ಕುರಿತು ಸಾರ್ವಜನಿಕರಿಂದ ದೂರು ಬಂದ ಹಿನ್ನೆಲೆಯಲ್ಲಿ ಶಾಸಕ ವೇದವ್ಯಾಸ್ ಕಾಮತ್ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಈ ವೇಳೆ ಮಾತನಾಡಿದ ಅವರು, ಶಿವರಾತ್ರಿಯ ದಿನ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ರಸ್ತೆ ಅವ್ಯವಸ್ಥೆಯನ್ನು ಸರಿಪಡಿಸಲಾಗುತ್ತದೆ. ಈ ರಸ್ತೆಯ ಕಾಂಕ್ರೀಟೀಕರಣಕ್ಕೆ ಯೋಜನೆ ರೂಪಿಸಲಾಗಿದ್ದು ಮುಂಬರುವ ದಿನಗಳಲ್ಲಿ ರಸ್ತೆ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು. ತಾತ್ಕಾಲಿಕವಾಗಿ ರಸ್ತೆ ಸರಿಪಡಿಸಿಕೊಡಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಇಂದಿನಿಂದ ಈ ಕಾರ್ಯ ಪ್ರಾರಂಭವಾಗಲಿದೆ ಎಂದರು.

ಈ ಸಂದರ್ಭದಲ್ಲಿ ಮೀನುಗಾರಿಕಾ ನಿಗಮದ ಅದ್ಯಕ್ಷರಾದ ನಿತಿನ್ ಕುಮಾರ್, ಮಂಗಳೂರು ಮಹಾನಗರ ಪಾಲಿಕೆಯ ನಾಮನಿರ್ದೇಶಿತ ಸದಸ್ಯರಾದ ಭಾಸ್ಕರ್ ಚಂದ್ರ ಶೆಟ್ಟಿ, ಬಿಜೆಪಿ ಮುಖಂಡರಾದ ಅನಿಲ್ ಹೈೂಗೆಬಜಾರ್,ನಾರಾಯಣ ಗಟ್ಟಿ, ಸುರೇಶ್ ಪಾಂಡೇಶ್ವರ, ರಿತೇಶ್ ಸಾಲ್ಯಾನ್, ಪ್ರಥಮ್ ಕಂದೂಕ, ಯಶ್ವತ್ ಅಮೀನ್, ವನಿತಾ ಧನಂಜಯ, ಜ್ಯೋತಿ ಸುನಿಲ್ ರಾಜ್, ಬಿಜೆಪಿ ಕಾರ್ಯಕರ್ತರು ಹಾಗೂ ನಿರೇಶ್ವಾಲ್ಯ ಸೋಮನಾಥ ದೇವಸ್ಥಾನದ ಆಡಳಿತ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು.

Subscribe to our newsletter!

Other related posts

error: Content is protected !!