ಹಿಂದೂಸ್ತಾನ್ ಏರೊನಾಟಿಕ್ಸ್ ಲಿಮಿಟೆಡ್‍: ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

 ಹಿಂದೂಸ್ತಾನ್ ಏರೊನಾಟಿಕ್ಸ್ ಲಿಮಿಟೆಡ್‍: ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
Share this post

ಕಾರವಾರ, ನ 30, 2020: ಬೆಂಗಳೂರಿನ ಹಿಂದೂಸ್ತಾನ್ ಏರೊನಾಟಿಕ್ಸ್ ಲಿಮಿಟೆಡ್‍ನ ಟ್ರೇನಿಂಗ್ ಸಂಸ್ಥೆ ಯು, (HAL) ಫಿಟ್ಟರ್, ಟರ್ನರ್, ಮಶಿನಿಷ್ಟ ಇಲೆಕ್ಟ್ರಿಶಿಯನ್, ವೆಲ್ಡರ್, ಫೌಂಡರಿಮೆನ್, ಕೋಪಾ ಕಾರ್ಪೆಂಟರ್, ಪೌಂಡರಿಮೆನ್ ಹಾಗೂ ಶೀಟ್‍ಮೆಟಲ್ ವರ್ಕರ್, ಅಪ್ರೆಂಟಿಸ್ ಒಂದು ವರ್ಷದ ತರಬೇತಿಗಾಗಿ, ಐ.ಟಿ.ಐ. ತೇರ್ಗಡೆಯಾದ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.

ಜಿಲ್ಲೆಯ ಅರ್ಹ ಅಭ್ಯರ್ಥಿಗಳು ಉದ್ಯೋಗ ವಿನಿಮಯ ಕಛೇರಿ ಮೂಲಕ ಅರ್ಜಿ ಸಲ್ಲಿಸಬಹುದಾಗಿದ್ದು, ಆನ್‍ಲೈನ್ ವೆಬ್‍ಸೈಟ್ apprenticeshipindia.org/candidate-registration ನಲ್ಲಿ ಮೊದಲು ನೋಂದಣಿ ಮಾಡಬೇಕು.

ಆ ನೋಂದಣಿ ಸಂಖ್ಯೆಯೊಂದಿಗೆ ಉದ್ಯೋಗ ವಿನಿಮಯ ಕಛೇರಿ ಖುದ್ದಾಗಿ ಭೇಟಿ ನೀಡಿ ನಿಗದಿತ ನಮೂನೆಯ ಅರ್ಜಿ ಪಡೆದು, ಭರ್ತಿ ಮಾಡಿ, ಮೂಲ ಎಸ್‍ಎಸ್‍ಎಲ್‍ಸಿ ಅಂಕಪಟ್ಟಿ ಮತ್ತು ರಾಷ್ಟ್ರೀಯ ವೃತ್ತಿ ತರಬೇತಿ ಕೌನ್ಸಿಲ್‍ನಿಂದ ಅಂಗೀಕೃತವಾದ ಸಂಸ್ಥೆಯಿಂದ ಪಡೆದ ಐ.ಟಿ.ಐ. ಎನ್.ಸಿ.ವಿ.ಟಿ. ಪ್ರಮಾಣ ಪತ್ರ ಮತ್ತು ಅಂಕಪಟ್ಟಿಗಳು, ಇತರೆ ಜಾತಿ ಪ್ರಮಾಣಪತ್ರ, ಪಿ.ಎಚ್, ಆರ್ಮಡ ಪಸರ್ನಲ್, ಆಧಾರಕಾರ್ಡ ಪ್ರತಿ ಹಾಗೂ ಇತ್ತೀಚಿನ ಎರಡು ಪಾಸ್‍ಪೊರ್ಟ ಸೈಜ್ ಫೊಟೊಗಳೊಂದಿಗೆ ಡಿಸೆಂಬರ್ 8 ರೊಳಗಾಗಿ ಸಲ್ಲಿಸಬಹುದಾಗಿದೆ.

ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 9481274298 ಅಥವಾ ಕಛೇರಿ ದೂರವಾಣಿ ಸಂಖ್ಯೆ: 08382-226386 ಸಂಪರ್ಕಿಸಬಹುದಾಗಿದೆ ಎಂದು ಕಾರವಾರದ ಯೋಜನಾ ಉದ್ಯೋಗ ವಿನಿಮಯ ಕಚೇರಿಯ ಉದ್ಯೋಗಾಧಿಕಾರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ

Subscribe to our newsletter!

Other related posts

error: Content is protected !!