ವಿವಿಧ ವೃತ್ತಿಪರಕೋರ್ಸ್ -ಅರ್ಜಿಆಹ್ವಾನ
ಮಂಗಳೂರು ಜನವರಿ 12 2021: ಎನ್.ಸಿ.ವಿ.ಟಿ ಸಂಯೋಜನೆ ಪಡೆದ ವಿವಿಧ ವೃತ್ತಿಪರ ಕೋರ್ಸ್ಗಳು ಸರ್ಕಾರಿ ಮಹಿಳಾ ಕೈಗಾರಿಕಾ ತರಬೇತಿ ಸಂಸ್ಥೆ, ಕದ್ರಿಹಿಲ್ಸ್, ಮಂಗಳೂರು ಇಲ್ಲಿ ಖಾಲಿ ಇದ್ದು, ಪ್ರವೇಶ ಪ್ರಕ್ರಿಯೆಯನ್ನು ಜನವರಿ 16 ರವರೆಗೆ ವಿಸ್ತರಿಸಲಾಗಿದೆ.
ಸಿ.ಒ.ಪಿ.ಎ. (ಕಂಪ್ಯೂಟರ್ ಅಪರೇಟರ್ ಆಂಡ್ ಪ್ರೋಗ್ರಾಂಮಿಂಗ್ ಅಸಿಸ್ಟೆಂಟ್) ತರಬೇತಿ ಅವಧಿ-1 ವರ್ಷ, ಹಾಗೂ ಎಲೆಕ್ಟ್ರಾನಿಕ್ ಮೆಕ್ಯಾನಿಕ್, ಎಲೆಕ್ಟ್ರಿಷಿಯನ್, ಎಂ.ಆರ್.ಎ.ಸಿ ಕೋರ್ಸ್ಗಳಿಗೆ ತರಬೇತಿ ಅವಧಿ-2 ವರ್ಷ, ಅರ್ಹ ಪುರುಷ ಹಾಗೂ ಮಹಿಳಾ ಅಭ್ಯರ್ಥಿಗಳು ನೇರವಾಗಿ ಸಂಸ್ಥೆಗೆ ಹಾಜರಾಗಿ ಅರ್ಜಿ ಸಲ್ಲಿಸಿ ಪ್ರವೇಶ ಪಡೆಯಬಹುದಾಗಿದೆ.
ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 0824-2216360 / 9845226485 ನ್ನು ಸಂಪರ್ಕಿಸುವಂತೆ ಮಂಗಳೂರು ಸರ್ಕಾರಿ ಮಹಿಳಾ ಐ.ಟಿ.ಐ. ನ ಪ್ರಾಂಶುಪಾಲರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.