ಕಾರವಾರದಲ್ಲಿಆಧುನೀಕರಣ ಕುರಿತು ಸಭೆ

 ಕಾರವಾರದಲ್ಲಿಆಧುನೀಕರಣ  ಕುರಿತು ಸಭೆ
Share this post

ಕಾರವಾರ, ಮಾರ್ಚ್ 04 2021: ತಾಲೂಕಿನ ಶಿರವಾಡದ ಜಿಲ್ಲಾ ಕೈಗಾರಿಕಾ ಕೇಂದ್ರದಲ್ಲಿ ಮಾರ್ಚ್ 10 ರಂದು ಬೆಳಗ್ಗೆ 11ಕ್ಕೆ ಉದ್ಯಮಗಳ ವಿಸ್ತರಣೆ, ಆಧುನೀಕರಣ, ವೈವಿದ್ಧೀಕರಣ ಕುರಿತು ಒಂದು ದಿನದ ‘Interaction Meet’ ನ್ನುಹಮ್ಮಿಕೊಳ್ಳಲಾಗಿದೆ ಎಂದು ಸಿಡಾಕ್ ಉಪನಿರ್ದೇಶಕ ಶಿವಾನಂದ ಎಲಿಗಾರ ತಿಳಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಕೇಂದ್ರ ಸರ್ಕಾರದ ಸಂಕಲ್ಪ ಯೋಜನೆಯಡಿ ಕೌಶಲ್ಯಾಭಿವೃದ್ದಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆ, ಧಾರವಾಡದ ಸಿಡಾಕ್, ಜಿಲ್ಲಾ ಕೈಗಾರಿಕಾ ಕೇಂದ್ರ, ದಿಶಾ ಉದ್ಯಮಶೀಲತಾ ಮಾರ್ಗದರ್ಶನ ಕೇಂದ್ರ ಹಾಗೂ ಮಂಗಳೂರಿನ ಕರಾವಳಿ ಅಭಿವೃದ್ದಿ ಪ್ರಾಧಿಕಾರದ ಸಂಯುಕ್ತ ಆಶ್ರಯದಲ್ಲಿ ಕಾರ್ಯಕ್ರಮ ನಡೆಯಲಿದೆ.

ಕಾರ್ಯನಿರತ ಸಾಮಾನ್ಯ ವರ್ಗದ ಮಹಿಳಾ, ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ಹಾಗೂ ವಿಕಲಚೇತನ ಉದ್ಯಮಶೀಲರು ಭಾಗವಹಿಸಬಹುದಾಗಿದೆ.

ಹೆಚ್ಚಿನ ಮಾಹಿತಿಗಾಗಿದೂರವಾಣಿ ಸಂಖ್ಯೆ: 8722708795ಗೆ ಸಂಪರ್ಕಿಸಬಹುದು ಎಂದು ಅವರು ತಿಳಿಸಿದ್ದಾರೆ.

Subscribe to our newsletter!

Other related posts

error: Content is protected !!