ಮುಟ್ಟುಗೋಲು ಹಾಕಿಕೊಂಡಿದ್ದ ಪುರಾತನ ನಾಣ್ಯಗಳನ್ನುಕೇಂದ್ರ ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಸಚಿವರಿಗೆ ಹಸ್ತಾಂತರಿಸಿದ ಸಚಿವೆ ನಿರ್ಮಲಾ ಸೀತಾರಾಮನ್

 ಮುಟ್ಟುಗೋಲು ಹಾಕಿಕೊಂಡಿದ್ದ ಪುರಾತನ ನಾಣ್ಯಗಳನ್ನುಕೇಂದ್ರ ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಸಚಿವರಿಗೆ ಹಸ್ತಾಂತರಿಸಿದ ಸಚಿವೆ  ನಿರ್ಮಲಾ ಸೀತಾರಾಮನ್
Share this post

ಕೇಂದ್ರ ಹಣಕಾಸು ಮತ್ತು ಸಾಂಸ್ಥಿಕ ವ್ಯವಹಾರಗಳ ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ಭಾರತೀಯ ಕಸ್ಟಮ್ಸ್ ವಶಪಡಿಸಿಕೊಂಡಿದ್ದ ಪುರಾತನ ಮತ್ತು ಮಧ್ಯಕಾಲೀನ ಅವಧಿಯ ಪ್ರಾಚೀನ ವಸ್ತುಗಳು/ನಾಣ್ಯಗಳನ್ನು ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಸಚಿವ (ಸ್ವತಂತ್ರ ನಿರ್ವಹಣೆ) ಶ್ರೀ ಪ್ರಹ್ಲಾದ ಪಟೇಲ್ ಅವರಿಗೆ ನಾರ್ತ್ ಬ್ಲಾಕ್ ನಲ್ಲಿ ನಡೆದ ಸಮಾರಂಭದಲ್ಲಿಂದು ಹಸ್ತಾಂತರಿಸಿದರು.

ಕೇಂದ್ರ ಹಣಕಾಸು ಮತ್ತು ಸಾಂಸ್ಥಿಕ ವ್ಯವಹಾರಗಳ ಖಾತೆ ರಾಜ್ಯ ಸಚಿವ ಶ್ರೀ ಅನುರಾಗ್ ಸಿಂಗ್ ಠಾಕೂರ್, ಹಣಕಾಸು ಕಾರ್ಯದರ್ಶಿ ಡಾ. ಅಜಯ್ ಭೂಷಣ್ ಪಾಂಡೆ, ಸಿಬಿಐಸಿ ಅಧ್ಯಕ್ಷ ಶ್ರೀ ಎಂ. ಅಜಿತ್ ಕುಮಾರ್, ಮಂಡಳಿಯ ಸದಸ್ಯರು, ಕೇಂದ್ರೀಯ ನೇರ ತೆರಿಗೆ ಮಂಡಳಿ ಮತ್ತು ಕಸ್ಟಮ್ಸ್, ಸಂಸ್ಕೃತಿ ಸಚಿವಾಲಯ ಮತ್ತು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ಹಿರಿಯ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಸುಲ್ತಾನರ ಮತ್ತು ಮೊಘಲರ ಕಾಲಕ್ಕೆ ಸೇರಿದ್ದು, ಕ್ರಿ.ಶ 1206 ರಿಂದ 1720 ರವರೆಗೆ, ರಾಜಪ್ರಭುತ್ವದ ರಾಜ್ಯಗಳಾದ ಕುಶಾನಾ, ಯೌಧೇಯ, ಗುಪ್ತರು, ಪ್ರತಿಹಾರ್, ಚೋಳರು, ರಜಪೂತರು, ಮೊಘಲರು, ಮರಾಠರು, ಕಾಶ್ಮೀರ ಮತ್ತು ಬ್ರಿಟಿಷರ ಆಳ್ವಿಕೆಯ ಭಾರತ, ಫ್ರೆಂಚ್ ಮತ್ತು ಕೆಲವು ಆಸ್ಟ್ರೇಲಿಯಾದ ಕ್ರಿ.ಶ 1800-1900ರ ಕಾಲದ 40,282 ನಾಣ್ಯಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿತ್ತು. ಮುಟ್ಟುಗೋಲು ಹಾಕಿಕೊಳ್ಳಲಾದ ವಸ್ತುಗಳಲ್ಲಿ 18 ಪ್ರಾಚೀನ ಮುದ್ರೆ/ಸ್ಟಾಂಪ್/ ರಾಜರ ಆದೇಶಗಳನ್ನು ಕಾರ್ಯಗತಗೊಳಿಸಲು ಆಡಳಿತಗಾರರಿಂದ ಅಧಿಕಾರ ಹೊಂದಿರುವ ವ್ಯಕ್ತಿಯು ಧರಿಸುವ ಧಾರ್ಮಿಕ ಲಾಂಛನ ಮತ್ತು ರಾಜಮನೆತನದ ಮಹಿಳೆಯರು ಧರಿಸುತ್ತಿದ್ದ 1 ಬೆಳ್ಳಿಯ ಡಾಬೂ ಸೇರಿದೆ.

