ತೋಟಗಾರಿಕೆ ಸಸಿಗಳು ಇಲಾಖಾ ದರದಲ್ಲಿ ಮಾರಾಟ
ಉಡುಪಿ, ಡಿಸೆಂಬರ್ 5, 2020: ಜಿಲ್ಲೆಯ ತೋಟಗಾರಿಕೆ ಕ್ಷೇತ್ರಗಳಲ್ಲಿ ರೈತರ ಹಾಗೂ ಸಾರ್ವಜನಿಕರ ಬೇಡಿಕೆ ಆಧಾರದ ಮೇಲೆ ತೋಟಗಾರಿಕೆ ಕಸಿ/ ಸಸಿ ಗಿಡಗಳನ್ನು ಉತ್ಪಾದಿಸಿ ಇಲಾಖಾ ದರದಲ್ಲಿ ಮಾರಾಟ ಮಾಡಲಾಗುತ್ತಿದೆ.
ತೋಟಗಾರಿಕೆ ನಿರ್ದೇಶನಾಲಯದ ಸುತ್ತೋಲೆ ಪ್ರಕಾರ ಕಸಿ/ ಸಸಿ ಗಿಡಗಳ ಮಾರಾಟ ದರವನ್ನು ಪರಿಷ್ಕರಿಸಲಾಗಿದ್ದು, ಪರಿಷ್ಕರಿಸಿದ ಮಾರಾಟ ದರಗಳ ವಿವರಗಳು ಹೀಗಿವೆ.
- ಅಡಿಕೆ ಸಸಿಗೆ 20 ರೂ
- ಕಸಿ ಗೇರು ಗಿಡ 32 ರೂ
- ಕಾಳು ಮೆಣಸು 11 ರೂ
- ಕಸಿ ಕಾಳು ಮೆಣಸು 32 ರೂ
- ಕೋಕೊ 11 ರೂ
- ತೆಂಗು (ಸ್ಥಳೀಯ) 70 ರೂ
- ತೆಂಗು (ಹೈಬ್ರೀಡ್) 160 ರೂ
- ನಿಂಬೆ 15 ರೂ
- ಕರಿಬೇವು 12 ರೂ
- ಮಲ್ಲಿಗೆ 10 ರೂ
ಪರಿಷ್ಕೃತ ಮಾರಾಟ ದರ ನಿಗಧಿಪಡಿಸಲಾಗಿದೆ ಎಂದು ಹಿರಿಯ ಸಹಾಯಕ ತೋಟಗಾರಿಕೆ ನಿದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.