ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಪರ್ಯಾಯ ಪಂಚಶತಮಾನೋತ್ಸವ ಸಂಭ್ರಮ

 ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಪರ್ಯಾಯ ಪಂಚಶತಮಾನೋತ್ಸವ ಸಂಭ್ರಮ
Share this post
ಶ್ರೀಕೃಷ್ಣಮಠದ ರಾಜಾಂಗಣದ ನರಹರಿತೀರ್ಥ ವೇದಿಕೆಯಲ್ಲಿ,ಪರ್ಯಾಯ ಶ್ರೀ ಅದಮಾರು ಮಠದ ಆಶ್ರಯದಲ್ಲಿ, “ಪರ್ಯಾಯಪಂಚಶತಮಾನೋತ್ಸವ”ದ ಕಾರ್ಯಕ್ರಮದಲ್ಲಿ ಪರ್ಯಾಯ ಪೀಠಾಧೀಶರಾದ ಶ್ರೀಈಶಪ್ರಿಯತೀರ್ಥ ಶ್ರೀಪಾದರು ಹಾಗೂ ಸೋದೆ ಮಠಾಧೀಶರಾದ ಶ್ರೀವಿಶ್ವವಲ್ಲಭತೀರ್ಥ ಶ್ರೀಪಾದರು ಅನುಗ್ರಹ ಸಂದೇಶ ನೀಡಿದರು.ಈ ಸಂದರ್ಭದಲ್ಲಿ ಕರ್ನಾಟಕ ಕರಕುಶಲ ಮಂಡಳಿ ಅಧ್ಯಕ್ಷರಾದ ಡಾ.ಬೇಳೂರು ರಾಘವೇಂದ್ರ ಶೆಟ್ಟಿ,ಭೀಮ ಜ್ಯೂವೆಲ್ಲರ್ಸ್ ನ ವಿಷ್ಣುಕಿರಣ್ ರವರು ಉಪಸ್ಥಿತರಿದ್ದರು. ಉಡುಪಿಯ ಹಿರಿಯ ದಸ್ತಾವೇಜು ಬರಹಗಾರರಾದ ರತ್ನ ಕುಮಾರ್,ವಿಮರ್ಶಕರಾದ ಮುರಳೀಧರ ಉಪಾಧ್ಯ,ಕಲಾಸಂಘಟಕರಾದ ಮುರಳಿ ಕಡೆಕಾರ್,ತೋಟದಮನೆ ದಿವಾಕರ ಶೆಟ್ಟಿ ಮತ್ತು ಉಡುಪಿ ಜಿಲ್ಲಾ ಯುವ ಬ್ರಾಹ್ಮಣ ಪರಿಷದ್(ರಿ) ಇವರುಗಳನ್ನು ಪರ್ಯಾಯ ಶ್ರೀಪಾದರು ಸನ್ಮಾನಿಸಿದರು.
 “ಪರ್ಯಾಯಪಂಚಶತಮಾನೋತ್ಸವ”ದ ಕಾರ್ಯಕ್ರಮದಲ್ಲಿ ವಿದ್ವಾನ್ ರಾಘವೇಂದ್ರ ಪುರಾಣಿಕ್ ಹಾಗೂ  ರತ್ನ ಕುಮಾರ್ ಉಡುಪಿ ಇವರು ಶಿರೂರು ಮಠ ಮತ್ತು ಸೋದೆ ವಾದಿರಾಜ ಮಠದ ಪರಂಪರೆಯ ಬಗ್ಗೆ ಮತ್ತು ಶಿರೂರು ಮಠ ಮತ್ತು ಸೋದೆ ವಾದಿರಾಜ ಮಠದ ಪರ್ಯಾಯ ನೆನಪಿನ ಕುರಿತು ಧಾರ್ಮಿಕ ಉಪನ್ಯಾಸ ಗೋಷ್ಠಿಯನ್ನು ನಡೆಸಿದರು.ಪರ್ಯಾಯ ಪೀಠಾಧೀಶರಾದ ಶ್ರೀಈಶಪ್ರಿಯತೀರ್ಥ ಶ್ರೀಪಾದರು ಹಾಗೂ ಸೋದೆ ವಾದಿರಾಜ ಮಠಾಧೀಶರಾದ ಶ್ರೀವಿಶ್ವವಲ್ಲಭತೀರ್ಥ ಶ್ರೀಪಾದರು ಆಶೀರ್ವಚನ ನೀಡಿದರು.
ಶ್ರೀಕೃಷ್ಣಮಠದ ರಾಜಾಂಗಣದ ನರಹರಿತೀರ್ಥ ವೇದಿಕೆಯಲ್ಲಿ,ಪರ್ಯಾಯ ಶ್ರೀ ಅದಮಾರು ಮಠದ ಆಶ್ರಯದಲ್ಲಿ, “ಪರ್ಯಾಯಪಂಚಶತಮಾನೋತ್ಸವ”ದ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ನಡಿಯೋಣ ಪ್ರಖ್ಯಾತ ಕಲಾವಿದರಿಂದ “ಸಮಾರಾ ಸೌಗಂಧಿಕೆ” ಪ್ರಸಂಗದ ಬಡಗುತಿಟ್ಟು ಯಕ್ಷಗಾನ ನಡೆಯಿತು.

Subscribe to our newsletter!

Other related posts

error: Content is protected !!