ಉಡುಪಿ ಶ್ರೀಕೃಷ್ಣ ಮಠ: ಉಚಿತ ಪ್ರಾಣಯೋಗ ತರಬೇತಿ ಶಿಬಿರ ಉದ್ಘಾಟನೆ

Sri Eeshapriya Teertha Sripadaru inaugurating the free Pranayoga Training Camp at Udupi Sri Krishna Matha today. The event is being organised by Paryaya Sri Adamaru Matha and Patanjali Yoga Samithi, Udupi. Yoga camp is held daily between 5.45 am and 7 am.

ಉಡುಪಿ ಫೆ 02, 2021 : ಪರ್ಯಾಯ ಶ್ರೀ ಅದಮಾರು ಮಠ ಶ್ರೀಕೃಷ್ಣ ಮಠ ಹಾಗೂ ಪತಂಜಲಿ ಯೋಗ ಸಮಿತಿ ಉಡುಪಿ ಇದರ ಜಂಟಿ ಆಶ್ರಯದಲ್ಲಿ ನಡೆಯುವ ಉಚಿತ ಪ್ರಾಣಯೋಗ ತರಬೇತಿ ಶಿಬಿರವನ್ನು ಪರ್ಯಾಯ ಶ್ರೀಈಶಪ್ರಿಯತೀರ್ಥ ಶ್ರೀಪಾದರು ದೀಪ ಪ್ರಜ್ವಲಿಸಿ ಉದ್ಘಾಟಿಸಿದರು.
ಶಿಬಿರವು ಪ್ರತಿನಿತ್ಯ ಬೆಳಿಗ್ಗೆ 5:45 ರಿಂದ 7:00 ವರೆಗೆ ನಡೆಯುವುದು.
“ಎಲ್ಲರೂ ಜೀವನದಲ್ಲಿ ಯೋಗಾಭ್ಯಾಸವನ್ನು ನಿರಂತರವಾಗಿ ಮಾಡುವುದರಿಂದ ಮನಸಿನ ಹತೋಟಿ , ಕಾಯಿಲೆಗಳ ನಿಯಂತ್ರಣ, ಒತ್ತಡ ,ಅಶಾಂತಿ ಯಿಂದ ಮುಕ್ತಿ ಪಡೆಯಲು ಸಾಧ್ಯ. ಉತ್ತಮ ಆರೋಗ್ಯಕ್ಕಾಗಿ ಯೋಗ, ಪ್ರಾಣಾಯಾಮ ಅಳವಡಿಸಿಕೊಳ್ಳಿ,” ಎಂದು ಶ್ರೀಗಳು ಶುಭಹಾರೈಸಿದರು.
ವೇದಿಕೆಯಲ್ಲಿ ವಿಶ್ವನಾಥ್ ಭಟ್, ಲೀಲಾ ಅಮೀನ್, ಜಗದೀಶ್ ಉಪಸ್ಥಿತರಿದ್ದರು.
ಯೋಗ ಗುರು ಬೇರೊಳ್ಳಿ ನಾಗರಾಜ್ ಶೇಟ್ ಶಿಬಿರಾರ್ಥಿಗಳಿಗೆ ವಿವಿಧ ರೀತಿಯ ಯೋಗ ತರಬೇತಿ ನೀಡಿದರು