ಮಿಫ್ಟ್ ಕಾಲೇಜಿನಲ್ಲಿ ಸ್ಟೈಫಂಡ್ ಸಹಿತ ಉಚಿತ ಟೈಲರಿಂಗ್ ತರಬೇತಿ
ಮಂಗಳೂರು, ಜನವರಿ 03, 2021: ಮಂಗಳೂರಿನ ಹೆಸರಾಂತ ಫ್ಯಾಷನ್ ಡಿಸೈನಿಂಗ್ ಸಂಸ್ಥೆ- ಮಿಫ್ಟ್ (Mangalore Institute of Fashion Technology) ಕಾಲೇಜು ಜನವರಿ ಎರಡನೇ ವಾರದಲ್ಲಿ ಸ್ಟೈಫಂಡ್ ಸಹಿತ 45 ದಿನಗಳ ಉಚಿತ ತರಬೇತಿ ನೀಡಲಿದೆ.
ಕಳೆದ 15 ವರ್ಷಗಳಿಂದ ಮಿಫ್ಟ್ ಕಾಲೇಜು, ವಿವಿಧ ಸರ್ಕಾರಿ ಇಲಾಖೆಗಳ ನೇತೃತ್ವದಲ್ಲಿ ಉಚಿತವಾಗಿ ಹೊಲಿಗೆ ತರಬೇತಿ ನೀಡಿ ಹಲವು ಸಣ್ಣ ಉದ್ದಿಮೆದಾರರನ್ನು ಮತ್ತು ಹಲವರಿಗೆ ಉದ್ಯೋಗ ಅವಕಾಶವನ್ನು ಕಲ್ಪಿಸಿದೆ.
“ಕರ್ನಾಟಕ ರಾಜ್ಯ ಸರ್ಕಾರದ ಜವಳಿ ಮತ್ತು ಕೈ ಮಗ್ಗ ಇಲಾಖೆ ನಡೆಸುವ ತರಬೇತಿಯನ್ನೂ ನಮ್ಮ ಸಂಸ್ಥೆ ನೀಡುತ್ತಿದೆ. ಕೊರೊನಾ ಸಮಸ್ಯೆ ಯಿಂದಾಗಿ ಕಳೆದ ವರ್ಷದ ತರಬೇತಿ ನಿಲುಗಡೆಯಾಗಿತ್ತು. ಇದೀಗ ಹೊಸ ವರ್ಷದ ಹೊಸ ಆಶಯದೊಂದಿಗೆ ಮತ್ತೆ ತರಬೇತಿ ಪ್ರಾರಂಭವಾಗಿದೆ,” ಎಂದು ಮಿಫ್ಟ್ ನಿರ್ದೇಶಕ ಎಂ ಜಿ ಹೆಗಡೆ ತಿಳಿಸಿದ್ದಾರೆ.
35 ವರ್ಷದೊಳಗಿನ ಮಹಿಳೆ/ ಪುರುಷರು, 7 ನೇ ತರಗತಿ ಪಾಸಾಗಿರುವವರು ಅರ್ಜಿ ಸಲ್ಲಿಸಬಹುದು. ಜನವರಿ ೨ನೇ ವಾರದಲ್ಲಿ rs 3500 ಸ್ಟೈಫಂಡ್ ಸಹಿತ 45 ದಿನಗಳ ಉಚಿತ ತರಬೇತಿ. ಎಸ್ ಸಿ/ ಎಸ್ ಟಿ ಅಭ್ಯರ್ಥಿಗಳಿಗೆ ಒಟ್ಟೂ 8 ಸೀಟುಗಳನ್ನು ಕಾದಿರಸಲಾಗಿದೆ.
ಆಸಕ್ತರು ಮಿಫ್ಟ್ ಕಾಲೇಜು , ಕೆ ಎಂ ಸಿ ಆಸ್ಪತ್ರೆ ಎದುರು , ಅತ್ತಾವರ , ಮಂಗಳೂರು.(ದೂರವಾಣಿ ಸಂಖ್ಯೆ 08242448897, 8951097991 ಸಂಪರ್ಕಿಸಬಹುದು.)’
8951097991
ಕೊವಿಡ್ ನಿಯಮಗಳನ್ನು ಪಾಲಿಸಲಾಗುವುದು. ಅಭ್ಯರ್ಥಿಗಳು ಕೂಡಾ ಕಡ್ಡಾಯ ನಿಯಮ ಪಾಲಿಸತಕ್ಕದ್ದು ಎಂದು ಎಂ ಜಿ ಹೆಗಡೆ ತಿಳಿಸಿದ್ದಾರೆ.