ದ.ಕ ಜಿಲ್ಲೆಯಾದ್ಯಂತ ಮತದಾರರ ನೋಂದಣಿ ಅಭಿಯಾನ

 ದ.ಕ ಜಿಲ್ಲೆಯಾದ್ಯಂತ ಮತದಾರರ ನೋಂದಣಿ ಅಭಿಯಾನ
Share this post

ಮಂಗಳೂರು ನ 17: ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಮಿಂಚಿನ ಮತದಾರರ ನೋಂದಾಣಿ ಅಭಿಯಾನವನ್ನು ನವೆಂಬರ್ 22, 29 ಹಾಗೂ ಡಿಸೆಂಬರ್ 6, ಮತ್ತು 13ರಂದು ಹಮ್ಮಿಕೊಳ್ಳಲಾಗಿದ್ದು, ಮತದಾರರ ಪಟ್ಟಿಗೆ ಹೆಸರು ಸೇರಿಸಲು ಡಿಸೆಂಬರ್ 17 ಕೊನೆಯ ದಿನವಾಗಿದೆ.

ವಿಕಲಚೇತನರು, ಮಹಿಳೆಯರು, ದುರ್ಬಲರು ಮತ್ತು ಯುವ ಮತದಾರರ ಅನುಕೂಲಕ್ಕಾಗಿ ಮತದಾರರ ಮಿಂಚಿನ ನೋಂದಾಣಿ ಅಭಿಯಾನವು ಜಿಲ್ಲೆಯ ಎಲ್ಲಾ ಮತಗಟ್ಟೆಗಳಲ್ಲಿ ಬೆಳಿಗ್ಗೆ 10 ರಿಂದ ಸಂಜೆ 5 ಘಂಟೆಯವರೆಗೆ ನೋಂದಾಣಿ ಪ್ರಕ್ರಿಯೆಯು ನಡೆಯಲಿದ್ದು , ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಣಿ ಆಗದೇ ಇರುವವರು ಈ ಪ್ರಕ್ರಿಯೆಯ ಸದುಪಯೋಗವನ್ನು ಪಡೆಯುವಂತೆ ಅಪರ ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Subscribe to our newsletter!

Other related posts

error: Content is protected !!