ಕೋಳಿ ಮತ್ತು ಪಶು ಆಹಾರ ಪರವಾನಿಗೆ ಪಡೆಯಲು ಅರ್ಜಿ ಆಹ್ವಾನ
ಮಂಗಳೂರು ನ 21: ಕರ್ನಾಟಕ ಕುಕ್ಕುಟ ಮತ್ತು ಜಾನುವಾರು ಆಹಾರ ತಯಾರಿಕೆ ಮತ್ತು ಮಾರಾಟ. ನಿಯಂತ್ರಣ ಆಜ್ಞೆ 1987ರಂತೆ ಕೋಳಿ ಮತ್ತು ಪಶು ಆಹಾರಗಳ ಉತ್ಪಾದಕರು ಮತ್ತು ಮಾರಾಟಗಾರರು 2020-21ನೇ ಸಾಲಿನಿಂದ ನೂತನ ಪರವಾನಿಗೆ ಅಥವಾ ನವೀಕರಣಗಳಿಗೆ ಪಶುಸಂಗೋಪನಾ ಇಲಾಖೆಯಿಂದ ವಿವಿಧ ಮಾರ್ಗಸೂಚಿಗಳನ್ನು ನೀಡಲಾಗಿದೆ.
ಸ್ಥಳೀಯವಾಗಿ ಕಾರ್ಯನಿರ್ವಹಿಸುತ್ತಿರುವ ಮುಖ್ಯ ಪಶುವೈದ್ಯಧಿಕಾರಿ ಅಥವಾ ಹಿರಿಯ ಪಶು ವೈದ್ಯಧಿಕಾರಿಗಳನ್ನು ರಾಜ್ಯಾದ್ಯಂತ ಅವರ ವ್ಯಾಪ್ತಿಯಲ್ಲಿ ಬರುವ ಕುಕ್ಕುಟ ಮತ್ತು ಜಾನುವಾರು ಆಹಾರ ಉತ್ಪಾದಕರ ಮತ್ತು ಮಾರಾಟ ಕೇಂದ್ರಗಳ ಪರಿಶೀಲನೆಗಾಗಿ ನೇಮಿಸಲಾಗಿದೆ.
ಜಿಲ್ಲೆಯಲ್ಲಿರುವ ಕುಕ್ಕುಟ ಮತ್ತು ಜಾನುವಾರು ಆಹಾರ ಉತ್ಪಾದಕರ ಮತ್ತು ಮಾರಾಟ ಕೇಂದ್ರಗಳು ನಮೂನೆ-ಎ ರಲ್ಲಿ ಅರ್ಜಿ ಭರ್ತಿ ಮಾಡಿ ಡಿಸೆಂಬರ್ ನಲ್ಲಿ ಸ್ಥಳೀಯ ಪಶುಪಾಲನಾ ಇಲಾಖೆಯ ಅಧಿಕಾರಿಗಳ ಪರಿಶೀಲನಾ ವರದಿ ಮತ್ತು ನಿಗದಿತ ಶುಲ್ಕ ಪಾವತಿಸಿ, ನೂತನ ಪರವಾನಿಗೆ ಅಥವಾ ನವೀಕರಣಕ್ಕಾಗಿ ಕುಕ್ಕುಟ ಮತ್ತು ಜಾನುವಾರು ಆಹಾರ ಗುಣನಿಯಂತ್ರಣ ಸಹಾಯಕ ನಿರ್ದೇಶಕರ ಆಯುಕ್ತಾಲಯ ಪಶುಪಾಲನಾ ಭವನ, ಹೆಬ್ಬಾಳ ಬೆಂಗಳೂರು ಇವರಿಗೆ ಸಲ್ಲಿಸಿ 2021ರಿಂದ ಪರವಾನಿಗೆಯನ್ನು ಪಡೆಯುವುದು ಕಡ್ಡಾಯವಾಗಿದೆ.
ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ತಮ್ಮ ವ್ಯಾಪ್ತಿಯ ಪಶುವೈದ್ಯಕೀಯ ಸಂಸ್ಥೆ, ತಾಲೂಕು ಕೇಂದ್ರದ ಪಶುವೈದ್ಯಕೀಯ ಸಂಸ್ಥೆಯನ್ನು ಅಥವಾ ದೂ.ಸಂ:9141010419ವನ್ನು ಸಂಪರ್ಕಿಸುವಂತೆ ಪಶುಸಂಗೋಪನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
- Today’s Rubber price (Kottayam and International market)
- Arecanut and Pepper Price at TSS- Sirsi
- Udupi Sri Krishna Alankara
- Udupi Mallige and Jaaji today’s price
- Today’s Rubber price at Rubber Society- Ujire