ಸರಿಯಾಗಿ ಟ್ರಿಪ್‍ಗಳನ್ನು ಮಾಡದಿರುವ ಬಸ್ ವಿರುದ್ಧ ಕಠಿಣ ಕ್ರಮ

 ಸರಿಯಾಗಿ ಟ್ರಿಪ್‍ಗಳನ್ನು ಮಾಡದಿರುವ ಬಸ್ ವಿರುದ್ಧ ಕಠಿಣ ಕ್ರಮ
Share this post

ಮಂಗಳೂರು, ಫೆಬ್ರವರಿ 23, 2021 : ಮಜಲು ವಾಹನಗಳು ಸರಿಯಾಗಿ ಟ್ರಿಪ್‍ಗಳನ್ನು ಮಾಡದಿರುವ ಬಗ್ಗೆ ಹಾಗೂ ಕೊನೆಯ ಟ್ರಿಪ್‍ಗಳನ್ನು ರದ್ದುಗೊಳಿಸಿ ಅನಾನುಕೂಲವಾಗುವ ಬಗ್ಗೆ ಫೆಬ್ರವರಿ 16 ರಂದು ಮಹಾನಗರ ಪಾಲಿಕೆ ಮತ್ತು ಫೆಬ್ರವರಿ 17 ರಂದು ರಸ್ತೆ ಸುರಕ್ಷತಾ ಸಮಿತಿ ವತಿಯಿಂದ ನಡೆದ ಸಭೆಯಲ್ಲಿ ಸಾರ್ವಜನಿಕರಿಂದ ದೂರುಗಳು ಬಂದಿರುತ್ತದೆ.

ಈ ರೀತಿಯ ಉಲ್ಲಂಘನೆಗಳು ಕಂಡುಬಂದಲ್ಲಿ ಯಾವುದೇ ಮರು ನೋಟೀಸ್ ನೀಡದೆ ಮೋಟಾರು ವಾಹನ ಕಾಯ್ದೆಯ ಪ್ರಕಾರ ಕಾನೂನು ಪ್ರಕರಣ ದಾಖಲಿಸಲಾಗುವುದು ಎಂದು ಜಿಲ್ಲಾಧಿಕಾರಿಯವರ ಪರವಾಗಿ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಕಾರ್ಯದರ್ಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Subscribe to our newsletter!

Other related posts

error: Content is protected !!