‘ನಿರಾಮಯ’ ಯೋಜನೆಯಡಿ ಅರ್ಜಿ ಆಹ್ವಾನ

 ‘ನಿರಾಮಯ’ ಯೋಜನೆಯಡಿ ಅರ್ಜಿ ಆಹ್ವಾನ
Share this post

ಮಂಗಳೂರು, ಫೆಬ್ರವರಿ, 19, 2021: ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆಯಿಂದ ಅನುಷ್ಠಾನಗೊಂಡಿರುವ ನ್ಯಾಷನಲ್ ಟ್ರಸ್ಟ್ ಕಾಯ್ದೆ ಅಡಿ ಬರುವ ಆಟಿಸಂ, ಸೆರೆಬ್ರಲ್ ಪಾಲ್ಸಿ, ಬುದ್ಧಿ ಮಾಂದ್ಯತೆ (ಮೆಂಟಲ್ ರಿಟಾರ್ಡೇಶನ್) ಹಾಗೂ ಬಹು ವೈಕಲ್ಯತೆ (ಮಲ್ಟಿಪಲ್ ಡಿಸೆಬಿಲಿಟಿ) ಹೊಂದಿರುವ ವ್ಯಕ್ತಿಗಳಿಗೆ ಕೇಂದ್ರ ಸರ್ಕಾರವು ‘ನಿರಾಮಯ’ ಎಂಬ ಆರೋಗ್ಯ ವಿಮಾ ಯೋಜನೆ ಹಾಗೂ ಕಾನೂನುಬದ್ಧ ಪೋಷಕರ ನೇಮಕಾತಿ ಯೋಜನೆಯಡಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಅವುಗಳನ್ನು ಅನುಷ್ಠಾನಗೊಳಿಸಲು ನೇಮಿಸಿರುವ ಸ್ವಯಂಸೇವಾ ಸಂಸ್ಥೆಯಾದ ಸೇವಾ ಭಾರತಿ(ರಿ), ಮಂಗಳೂರು ಮೊಬೈಲ್ ಸಂಖ್ಯೆ 9036493397 ಹಾಗೂ ದೂರವಾಣಿ ಸಂಖ್ಯೆ:0824-2458173 ಅಥವಾ ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿಯವರ ಕಛೇರಿಯನ್ನು  ಸಂಪರ್ಕಿಸುವಂತೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Subscribe to our newsletter!

Other related posts

error: Content is protected !!