ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಪರ್ಯಾಯ ಪಂಚಶತಮಾನೋತ್ಸವ


ಕರ್ನಾಟಕ ಬ್ಯಾಂಕಿನ ಆಡಳಿತ ನಿರ್ದೇಶಕರಾದ ಮಹಾಬಲೇಶ್ವರ ಎಂ ಎಸ್, ಕಟೀಲು ಕ್ಷೇತ್ರದ ಅನುವಂಶಿಕ ಮೊಕ್ತೇಸರರು ಮತ್ತು ಅರ್ಚಕರಾದ ವಾಸುದೇವ ಅಸ್ರಣ್ಣ ಉಪಸ್ಥಿತರಿದ್ದರು.ಕಟೀಲು ಕ್ಷೇತ್ರದ ಅನುವಂಶಿಕ ಅರ್ಚಕರಾದ ವಿ.ಹರಿನಾರಾಯಣ ಅಸ್ರಣ್ಣರು ಪ್ರಸ್ತಾವನೆಗೈದರು. ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಉಡುಪಿಯ ಆರ್.ಎಸ್.ಎಸ್ ನ ಜಿಲ್ಲಾ ಸಂಚಾಲಕರಾದ ನಾರಾಯಣ ಶೆಣೈ,ಗಿರಿಬಳಗ ಕುಂಜಾರುಗಿರಿ,ಕುಚ್ಚೂರಿನ ಶಾಂತಿನಿಕೇತನ ಯುವವೃಂದ,ಉಡುಪಿ ಜನರಲ್ ಕ್ರಾಫ್ಟರ್ಸ್ ನ ಗಣೇಶ್ ರಾವ್,ಗುಂಡಿಬೈಲು ಶ್ರೀಪತಿ ಭಟ್,ಹೆಬ್ರಿಯ ವಿವೇಕಾನಂದ ಯುವ ವೇದಿಕೆ,ಚಾರ,ಉಡುಪಿಯ ರಾಜಸ್ಥಾನ ಸಮಾಜ ಬಾಂಧವರ ಸಂಘ,ಬಜ್ಪೆ ರಾಘವೇಂದ್ರ ಆಚಾರ್ಯ,ಕುತ್ಯಾರು ಧೀರಜ್ ಎಸ್.ಶೆಟ್ಟಿ ಇವರುಗಳನ್ನು ಪರ್ಯಾಯ ಶ್ರೀಪಾದರು ಸನ್ಮಾನಿಸಿದರು.




