ಮೂಡಲಪಾಯ ವಿಶ್ವಕೋಶ ಯೋಜನೆಯಡಿ ಮಾಹಿತಿ ಸಂಗ್ರಹ

ಮಂಗಳೂರು, ಮಾರ್ಚ್ 03. 2021: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಕರ್ನಾಟಕ ಯಕ್ಷಗಾನ ಅಕಾಡೆಮಿಯು ಪ್ರಸ್ತುತ ಸಾಲಿನಲ್ಲಿ ‘ಮೂಡಲಪಾಯ ವಿಶ್ವಕೋಶ’ ಎನ್ನುವ ಯೋಜನೆಯನ್ನು ಹಮ್ಮಿಕೊಂಡಿದೆ.
ಮೂಡಲಪಾಯ ಯಕ್ಷಗಾನವು ಮುಂದಿನ ಪೀಳಿಗೆಗೆ ಅಧ್ಯಯನ ಮಾಡಲು ಯಕ್ಷಗಾನ ಕ್ಷೇತ್ರಕ್ಕೆ ಸಂಬಂಧಿಸಿದ ಲೇಖನ, ಛಾಯಾಚಿತ್ರ, ಬಣ್ಣದ ಚಿತ್ರ, ಹಸ್ತಪ್ರತಿಗಳು, ಛಂದಸ್ಸು, ಕಾವ್ಯದ ಸೌಂದರ್ಯ, ಬಣ್ಣಗಾರಿಕೆ, ಪಾತ್ರಗಳ ವೈಶಿಷ್ಟ್ಯತೆ, ಗೆಜ್ಜೆಪೂಜೆ, ಯಕ್ಷಗಾನ ಕೇಂದ್ರಗಳು, ಭಾಗವತರ ವಿವರ, ಕಲಾವಿದರ ವಿವರ, ವಾದ್ಯಗಳ ವಿವರ, ವೇಷ-ಭೂಷಣದ ವಿವರ ಮೂಡಲಪಾಯದ ತಾಳಗಳ ಬಗ್ಗೆ, ಹೆಜ್ಜೆ ಗುರುತುಗಳ ಬಗ್ಗೆ, ಮಾಹಿತಿ ಸಂಗ್ರಹಿಸುತ್ತಿದೆ.
ಸಾರ್ವಜನಿಕರಲ್ಲಿ ಈ ಬಗ್ಗೆ ಹೆಚ್ಚಿನ ದಾಖಲಾತಿಗಳು ಲಭ್ಯವಿದ್ದಲ್ಲಿ ಇ-ಮೇಲ್: [email protected] ಗೆ ಮಾಹಿತಿಯನ್ನು ಕಳುಹಿಸಬಹುದಾಗಿದೆ ಅಥವಾ ದೂ.ಸಂಖ್ಯೆ: 0824-2951327 ಸಂಪರ್ಕಿಸುವಂತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.