ಉಡುಪಿ: ಡಿ.28 ರಂದು ಪಿಂಚಣಿ ಅದಾಲತ್

 ಉಡುಪಿ: ಡಿ.28 ರಂದು ಪಿಂಚಣಿ ಅದಾಲತ್
Share this post

ಉಡುಪಿ, ಡಿಸೆಂಬರ್ 23, 2020: ಕರ್ನಾಟಕ ಸರ್ಕಾರವು ಪಿಂಚಣಿದಾರರಿಗೆ ವಿವಿಧ 13 ಸಾರ್ವಜನಿಕ ಬ್ಯಾಂಕುಗಳಲ್ಲಿ ಪಿಂಚಣಿಯನ್ನು ಸಂದಾಯ ಮಾಡುತ್ತಿದ್ದು, ಅದನ್ನು ನಾಲ್ಕು ಬ್ಯಾಂಕುಗಳಾದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಕೆನರಾ ಬ್ಯಾಂಕ್, ಯೂನಿಯನ್ ಬ್ಯಾಂಕ್, ಬ್ಯಾಂಕ್ ಆಫ್ ಬರೋಡಗಳಿಗೆ ಸೀಮಿತಗೊಳಿಸಿದೆ.

ಬೇರೆ ಬ್ಯಾಂಕುಗಳಲ್ಲಿರುವ ಪಿಂಚಣಿಯನ್ನು ಈ ನಾಲ್ಕು ಬ್ಯಾಂಕ್‌ಗಳಿಗೆ ವರ್ಗಾಯಿಸಬೇಕಾಗಿದ್ದು, ಈ ಬಗ್ಗೆ ಬ್ಯಾಂಕುಗಳಲ್ಲಿ ಪಿಂಚಣಿ ಪಡೆಯುವ ಪಿಂಚಣಿದಾರರಿಗೆ ಡಿಸೆಂಬರ್ 28 ರಂದು ಬೆಳಗ್ಗೆ 11 ಗಂಟೆಗೆ ಉಡುಪಿ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಪಿಂಚಣಿ ಅದಾಲತ್ ನಡೆಯಲಿದೆ.

ಈ ಅದಾಲತ್‌ನಲ್ಲಿ ಬ್ಯಾಂಕ್ ಅಧಿಕಾರಿಗಳು ಹಾಗೂ ಬ್ಯಾಂಕ್‌ಗಳಲ್ಲಿ ಪಿಂಚಣಿ ಪಡೆಯುತ್ತಿರುವ ಪಿಂಚಣಿದಾರರು ಭಾಗವಹಿಸಬಹುದು ಎಂದು ಜಿಲ್ಲಾ ಖಜಾನೆ ಉಪನಿರ್ದೇಶಕರ ಪ್ರಕಟಣೆ ತಿಳಿಸಿದೆ.

Subscribe to our newsletter!

Other related posts

error: Content is protected !!