ತಲಪಾಡಿ ಟೋಲ್ ಬಸ್ಗಳಿಗೆ ಪಾಸ್
ಮಂಗಳೂರು, ಮಾರ್ಚ್ 04, 2021: ತಲಪಾಡಿ ಟೋಲ್ ಕೇಂದ್ರದಲ್ಲಿ ನಗರದ ಖಾಸಗಿ ಬಸ್ಗಳಿಗೆ ನಿಗದಿಪಡಿಸಿದ ದರದಿಂದ ಜನಸಾಮಾನ್ಯರಿಗೆ ತೊದರೆಯಾಗಿದೆ.
ಈ ವಿಚಾರಕ್ಕೆ ಸಂಬಂಧಿಸಿದಂತೆ ಮಾರ್ಚ್ 4ರಂದು ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಸ್ಥಳೀಯರು ಹಾಗೂ ಸಿಟಿ ಬಸ್ ಮಾಲೀಕರ ಸಂಘದವರೊಂದಿಗೆ ಪರಸ್ಪರ ಸಮಾಲೋಚನೆ ನಡೆಸಿಕೊಂಡು 14,000 ರಷ್ಟು ಅ ನಿಯಮಿತ ಪಾಸುಗಳನ್ನು ಕೊಡುವುದರ ಬಗ್ಗೆ ಸಭೆಯಲ್ಲಿ ಸೌಹಾರ್ದಯುತವಾಗಿ ನಿರ್ಣಯ ಮಾಡಲಾಯಿತು.
ಇನ್ನು ಮುಂದೆ ಎಲ್ಲಾ ಸಿಟಿ ಬಸ್ಗಳು ತಲಪಾಡಿಯನ್ನು ದಾಟಿಕೊಂಡು ಮುಂದಿನ ಬಸ್ಸು ಬಸ್ ನಿಲ್ದಾಣದಲ್ಲಿ ತಂಗಲು ವ್ಯವಸ್ಥೆ ಮಾಡಲಾಗಿದೆ ಎಂದು ಸಭೆಯಲ್ಲಿ ತಿಳಿಸಿದರು.