ಮೆಸ್ಕಾಂ ಬಿಲ್ ಗಳು ಇಲಾಖಾ ಅಂಚೆ ಕಛೇರಿಗಳಲ್ಲಿ ಆನ್ ಲೈನ್ ತಂತ್ರಜ್ಞಾನದಡಿಯಲ್ಲಿಸ್ವೀಕಾರ
ಮಂಗಳೂರು, ಫೆ 17, 2021: ಕರ್ನಾಟಕ ರಾಜ್ಯದಲ್ಲಿ 5 ವಿದ್ಯುತ್ ನಿಗಮಗಳು ಅಂದರೆ MESCOM, BESCOM, CHESCOM, HESCOM ಮತ್ತು GESCOM ಕಾರ್ಯ ನಿರ್ವಹಿಸುತ್ತಿದ್ದು, ಇದೀಗ ರಾಜ್ಯದಲ್ಲೇ ಮೊದಲ ಬಾರಿಗೆ ಪೋಸ್ಟ್ ಮಾಸ್ಟ್ ರ್ ಜೆನೆರಲ್, ದಕ್ಷಿಣ ಕರ್ನಾಟಕ ವಲಯ ಮತ್ತು ಮೆಸ್ಕಾಂ ನೊಂದಿಗಿನ ಒಡಂಬಡಿಕೆಯಂತೆ ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿ ಅಂಚೆ ಕಛೇರಿಯ ಮೂಲಕ ಆನ್ ಲೈನ್ ತಂತ್ರಜ್ಞಾನದಡಿಯಲ್ಲಿ ವಿದ್ಯುತ್ ಬಿಲ್ ಗಳನ್ನು ಪಾವತಿಸಲು ವಿಶೇಷ ವ್ಯವಸ್ಥೆ ಕಲ್ಪಿಸಲಾಗಿದೆ.
ಇದುವರೆಗೆ ಮೆಸ್ಕಾಂ ಬಿಲ್ಲುಗಳನ್ನು ಮಂಗಳೂರು, ಪುತ್ತೂರು, ಉಡುಪಿ, ಶಿವಮೊಗ್ಗ ಹಾಗೂ ಚಿಕ್ಕಮಗಳೂರಿನ ಅಂಚೆ ಕಛೇರಿಗಳಲ್ಲಿ ಆಫ್ ಲೈನ್ ಮುಖಾಂತರ ಆರ್ ಆರ್ ಸಂಖ್ಯೆ ಹಾಗೂ ಮೆಸ್ಕಾಂ ಸಬ್ ಡಿವಿಜನ್ ಕೊಡ್ ಆಧಾರದಲ್ಲಿ ಸ್ವೀಕರಿಸಲಾಗುತ್ತಿತ್ತು. ಈ ಕಾರ್ಯವಿಧಾನದಲ್ಲಿ ಎಲ್ಲಾ ಅಂಚೆ ಕಛೇರಿಗಳಲ್ಲಿ ಬುಕ್ ಮಾಡಲಾದ ಮೆಸ್ಕಾಂ ಬಿಲ್ ಗಳ ವಿವರಗಳನ್ನು ಅಂಚೆ ಇಲಾಖೆಯು ಮರುದಿನ ಮೆಸ್ಕಾಂ ಇಲಾಖೆಗೆ ನೀಡುತ್ತಿತ್ತು. ಇದರಿಂದಾಗಿ ಮೆಸ್ಕಾಂ ಬಿಲ್ಲುಗಳ ಮೊತ್ತವನ್ನು ಗ್ರಾಹಕರ ಮೀಟರ್ ಸಂಖ್ಯೆಗೆ ಹೊಂದಿಸಲು ಒಂದು ದಿನ ವಿಳಂಬವಾಗುತ್ತಿತ್ತು. ಹಾಗೂ ಬಿಲ್ಲಿನಲ್ಲಿ ನಮೂದಾಗಿರುವ ಆರ್ ಆರ್ ಸಂಖ್ಯೆ ಅಥವಾ ಮೆಸ್ಕಾಂ ಸಬ್ ಡಿವಿಜನ್ ಕೊಡ್ ಮಾಸಿ ಹೊಗಿದ್ದಲ್ಲಿ ತಪ್ಪಾದ ಆರ್ ಆರ್ ಸಂಖ್ಯೆಗೆ ಅಥವಾ ತಪ್ಪಾದ ಮೆಸ್ಕಾಂ ಸಬ್ ಡಿವಿಜನ್ ಗೆ ಪಾವತಿಯಾಗುವ ಸಾಧ್ಯತೆಯಿತ್ತು.
