ತೋಟಗಾರಿಕಾ ಬೆಳೆಗಳನ್ನು ಕಾಡುವ ಕೀಟಗಳ ಹತೋಟಿ ಕ್ರಮಗಳು

 ತೋಟಗಾರಿಕಾ ಬೆಳೆಗಳನ್ನು ಕಾಡುವ  ಕೀಟಗಳ ಹತೋಟಿ ಕ್ರಮಗಳು
Share this post

ಮಾವು :- ಹೂ ಬಿಡುವ ಹಾಗೂ ಕಾಯಿಯಾಗುವ ಸಮಯದಲ್ಲಿ ಮಳೆ ಹಾಗೂ ಮೋಡದ ವಾತಾವರಣವಿದ್ದಲ್ಲಿ ಬೂದಿ ರೋಗ  ಹಾಗೂ ಜಿಗಿ ಹುಳುವಿನ ಭಾಧೆ ಹೆಚ್ಚು ಇದರ ಹತೋಟಿಗಾಗಿ ೧ ಗ್ರಾಂ ಕಾರ್ಬನ್‌ಡೈಜಿಮ್ ೫೦ ಡಬ್ಲುಪಿ ಅಥವಾ ಮೀ .ಲೀ ಹೆಕ್ಸಾಕೋನೋಜೋಲ್ ೫ ಇ.ಸಿ ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು.

ಪೇರಲ :- ಜಿಗಿ ಹುಳುವಿನ ಹತೋಟಿಗಾಗಿ ೦.೨೫ ಮಿ.ಲೀ  ಇಮಿಡಾಕ್ಲೋಪ್ರಿಡ್ ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು. ಕಜ್ಜಿ ತಿಗಣಿಯ ಹತೋಟಿಗಾಗಿ ಹೂ ಬಿಡುವ ಸಮಯದಲ್ಲಿ ೧.೭ ಮಿ.ಲೀ ಡೈಮಿಥೋಯೆಟ್ ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು.

ಪಪ್ಪಾಯ :- ಮಳೆ ಹಾಗೂ ಮೋಡ ಕವಿದ ವಾತಾವರಣವಿದ್ದಲ್ಲಿ ಪಪ್ಪಾಯ ಬೆಳೆಯಲ್ಲಿ ಬೂದಿ ರೋಗ ಕಾಣಿಸಿಕೊಳ್ಳುವ ಸಾಧ್ಯತೆ ಇರುವುದರಿಂದ ಇದರ ಹತೋಟಿಗಾಗಿ ೧ ಗ್ರಾಂ ಕಾರ್ಬನ್ ಪ್ರತಿ ಲೀಟಟ್ ನೀರಿಗೆ ಮತ್ತು ೨ ಮಿ/ಲೀ ಡೈಕೊಫಾಲ್ ೨೦ ಇ.ಸಿ ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು.

ಅಡಿಕೆ :– ನೀರು ನಿಲ್ಲದ ಹಾಗೆ ಬಸಿಗಾಲುವೆ ಮಾಡಿ ನೀರು ಸರಾಗವಾಗಿ ಹರಿದು ಹೋಗುವ ಹಾಗೆ ನೋಡಿಕೊಳ್ಳಬೇಕು.

ಮೆಣಸಿನಕಾಯಿ :– ಥ್ರಿಪ್ಸ್ ಕೀಟದ ಹತೋಟಿಗಾಗಿ ೧.೭ ಮಿ.ಲೀ ಡೈಮಿಥೋಯೆಟ್ ಅಥವಾ ೧ ಗ್ರಾಂ ಅಸಿಫೇಟ್ ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು.

ಈರುಳ್ಳಿ :- ಮಜ್ಜಿಗೆ ರೋಗದ ನಿರ್ವಹಣೆಗೆ ೨ ಮಿ.,ಲೀ ಲೀಟರ್ ಡೈಫೆನಕೊನೊಜೋಲ್ ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು.

ಟೊಮ್ಯಾಟೊ :- ನೆಲದಿಂದ ೧ ಅಡಿ ಎತ್ತರದವರೆಗೆ ಎಲ್ಲಾ ಎಲೆಗಳನ್ನು ತೆಗೆದು ಹಾಕುವುದರಿಂದ ಬೆಳೆಯಲ್ಲಿ ಸರಾಗವಾಗಿ ಗಾಳಿಯಾಡುವುದರಿಂದ ಅಂಗಮಾರಿ ರೋಗದ ಉಲ್ಬಣವನ್ನು ತಡೆಯಬಹುದು.

ಹೆಚ್ಚಿನ ಮಾಹಿತಿಗಾಗಿ ಚಿಕ್ಕಮಗಳೂರಿನ ತೋಟಗಾರಿಕೆ ಇಲಾಖೆ ಹಾರ್ಟಿ ಕ್ಲಿನಿಕ್, ವಿಷಯ ತಜ್ಞ ಯಶವಂತ್ ಕುಮಾರ್ ದೂ.ಸಂ: ೦೮೨೬೨-೨೯೫೦೪೩, ೮೬೧೮೧೮೬೫೮೬ ಅಥವಾ ಹೋಬಳಿ ಮಟ್ಟದ ಸಹಾಯಕ ತೋಟಗಾರಿಕೆ ಅಧಿಕಾರಿಗಳನ್ನು ಸಂಪರ್ಕಿಸಿ ಮಾಹಿತಿ ಪಡೆಯಬಹುದಾಗಿದೆ.

Subscribe to our newsletter!

Other related posts

error: Content is protected !!