ಶ್ರೀ ಕೃಷ್ಣ ಮಠದಲ್ಲಿ ‘ವಿಶ್ವರೂಪದರ್ಶನ’

 ಶ್ರೀ ಕೃಷ್ಣ ಮಠದಲ್ಲಿ ‘ವಿಶ್ವರೂಪದರ್ಶನ’
Share this post

ಉಡುಪಿ, ನ 26, 2020: ಪರ್ಯಾಯ ಶ್ರೀ ಅದಮಾರು ಮಠ, ಶ್ರೀಕೃಷ್ಣ ಮಠದ ಸಹಯೋಗದಲ್ಲಿ, ರಾಮಸಿಂಗ್ ಮೈಸೂರು ಚಿತ್ರ ಸಂಗ್ರಹಾಲಯ ಮೈಸೂರು ಹಾಗೂ ಪ್ರಾಚಿ ಉಡುಪಿ ನವೆಂಬರ್ 26 ರಿಂದ 30 ರವರೆಗೆ ಲಕ್ಷದೀಪೋತ್ಸವದ ಪ್ರಯುಕ್ತ ಪ್ರಸ್ತುತಪಡಿಸುವ “ವಿಶ್ವರೂಪದರ್ಶನ” ಮೈಸೂರು ಚಿತ್ರಕಲಾ ಪ್ರದರ್ಶನವನ್ನು ಪರ್ಯಾಯ ಅದಮಾರು  ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಉದ್ಘಾಟಿಸಿದರು.

ಶ್ರೀಪಾದರು “ವಿಶ್ವರೂಪದರ್ಶನ” ಪುಸ್ತಕ ಬಿಡುಗಡೆ ಗೊಳಿಸಿ, ಮೈಸೂರು ಮಹಾರಾಜರ ಕಾಲದ ಚಿತ್ರಗಳನ್ನು ರಕ್ಷಿಸಿ ಅವನ್ನು ಮುಂದಿನ ಪೀಳಿಗೆಯವರಿಗೆ ನೀಡುತ್ತಿರುವ ಆರ್.ಜಿ.ಸಿಂಗ್ ಮತ್ತು ಅವರ ಬಳಗವನ್ನು ಅಭಿನಂದಿಸಿ ಅನುಗ್ರಹ ಸಂದೇಶ ನೀಡಿದರು.

ಮೈಸೂರು ರಾಮ್ಸನ್ಸ್ ಕಲಾ ಪ್ರತಿಷ್ಠಾನದ ಕಾರ್ಯದರ್ಶಿಗಳಾಗಿರುವ ಆರ್.ಜಿ.ಸಿಂಗ್ ರವರು ಪ್ರದರ್ಶವನ್ನು ಪ್ರಸ್ತುತಪಡಿಸಿದರು.

“ವಿಶ್ವರೂಪದರ್ಶನ” ಶ್ರೀಕೃಷ್ಣ ಮಠದ ಬಡಗುಮಾಳಿಗೆಯಲ್ಲಿ ನಡೆಯುತ್ತಿದೆ.

Subscribe to our newsletter!

Other related posts

error: Content is protected !!