ದತ್ತು ಮಾಸಾಚರಣೆ ಅಂಗವಾಗಿ ಆನ್‍ಲೈನ್ ಸ್ಪರ್ಧೆ

 ದತ್ತು ಮಾಸಾಚರಣೆ ಅಂಗವಾಗಿ ಆನ್‍ಲೈನ್ ಸ್ಪರ್ಧೆ
Share this post

ಕಾರವಾರ, ಡಿಸೆಂಬರ್ 2, 2020: ಅಂತರಾಷ್ಟ್ರೀಯ ದತ್ತು ಮಾಸಾಚರಣೆಯ ಅಂಗವಾಗಿ ದತ್ತು ವಿಷಯಗಳಿಗೆ ಸಂಭದಿಸಿದಂತೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಆನ್‍ಲೈನ್ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ ಎಂದು ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಪ್ರಕಟಣೆಯಲ್ಲಿ ತಿಳಿಸಿದೆ.

ದತ್ತು ಪಡೆದ ಮಗುವಿನ ಸುರಕ್ಷಾ, ಆರೈಕೆ, ಮಕ್ಕಳನ್ನು ದತ್ತು ಪಡೆಯುವುದು ಪೋಷಕರಿಗೆ ಹಾಗೂ ಮಕ್ಕಳಿಗೆ ಹೇಗೆ ಸಂತೋಷದಾಯವಾಗುತ್ತದೆ ಹಾಗೂ ಪೋಷಕತ್ವ ವಿಷಯಗಳ ಕುರಿತು ಪೋಸ್ಟರ್, ಡಾನ್ಸ್ ಕೀರು ಚಿತ್ರ (ಶಾರ್ಟ ಫಿಲ್ಮ ಎರಡು ನಿಮಿಷಕ್ಕೆ ಮೀರಿರದ ) ಹಾಗೂ ಪದ್ಯ ರಚಿಸುವಂತಹ ಆನ್‍ಲೈನ್ ಸ್ಪರ್ಧೆಗಳನ್ನು ಆಯೋಜಿಸಿರಲಾಗಿರುತ್ತದೆ.

ಆಸಕ್ತರು ತಾವು ಸಿದ್ಧ ಪಡಿಸಿದ ಪೊಸ್ಟರ್, ಕೀರು ಚಿತ್ರ ಡಾನ್ಸ ಹಾಗೂ ಪದ್ಯ ರಚನೆಗಳ ಪ್ರತಿಯನ್ನು ಅರ್ಜಿ ನಮೂನೆಯೊಂದಿಗೆ [email protected] ಇ -ಮೇಲ್ ವಿಳಾಸಕ್ಕೆ ಕಳುಹಿಸಬೇಕು.

ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಇಲಾಖೆ ವೆಬ್ ಸೈಟ್ www.icps.karnataka.gov.in ಗೆ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಕಾರವಾರ, ದೂರವಾಣಿನ ಸಂಖ್ಯೆ 08382-220182 ಸಂಪರ್ಕಿಸಬಹುದು.

Subscribe to our newsletter!

Other related posts

error: Content is protected !!