ಈ ಪ್ರಕ್ರಿಯೆಯಲ್ಲಿ ಇರುವ ನ್ಯೂನ್ಯತೆಗಳನ್ನು ಹೊಗಲಾಡಿಸಲು ಮಂಗಳೂರು ಅಂಚೆ ವಿಭಾಗವು ಮುಂದಾಗಿದ್ದು, ಇನ್ನು ಮುಂದೆ ಎಲ್ಲಾ ಇಲಾಖಾ ಅಂಚೆ ಕಛೇರಿಗಳಲ್ಲಿ ಸ್ವೀಕರಿಸಲಾಗುವ ವಿದ್ಯುತ್ ಬಿಲ್ ಗಳನ್ನು/ASD(ಸೆಕ್ಯುರಿಟಿ ಡೆಪಾಸಿಟ್) ಬಿಲ್ ಗಳನ್ನು API ತಂತ್ರಜ್ಞಾನವನ್ನು ಅಳವಡಿಸಿ ಆನ್ ಲೈನ್ ಮುಖಾಂತರ ಸ್ವೀಕರಿಸಲಾಗುವುದು.
ಈ ತಂತ್ರಜ್ಞಾನದ ಮೂಲಕ ಇಲಾಖಾ ಅಂಚೆ ಕಛೇರಿಗಳಲ್ಲಿ ಸ್ವೀಕರಿಸಲಾದ ಮೆಸ್ಕಾಂ/ASD ಬಿಲ್ಲ್ ನ ಮಾಹಿತಿಯು ತತ್ ಕ್ಷಣದಲ್ಲಿ ಮೆಸ್ಕಾಂ ಸರ್ವರ್ ಗೆ ತಲುಪಿ ಆಯಾಯಾ ಆರ್ ಆರ್ ಸಂಖ್ಯೆಗೆ ಕೂಡಲೇ ಅಪ್ ಡೇಟ್ ಗೊಳ್ಳುವುದು.
ಆದ ಕಾರಣ ಇನ್ನು ಮುಂದೆ ಗ್ರಾಹಕರು ಏನೂ ಹಿಂಜರಿಕೆಯಿಲ್ಲದೆ ತಮ್ಮ ವಿದ್ಯುತ್ ಬಿಲ್/ASD ಬಿಲ್ ಗಳನ್ನು ಯಾವುದೇ ಇಲಾಖಾ ಅಂಚೆ ಕಛೇರಿಗಳಲ್ಲಿ ಪಾವತಿಸಬಹುದು ಎಂದು ಮಂಗಳೂರು ವಿಭಾಗದ ಹಿರಿಯ ಅ೦ಚೆ ಅಧೀಕ್ಷಕರು ತಿಳಿಸಿದ್ದಾರೆ.
ಈ ಮೊದಲು ಉಡುಪಿ ಮೆಸ್ಕಾಂ ವಿಭಾಗಕ್ಕೆ ಸಂಬಂಧ ಪಟ್ಟ ಬಿಲ್ಲ್ ಗಳನ್ನು ಉಡುಪಿ ಅಂಚೆ ವಿಭಾಗದ ಅಂಚೆ ಕಛೇರಿಗಳಲ್ಲಿ ಮಾತ್ರ ಪಾವತಿಸಬಹುದಾಗಿದ್ದು, ಬೇರೆ (ಉದಾ: ಮಂಗಳೂರಿನ ಅಥವಾ ಪುತ್ತೂರಿನ) ಅಂಚೆ ಕಛೇರಿಗಳಲ್ಲಿ ಪಾವತಿಸಲಾಗುತ್ತಿರಲಿಲ್ಲ. ಹಾಗೆಯೇ ಪುತ್ತೂರು ಅಂಚೆ ವಿಭಾಗದ ವ್ಯಾಪ್ತಿಯ ಮೆಸ್ಕಾಂ ಬಿಲ್ ಗಳನ್ನು ಮಂಗಳೂರಿನ ಅಂಚೆ ಕಛೇರಿಗಳಲ್ಲಿ ಪಾವತಿಸಲು ಸಾಧ್ಯವಿರಲಿಲ್ಲ. ಆದರೆ, ಈಗ ಯಾವುದೇ ಮೆಸ್ಕಾಂ ವಿಭಾಗಕ್ಕೆ ಸಂಬಂಧ ಪಟ್ಟ ಬಿಲ್ ಗಳನ್ನು ಕರ್ನಾಟಕದ ಯಾವುದೇ ಇಲಾಖಾ ಅಂಚೆ ಕಛೇರಿಗಳಲ್ಲಿ ಯಾವುದೇ ಹೆಚ್ಚುವರಿ ಶುಲ್ಕವಿಲ್ಲದೆ ಪಾವತಿಸಬಹುದು. ಉದಾ: ಚಿಕ್ಕಮಗಳೂರು, ಶಿವಮೊಗ್ಗ, ಪುತ್ತೂರು, ಉಡುಪಿ, ಮಂಗಳೂರಿನ ಮೆಸ್ಕಾಂ ಗ್ರಾಹಕರು ಕರ್ನಾಟಕದ ಯಾವುದೇ ಇಲಾಖಾ ಅಂಚೆ ಕಛೇರಿಯ ಮೂಲಕ ಮೆಸ್ಕಾಂ/ASD ಬಿಲ್ ಪಾವತಿ ಮಾಡಬಹುದು.
