ಆರೋಗ್ಯ ಇಲಾಖೆಯಲ್ಲಿ ಗುತ್ತಿಗೆ ಆಧಾರದಲ್ಲಿ ನೇಮಕ
ಉಡುಪಿ, ಜ 03 2021: ಪ್ರಸಕ್ತ ಸಾಲಿನಲ್ಲಿ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿಯಲ್ಲಿ ರಕ್ತನಿಧಿ ಕೇಂದ್ರಗಳಿಗೆ ಹೊಸದಾಗಿ ಅನುಮೋದನೆಯಾಗಿರುವ ಶುಶ್ರೂಷಕರ (01) ಗ್ರೂಪ್- ಡಿ (01) ಹುದ್ದೆಗೆ ಆಸಕ್ತರು ಸಂದರ್ಶನಕ್ಕೆ ಹಾಜರಾಗಬಹುದು.
ಶುಶ್ರೂಷಕರ ಹುದ್ದೆಗೆ: ಅಂಗೀಕೃತ ವಿಶ್ವವಿದ್ಯಾನಿಲಯದ ಮಾನ್ಯತೆ ಪಡೆದ ಸಂಸ್ಥೆಯಿಂದ 3 ವರ್ಷ ಅಥವಾ ಅದಕ್ಕಿಂತ ಅಧಿಕ ಅವಧಿಯ ನರ್ಸಿಂಗ್ ಪಾಸಾದ ಪ್ರಮಾಣ ಪತ್ರ ಹಾಗೂ 2 ವರ್ಷ ರಕ್ತನಿಧಿ ಕೇಂದ್ರದಲ್ಲಿ ಕೆಲಸ ಮಾಡಿದ ಅನುಭವ ಹೊಂದಿರಬೇಕು, ಅವರಿಗೆ ಮಾಸಿಕ 11,500 ರೂ. ವೇತನ ನೀಡಲಾಗುವುದು.
ಗ್ರೂಪ್- ಡಿ (01) ಹುದ್ದೆಗೆ: ಎಸ್.ಎಸ್.ಎಲ್.ಸಿ ಉತ್ತೀರ್ಣರಾಗಿರಬೇಕು, ಅವರಿಗೆ ಮಾಸಿಕ 8,000 ರೂ. ವೇತನ ನೀಡಲಾಗುವುದು.
ಈ ಎರಡು ಹುದ್ದೆಗಳನ್ನು ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಲು ಜನವರಿ 8 ರಂದು ಬೆಳಗ್ಗೆ 10.30 ರಿಂದ ಉಡುಪಿಯ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿಯಲ್ಲಿ ಸಂದರ್ಶನ ನಡೆಯಲಿದ್ದು, ಅರ್ಹ ಅಭ್ಯರ್ಥಿಗಳು ಶೈಕ್ಷಣಿಕ ಮೂಲ ದಾಖಲೆಗಳೊಂದಿಗೆ ಸಂದರ್ಶನಕ್ಕೆ ಹಾಜರಾಗುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.