ಉಡುಪಿಯಲ್ಲಿ ಶ್ರೀ ಕನಕದಾಸ ಜಯಂತಿ

 ಉಡುಪಿಯಲ್ಲಿ ಶ್ರೀ ಕನಕದಾಸ ಜಯಂತಿ
Share this post

ಉಡುಪಿ, ಡಿ 03, 2020: ಶ್ರೀ ಕೃಷ್ಣ ಮಠದಲ್ಲಿ,ಕನಕ ಜಯಂತಿಯ ಪ್ರಯುಕ್ತ ರಥಬೀದಿಯಲ್ಲಿರುವ ಕನಕಗುಡಿಯಲ್ಲಿ ಪರ್ಯಾಯ ಅದಮಾರು ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಕನಕದಾಸರ ಪುತ್ಥಳಿಗೆ ಪೂಜೆ ಸಲ್ಲಿಸಿದರು.

“ಕನಕದಾಸರು ಕೀರ್ತಿಯ ಕಡೆಗೆ ಮುಖಮಾಡದೆ ಯಶಸ್ಸನ್ನು ಗಳಿಸಿದರು. ನಾವೂ ಕೂಡ ಅವರ ಕೀರ್ತನೆಗಳ ಅರ್ಥವನ್ನು ಗ್ರಹಿಸಿ ಬದುಕಿನಲ್ಲಿ ಭಗವಂತನನ್ನು ಕಾಣಬೇಕು,” ಎಂದು ರಾಜ್ಯದೆಲ್ಲೆಡೆಯಿಂದ ಬಂದ ಭಕ್ತರೆಲ್ಲರಿಗೂ ಅನುಗ್ರಹಿಸಿ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಆಶೀರ್ವಚನ ನೀಡಿದರು.

ಸಭೆಯಲ್ಲಿ ಆರ್.ಎಸ್.ಎಸ್ ನ ಜಿಲ್ಲಾ ಸಂಘಟಕರಾದ ನಾರಾಯಣ ಶೆಣೈ ಹಾಗೂ ಕನಕ ಸದ್ಭಾವನಾ ಜ್ಯೋತಿಯಾತ್ರೆಯ ಸಮಿತಿ ಅಧ್ಯಕ್ಷರಾದ ಕೃಷ್ಣಮೂರ್ತಿ, ಕುರುಬರ ಸಂಘದ ನಿರ್ದೇಶಕರಾದ ಬಸವರಾಜು ಮತ್ತು  ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಸಾಧಕರಿಗೆ ಸನ್ಮಾನಿಸಲಾಯಿತು.

Subscribe to our newsletter!

Other related posts

error: Content is protected !!