ವೈಭವದ ಕೊಡಿಯಾಲ್ ತೇರ್

 ವೈಭವದ ಕೊಡಿಯಾಲ್ ತೇರ್
Share this post

ಮಂಗಳೂರು, ಫೆ 19, 2021 : ಶ್ರೀ ವೆಂಕಟರಮಣ ದೇವಸ್ಥಾನದ 200 ನೇ ವರ್ಷದ ಮಂಗಳೂರು ರಥೋತ್ಸವ ಇಂದು ಕಾಶೀ ಮಠಾಧೀಶರಾದ ಶ್ರೀಮದ್ ಸಂಯಮಿಂದ್ರ ತೀರ್ಥ ಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ ವಿಜೃಂಭಣೆಯಿಂದ ಜರಗಿತು.

ರಥ ಸಪ್ತಮಿಯ ದಿನದಂದು ಬೆಳಿಗ್ಗೆ ಶ್ರೀ ದೇವರ ಸನ್ನಿಧಾನದಲ್ಲಿ ಶ್ರೀಗಳವರ ದಿವ್ಯ ಉಪಸ್ಥಿತಿಯಲ್ಲಿ ಮಹಾ ಪ್ರಾರ್ಥನೆ ನಡೆದು ಬಳಿಕ ಪಂಚಾಮೃತ ಅಭಿಷೇಕ ನಡೆಯಿತು. ನಂತರ ಶ್ರೀಗಳವರಿಂದ ಶ್ರೀ ವೀರ ವೆಂಕಟೇಶ ದೇವರಿಗೆ ಶತ ಕಲಶಾಭಿಷೇಕ , ಗಂಗಾಭಿಷೇಕ ನಂತರ ಮಹಾ ಮಂಗಳಾರತಿ ಜರಗಿತು.

ಯಜ್ಞ ಮಂಟಪದಲ್ಲಿ ಮಹಾ ಯಜ್ಞದ ಪೂರ್ಣಾಹುತಿ ಬಳಿಕ ಸರ್ವಾಲಂಕಾರ ಭೂಷಿತ ಶ್ರೀ ವೀರ ವೆಂಕಟೇಶ ಹಾಗೂ ಶ್ರೀನಿವಾಸ ದೇವರು ಪುಷ್ಪಾಲಂಕೃತ ಸ್ವರ್ಣ ಪಲ್ಲಕಿಯಲ್ಲಿ ವಿರಾಜಮಾನರಾಗಿ ಭವ್ಯ ಬ್ರಹ್ಮ ರಥದಲ್ಲಿ ರಥಾರೂಢರಾಗಿ ನೆರೆದ ಸಾವಿರಾರು ಭಜಕರ ಸಮ್ಮುಖದಲ್ಲಿ ಮಂಗಳೂರು ರಥೋತ್ಸವ ಸಮಾಪನ ಗೊಂಡಿತು.

ಚಿತ್ರ : ಮಂಜು ನೀರೇಶ್ವಾಲ್ಯ

Subscribe to our newsletter!

Other related posts

error: Content is protected !!