ಅವಕಾಶಗಳು ಹರಿಯುವ ನದಿಯಂತೆ: ರೆ.ಫಾ ಬೇಸಿಲ್ ವಾಸ್

 ಅವಕಾಶಗಳು ಹರಿಯುವ ನದಿಯಂತೆ: ರೆ.ಫಾ ಬೇಸಿಲ್ ವಾಸ್
Share this post
sacred heart college madanthyar

ಮಡಂತ್ಯಾರ್ , ಫೆ 05, 2021: “ಅವಕಾಶಗಳು ಹರಿಯುವ ನದಿಯಂತೆ ಅದನ್ನು ಸರಿಯಾದ ಸಮಯದಲ್ಲಿ ಸರಿಯಾಗಿ ಉಪಯೋಗಿಸುವ ಕಲೆ ವಿದ್ಯಾರ್ಥಿಗಳಲ್ಲಿ ಮೂಡಬೇಕು,” ಎಂದು ಸೇಕ್ರೆಡ್ ಹಾರ್ಟ್ ವಿದ್ಯಾಸಂಸ್ಥೆಗಳ ಸಂಚಾಲಕರಾದ ರೆ. ಫಾ ಬೇಸಿಲ್ ವಾಸ್ ಹೇಳಿದರು.

ಅವರು ಸೇಕ್ರೆಡ್ ಹಾರ್ಟ್ ಕಾಲೇಜಿನ ಸ್ನಾತಕೋತ್ತರ ವಾಣಿಜ್ಯ ವಿಭಾಗ ಆಯೋಜಿಸಿದ “ಸ್ವಾಗತಂ 2K21” ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಪುಸ್ತಕ ಓದಿದರೆ ಶಿಕ್ಷಣ ಪರಿಪೂರ್ಣವಾಗದು ಬದಲು ಉತ್ತಮ ಮೌಲ್ಯಗಳನ್ನು ಕಲಿತು ಸಮಾಜದ ಹಿತವನ್ನು ಕಾಪಾಡುವ ಆದರ್ಶ ನಾಗರಿಕನಾಗಬೇಕು ಎಂದು ಹೊಸದಾಗಿ ಸೇರ್ಪಡೆಗೊಂಡ ವಿದ್ಯಾರ್ಥಿಗಳನ್ನು ಪ್ರೇರೇಪಿಸಿದರು.

sacred heart college madanthyar

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ ಜೋಸೆಫ್ ಎನ್ ಎಮ್, ಶಿಕ್ಷಣ ಎಂಬುವುದು ಸಾಗರದಂತೆ, ಕಲಿಯುವುದು ಬಹಳ ಇದೆ, ಕಲಿತದ್ದನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಹಾಗೂ ಸರಿಯಾದ ರೀತಿಯಲ್ಲಿ ಸದುಪಯೋಗಪಡಿಸಿಕೊಳ್ಳಬೇಕು ಎಂದು ಹೇಳಿದರು.

ದ್ವಿತೀಯ ಎಂ ಕಾಮ್ ವಿದ್ಯಾರ್ಥಿಗಳು ಪ್ರಾರ್ಥನ ಗೀತೆ ಹಾಡಿದರು, ಪಿಜಿ ವಾಣಿಜ್ಯ ವಿಭಾಗದ ಉಪನ್ಯಾಸಕಿ ಶ್ರೀಮತಿ ಪಾವನ ರೈ ಸ್ವಾಗತಿಸಿ ಪ್ರಸ್ತಾವನೆಗೈದರು. ಫೈನಲ್ ಎಂ ಕಾಮ್ ವಿದ್ಯಾರ್ಥಿನಿ ಪ್ರಿಯಾ ಮ್ಯಾಥ್ಯೂ ವಂದಿಸಿದರು.

ವರದಿ
ಶ್ರೇಯಸ್ ಅಂತರ
ಫೈನಲ್ ಎಂ ಕಾಮ್
ಸೇಕ್ರೆಡ್ ಹಾರ್ಟ್ ಕಾಲೇಜು ಮಡಂತ್ಯಾರು

Also read:

Subscribe to our newsletter!

Other related posts

error: Content is protected !!