ಇದರಿಂದ ಕೆಲಸಕ್ಕಾಗಿ ಪುತ್ತೂರು, ಮಂಗಳೂರು ಉಡುಪಿ ಮಧ್ಯೆ ಓಡಾಡುವ ಗ್ರಾಹಕರು ತಮ್ಮ ಮನೆಯ ಬಿಲ್ ನ್ನು ತಮ್ಮ ಕೆಲಸದ ಕಛೇರಿಯ ಸಮೀಪದ ಅಂಚೆ ಕಛೇರಿಗಳಲ್ಲಿ ಪಾವತಿಸಬಹುದು.
ಈ ಹೊಸ ತಂತ್ರಜ್ಞಾನದ ಪ್ರಯೋಜನಗಳು:
- ಬಿಲ್ ಪಾವತಿಸಲು ಅಂಚೆ ವಿಭಾಗದ ಗಡಿ ಇನ್ನು ಮುಂದೆ ಅನ್ವಯವಾಗುವುದಿಲ್ಲ
- ಮೆಸ್ಕಾಂ ಬಿಲ್ ನ ಪ್ರತಿ ತಾರದೆಯೇ ಕೇವಲ ಬಿಲ್ ನಲ್ಲಿ ನಮೂದಾಗಿರುವ Account number ಅಥವಾ R R number + Location Code ಹೇಳಿ ಬಿಲ್ ಕಟ್ಟಬಹುದು.
- ಉಡುಪಿ/ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಇದುವರೆಗೆ ಅಂಚೆ ಕಛೇರಿಗಳಲ್ಲಿ ಮೆಸ್ಕಾಂ ನ ಸೆಕ್ಯುರಿಟಿ ಡೆಪಾಸಿಟ್(ASD) ಸ್ವೀಕರಿಸುವ ಸೌಲಭ್ಯ ಇರಲಿಲ್ಲ. ಇನ್ನು ಮುಂದೆ ಈ ಸೌಲಭ್ಯ ಅಂಚೆ ಕಛೇರಿಗಳಲ್ಲಿ ಇರಲಿದೆ. ದ. ಕ ಜಿಲ್ಲೆಯಲ್ಲಿ ಇದು ಈಗಾಗಲೇ ಲಭ್ಯವಿದೆ.
ಸದ್ಯಕ್ಕೆ ಈ ಸೇವೆಯು ಎಲ್ಲಾಇಲಾಖಾ ಅಂಚೆ ಕಛೇರಿಗಳಲ್ಲಿ ಲಭ್ಯವಿದ್ದು, ಶಾಖಾ ಅಂಚೆ ಕಛೇರಿಗಳಲ್ಲಿ ಈ ಮೊದಲಿನ ಆಫ್ ಲೈನ್ ತಂತ್ರಜ್ಞಾನದಡಿಯಲ್ಲೇ ಮೆಸ್ಕಾಂ/ASD ಬಿಲ್ ಗಳನ್ನು ಸ್ವೀಕರಿಸಲಾಗುವುದು.
ಈ ಆನ್ ಲೈನ್ ಸೇವೆಯನ್ನು ಶೀಘ್ರದಲ್ಲೇ ಎಲ್ಲಾ ಶಾಖಾ ಅಂಚೆ ಕಛೇರಿಗಳಲ್ಲೂ ಪ್ರಾರಂಭಿಸಲಾಗುವುದು.