ಶ್ರೀಕೃಷ್ಣ ಮಠದಲ್ಲಿ ಏಕಾದಶಿಯಂದು ತಪ್ತಮುದ್ರಾಧಾರಣ ಕಾರ್ಯಕ್ರಮ

 ಶ್ರೀಕೃಷ್ಣ ಮಠದಲ್ಲಿ ಏಕಾದಶಿಯಂದು  ತಪ್ತಮುದ್ರಾಧಾರಣ ಕಾರ್ಯಕ್ರಮ
Share this post

ಉಡುಪಿ, ನ 24 : ಶ್ರೀಕೃಷ್ಣ ಮಠದಲ್ಲಿ ನ.26, ಗುರುವಾರ ಪ್ರಬೋಧಿನಿ ಏಕಾದಶಿಯಂದು ಶ್ರೀಕೃಷ್ಣ ಭಕ್ತರಿಗೆ ತಪ್ತಮುದ್ರಾಧಾರಣ ಕಾರ್ಯಕ್ರಮವು ಪರ್ಯಾಯ ಪೀಠಾಧೀಶರಾದ ಶ್ರೀ ಶ್ರೀ ಈಶಪ್ರಿಯತೀರ್ಥ ಶ್ರೀಪಾದರಿಂದ ನಡೆಯಲಿರುವುದು.

ಬೆಳಿಗ್ಗೆ 11.00 ಗಂಟೆಯಿಂದ 12.30ರವರೆಗೆ ಈ ಮುದ್ರಾಧಾರಣ ಕಾರ್ಯಕ್ರಮವು ರಾಜಾಂಗಣದಲ್ಲಿ ನಡೆಯಲಿದ್ದು, ಭಕ್ತಾದಿಗಳು ಸಾಮಾಜಿಕ ಅಂತರವನ್ನು ಕಾಯ್ದುಕೊಂಡು, ಮಾಸ್ಕ್ ಧರಿಸಿ, ಸ್ಯಾನಿಟೈಸರ್ ಉಪಯೋಗಿಸಿ ಸರಕಾರದ ಎಲ್ಲಾ ನಿಯಮಗಳನ್ನು ಪಾಲಿಸಿ ಈ ಮುದ್ರಾಧಾರಣ ಕಾರ್ಯಕ್ರಮದಲ್ಲಿ ಭಾಗವಹಿಸಬಹುದು.

ಅಂದು ಶ್ರೀ ಷ್ಣನಿಗೆ ಲಕ್ಷ ತುಳಸಿ ಅರ್ಚನೆ ನಡೆಯಲಿದೆ.
ಭಕ್ತಾದಿಗಳು ನ ೨೫ ಸಂಜೆಯೊಳಗೆ ತುಳಸಿಯನ್ನು ತಂದೊಪ್ಪಿಸುವುದರ ಮೂಲಕ ಅರ್ಚನೆಯಲ್ಲಿ ಪಾಲ್ಗೊಂಡು ಶ್ರೀ ಕೃಷ್ಣ ಮುಖ್ಯಪ್ರಾಣ ದೇವರ ಕೃಪೆಗೆ ಪಾತ್ರರಾಗಬಹುದು ಎಂದು ವ್ಯವಸ್ಥಾಪಕರು ತಿಳಿಸಿದ್ದಾರೆ.

Subscribe to our newsletter!

Other related posts

error: Content is protected !!