ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಕನ್ನಡ ಫಲಕ ಅಳವಡಿಕೆ

 ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಕನ್ನಡ ಫಲಕ ಅಳವಡಿಕೆ
Share this post

ಉಡುಪಿ, ಡಿಸೆಂಬರ್ 03, 2020: ಉಡುಪಿ ಶ್ರೀ ಕೃಷ್ಣ ಮಠದ ಪ್ರವೇಶದ್ವಾರದಲ್ಲಿ ಕನ್ನಡ ನಾಮ ಫಲಕವನ್ನು ಅಳವಡಿಸಲಾಗಿದೆ.

ಇತ್ತೀಚಿಗೆ ಕೃಷ್ಣ ಮಠದ ಪ್ರವೇಶ ದ್ವಾರದಲ್ಲಿ ಅಳವಡಿಸಲ್ಪಟ್ಟ ಫಲಕದಲ್ಲಿ ಕೇವಲ ಸಂಸ್ಕೃತ ಮತ್ತು ತುಳು ಭಾಷೆಯ ಲಿಪಿಯಲ್ಲಿ ಬರೆಯಲಾಗಿತ್ತು (ಹಳೆಯ ಫಲಕದಲ್ಲಿ ಕನ್ನಡ ಭಾಷೆ ಇತ್ತು).ಹೊಸ ಫಲಕದಲ್ಲಿ ಕನ್ನಡ ಬರಹ ಇಲ್ಲದ ಕಾರಣ ಕನ್ನಡಪರ ಸಂಘಟನೆಗಳು ತೀವ್ರವಾಗಿ ವಿರೋಧ ವ್ಯಕ್ತಪಡಿಸಿದ್ದವು.

“ಹಳೆಯ ಪ್ಲಾಸ್ಟಿಕ್ ಫಲಕ ತೆಗೆದು ಹೊಸ ಮರದ ಫಲಕ ಅಳವಡಿಸುವ ಕೆಲಸ ನಡೆಯುತ್ತಿದೆ. ಸಂಸ್ಕೃತ ಹಾಗೂ ತುಳು ಭಾಷೆಯ ಫಲಕ ಸಿದ್ಧವಾಗಿದ್ದರಿಂದ ಅದನ್ನು ಅಳವಡಿಸಲಾಗಿದೆ. ಕನ್ನಡ ಫಲಕ ಸಿದ್ದವಾದ ಕೂಡಲೇ ಅದನ್ನು ಕೂಡಾ ಮುಂಭಾಗದಲ್ಲಿ ಅಳವಡಿಸಲಾಗುವುದು” ಎಂದು ಮಠದ ಮ್ಯಾನೇಜರ್ ಗೋವಿಂದರಾಜ್ ಸ್ಪಷ್ಟೀಕರಣ ನೀಡಿದ್ದರು.

ಇಂದು ಬೆಳಗ್ಗೆ ಮಠದ ಪ್ರವೇಶದ್ವಾರದಲ್ಲಿ ಕನ್ನಡ ಫಲಕ ಅಳವಡಿಸಲಾಗಿದೆ.

Subscribe to our newsletter!

Other related posts

error: Content is protected !!