ಪ್ರಧಾನ ಅಂಚೆ ಕಛೇರಿಯಲ್ಲಿ ಭಾನುವಾರದಂದು ಆಧಾರ್ ನೋಂದಣಿ, ಪರಿಷ್ಕರಣೆ ಸೇವೆ

 ಪ್ರಧಾನ ಅಂಚೆ ಕಛೇರಿಯಲ್ಲಿ ಭಾನುವಾರದಂದು   ಆಧಾರ್ ನೋಂದಣಿ, ಪರಿಷ್ಕರಣೆ ಸೇವೆ
Share this post

ಮಂಗಳೂರು, ನ 30, 2020: ಮಂಗಳೂರು ಪ್ರಧಾನ ಅಂಚೆ ಕಛೇರಿಯಲ್ಲಿ ನವೆಂಬರ್ 29 ರಿಂದ ಪ್ರತಿ ಭಾನುವಾರ ಹಾಗೂ ಸರಕಾರಿ ರಜಾ ದಿನಗಳಂದು ಎಲ್ಲಾ ತರಹದ ಆಧಾರ್ ನೋಂದಣಿ ಹಾಗೂ ಪರಿಷ್ಕರಣೆ ಸೇವೆಗಳನ್ನು ನೀಡಲಾಗುವುದು.

ಈವರೆಗೆ ಭಾನುವಾರ ಹಾಗೂ ಸರಕಾರಿ ರಜಾ ದಿನಗಳಂದು ಕೇವಲ ಮೊಬೈಲ್ ಸಂಖ್ಯೆ ಪರಿಷ್ಕರಣಾ ಸೇವೆ ನೀಡಲಾಗುತಿತ್ತು.

ಮಂಗಳೂರು ಪ್ರಧಾನ ಅಂಚೆ ಕಛೇರಿಯಲ್ಲಿ ಭಾನುವಾರ ಹಾಗೂ ಸರಕಾರಿ ರಜಾ ದಿನಗಳಂದು ಬೆಳಿಗ್ಗೆ 10.00 ರಿಂದ 5.00 ರವರೆಗೆ ಆಧಾರ್ ನೋಂದಣಿ, ಹೆಸರು ತಿದ್ದುಪಡಿ, ಜನ್ಮ ದಿನಾಂಕ ತಿದ್ದುಪಡಿ, ವಿಳಾಸ ಬದಲಾವಣೆ, ಬಯೋಮೆಟ್ರಿಕ್ ಪರಿಷ್ಕರಣೆ, ಲಿಂಗ ತಿದ್ದುಪಡಿ, ಮೊಬೈಲ್/ಇಮೇಲ್ ಪರಿಷ್ಕರಣೆ ಸೇವೆಯನ್ನು ಸಾರ್ವಜನಿಕರು ಪಡೆದುಕೊಳ್ಳಬಹುದು.

ಈ ಶಿಬಿರದ ಸದುಪಯೋಗವನ್ನು ಪಡೆದುಕೊಳ್ಳಲು ಇಚ್ಚಿಸುವವರು ಪ್ರತಿ ಶನಿವಾರದೊಳಗೆ ತಮ್ಮ ಹೆಸರನ್ನು ಮಂಗಳೂರು ಪ್ರಧಾನ ಅಂಚೆ ಕಛೇರಿಗೆ ಭೇಟಿ ನೀಡಿ ಅಥವಾ ದೂರವಾಣಿ ಸಂಖ್ಯೆ 0824-2423053 ಗೆ ಕರೆ ಮಾಡಿ ನೋಂದಾವಣಿ ಮಾಡಿಕೊಳ್ಳಬೇಕಾಗಿ ವಿನಂತಿ. ನೋಂದಣಿ ಮಾಡಿಕೊಳ್ಳಬಹುದಾದ ಸಮಯ: ಬೆಳಿಗ್ಗೆ 9 ರಿಂದ ಸಂಜೆ 5 ರವರೆಗೆ. ಮೊದಲು ನೋಂದಣಿಗೊಂಡ 50 ಗ್ರಾಹಕರಿಗೆ ಮೊದಲ ಆದ್ಯತೆ ನೀಡಲಾಗುವುದು ಎಂದು ಮ೦ಗಳೂರು ವಿಭಾಗ ಹಿರಿಯ ಅ೦ಚೆ ಅಧೀಕ್ಷಕರು ತಿಳಿಸಿದ್ದಾರೆ.

Subscribe to our newsletter!

Other related posts

error: Content is protected !!