ಅಧಿಕೃತ ಮಾರಾಟಗಾರರಿಂದಲೇ ರಸಗೊಬ್ಬರ ಖರೀದಿಸಲು ಸೂಚನೆ

 ಅಧಿಕೃತ ಮಾರಾಟಗಾರರಿಂದಲೇ ರಸಗೊಬ್ಬರ ಖರೀದಿಸಲು ಸೂಚನೆ
Share this post

ಉಡುಪಿ, ಡಿ 23 2020: ಜಿಲ್ಲೆಯಲ್ಲಿ 123 ಪರವಾನಿಗೆ ಹೊಂದಿದ ರಸಗೊಬ್ಬರ ಮಾರಾಟಗಾರರಿದ್ದು, ಅಧಿಕೃತವಾಗಿ ರಸಗೊಬ್ಬರ ಮಾರಾಟ ಮಾಡಲು ಅರ್ಹರಿರುತ್ತಾರೆ.

ಪರವಾನಿಗೆ ಹೊಂದಿದ ಮಾರಾಟಗಾರರು ತಮ್ಮ ಮಾರಾಟ ಮಳಿಗೆಯಲ್ಲಿ ಕೃಷಿ ಇಲಾಖೆಯಿಂದ ನೀಡಿದ ಪರವಾನಿಗೆ ಸಂಖ್ಯೆ ಹಾಗೂ ವಿವರಗಳ ಫಲಕವನ್ನು ಸಾರ್ವಜನಿಕರಿಗೆ ಕಾಣುವಂತೆ ಪ್ರದರ್ಶಿಸುತ್ತಿದ್ದು, ರಸಗೊಬ್ಬರ ಖರೀದಿಗೆ ಪಿ.ಓ.ಎಸ್ ಸಾಧನದಿಂದ ಮುದ್ರಿಸಿದ ಬಿಲ್ ನೀಡುತ್ತಾರೆ.

ಇಂತಹ ಪರವಾನಿಗೆ ಹೊಂದಿದ ಮಳಿಗೆಗಳನ್ನು ಹೊರತುಪಡಿಸಿ ಬೇರೆ ಯಾವುದೇ ಅನಧಿಕೃತ ಮಾರಾಟಗಾರರು ಕಂಡುಬಂದಲ್ಲಿಅಂತಹವರಿಂದ ಗೊಬ್ಬರ ಖರೀದಿಸದೆ, ಹತ್ತಿರದ ರೈತ ಸಂಪರ್ಕ ಕೇಂದ್ರ ಅಥವಾ ಸಹಾಯಕ ಕೃಷಿ ನಿರ್ದೇಶಕರ ಕಚೇರಿಗೆ ದೂರು ನೀಡಬೇಕು ಎಂದು ಜಿಲ್ಲೆಯ ಜಂಟಿ ಕೃಷಿ ನಿರ್ದೇಶಕರ ಪ್ರಕಟಣೆ ತಿಳಿಸಿದೆ.

ಗ್ರಾಮಗಳಲ್ಲಿ ಕೆಲವು ಅನಧಿಕೃತ ಸಂಚಾರಿ ಮಾರಾಟಗಾರರು ಸಾವಯವ ಗೊಬ್ಬರ ಉತ್ಪನ್ನ ತೋರಿಸಿ ಖರೀದಿಸುವಂತೆ ರೈತರಿಗೆ ಸಂಚು ಮಾಡುತ್ತಿರುವ ಪ್ರಕರಣಗಳು ಕಂಡುಬರುತ್ತಿದ್ದು, ಇಂತಹ ಮಾರಾಟಗಾರರು ತಮ್ಮ ಗ್ರಾಮ ವ್ಯಾಪ್ತಿಯಲ್ಲಿ ಕಂಡುಬಂದಲ್ಲಿ ಅಂತಹವರಿಂದ ಖರೀದಿಸದೆ, ತಕ್ಷಣವೇ ಕೃಷಿ ಇಲಾಖೆಗೆ ದೂರು ನೀಡಬೇಕು.

ರೈತರ ಆಧಾರ್ ಕಾರ್ಡ್ ಆಧರಿಸಿ ರಸಗೊಬ್ಬರ ವಿತರಿಸುವ ವ್ಯವಸ್ಥೆಯಿರುವುದರಿಂದ ರೈತರು ರಸಗೊಬ್ಬರ ಖರೀದಿಗೆ ಆಧಾರ್‌ಕಾರ್ಡ್ ತೆಗೆದುಕೊಂಡು ಹೋಗುವಂತೆ ಜಿಲ್ಲೆಯ ಜಂಟಿ ಕೃಷಿ ನಿರ್ದೇಶಕರ ಪ್ರಕಟಣೆ ತಿಳಿಸಿದೆ.

Subscribe to our newsletter!

Other related posts

error: Content is protected !!