ವಿಮಾನ ನಿಲ್ದಾಣ ಭೂಸ್ವಾಧೀನ: ಸಾರ್ವಜನಿಕ ಸಭೆ

Representation purpose only
ಕಾರವಾರ, ನ 17: ಜಿಲ್ಲೆಯ ಅಂಕೋಲಾ ತಾಲೂಕಿನ ಬೇಲೆಕೇರಿ ಹೋಬಳಿಯಲ್ಲಿ ನಾಗರೀಕ ವಿಮಾನ ನಿಲ್ದಾಣ ಸ್ಥಾಪಿಸುವ ದೃಷ್ಠಿಯಿಂದ ಖಾಸಗಿ ಜಮೀನುಗಳ ಭೂಸ್ವಾಧೀನಕ್ಕೆ ಈಗಾಗಲೇ ಪ್ರಾಥಮಿಕ ಅಧಿಸೂಚನೆ ಹೊರಡಿಸಲಾಗಿದ್ದು, ಬಾಧಿತ ಭೂ ಮಾಲೀಕರಿಗೆ ಸೂಕ್ತ ಪುನರ್ವಸತಿ ಹಾಗೂ ಪುನರ್ನಿರ್ಮಾಣ ಯೋಜನೆ ರೂಪಿಸುವ ಉದ್ದೇಶದಿಂದ ಸಂಬಂಧಿಸಿದ ಗ್ರಾಮ ಪಂಚಾಯತ್‍ಗಳಲ್ಲಿ ಸಾರ್ವಜನಿಕ ಸಭೆಯನ್ನು ಹಮ್ಮಿಕೊಳ್ಳಲಾಗಿದೆ.
- ನವಂಬರ್ 23 ರಂದು ಬೆಳಿಗ್ಗೆ 11 ಗಂಟೆಗೆ ಬೇಲೆಕೇರಿ ಗ್ರಾಮ ಪಂಚಾಯತ್ ಸಭಾಭವನ
- ನವಂಬರ್ 24 ರಂದು ಬೆಳಿಗ್ಗೆ 11 ಗಂಟೆಗೆ ಅಲಗೇರಿ ಗ್ರಾಮದ ಸಣ್ಣಮ್ಮ ದೇವಸ್ಥಾನ ಹತ್ತಿರವಿರುವ ಹೊಲೆವಟ್ಟರ ಗಣೇಶೋತ್ಸವ ಸಮೀತಿ ಸಭಾ ಭವನದಲ್ಲಿ ಸಾರ್ವಜನಿಕ ಸಭೆ ನಡೆಯಲಿದೆ.
ಭೂ ಮಾಲಿಕರು ತಮಗೆ ಸಂಬಂಧಿಸಿದ ಗ್ರಾಮ ಪಂಚಾಯತ್‍ದ ಸಭೆಗೆ ನಿಗದಿಪಡಿಸಿದ ದಿನಾಂಕದಂದು ಸಮಯಕ್ಕೆ ಸರಿಯಾಗಿ ಹಾಜರಾಗಿ ತಮ್ಮ ಅಹವಾಲುಗಳನ್ನು ಸಲ್ಲಿಸಬೇಕೆಂದು ಹೆಚ್ಚುವರಿ ಜಿಲ್ಲಾಧಿಕಾರಿ ಹಾಗೂ ಪುನರ್ವಸತಿ ಮತ್ತು ಪುನರನಿರ್ಮಾಣ ಆಡಳಿತಾಧಿಕಾರಿಯಾಗಿರುವ ಕೃಷ್ಣಮೂರ್ತಿ ಹೆಚ್.ಕೆ. ಅವರು ತಿಳಿಸಿರುತ್ತಾರೆ.
Also read:
- Daily Panchangam
- Sri Dharmasthala Mela Yakshagana show today
- Kateel Mela Yakshagana details
- Today’s Rubber price (Kottayam and International market)
- Udupi Mallige and Jaaji today’s price