ದೆಹಲಿ ವಿಮಾನ ನಿಲ್ದಾಣದಲ್ಲಿ 21.06.1994 ರಂದು ಹಾಂಕಾಂಗ್‌ ಗೆ ಪ್ರಯಾಣಿಸುತ್ತಿದ್ದ ಇಬ್ಬರು ವಿದೇಶಿ ಪ್ರಜೆಗಳನ್ನು ಕಸ್ಟಮ್ಸ್ ಅಧಿಕಾರಿಗಳು ತಡೆದು ಈ ಪುರಾತನ ನಾಣ್ಯಗಳು, ತಾಮ್ರದ ಸ್ಟಾಂಪ್ / ಸೀಲುಗಳು, ಬೆಳ್ಳಿ ಡಾಬು ಮತ್ತು ಇತರ ಪ್ರಾಚೀನ ವಸ್ತುಗಳನ್ನು ವಶಪಡಿಸಿಕೊಂಡಿದ್ದರು. ನಂತರದ ಶೋಧನೆಯಲ್ಲಿ ಉಳಿದ ಚಿನ್ನದ ನಾಣ್ಯಗಳು ಮತ್ತು ವಸ್ತುಗಳನ್ನು ನಗರದ ಮನೆಯೊಂದರಿಂದ ವಶಪಡಿಸಿಕೊಳ್ಳಲಾಗಿತ್ತು.

ಕಾನೂನು ಪ್ರಕ್ರಿಯೆಗಳು ಪೂರ್ಣಗೊಂಡ ತರುವಾಯ, ಭಾರತೀಯ ಕಸ್ಟಮ್ಸ್ ಮುಟ್ಟುಗೋಲು ಹಾಕಿಕೊಳ್ಳಲಾದ ಈ ಪ್ರಾಚೀನ ನಾಣ್ಯ/ವಸ್ತುಗಳ ಮೌಲ್ಯವನ್ನು ನಿರ್ಧರಣೆ ಮಾಡಲು ಭಾರತೀಯ ಪುರಾತತ್ವ ಸರ್ವೇಕ್ಷಣೆ ವಿಭಾಗಕ್ಕೆ ಮನವಿ ಮಾಡಿತ್ತು ಮತ್ತು ಈ ವಸ್ತುಗಳ ಮೌಲ್ಯ ನಿರ್ಧರಣೆಗೆ ಸಮಿತಿ ರಚಿಸಲಾಗಿತ್ತು. ಸಮಿತಿಯು 2020 ಜನವರಿ/ಜೂನ್ ನಲ್ಲಿ ತನ್ನ ವರದಿ ಸಲ್ಲಿಸಿತ್ತು ಮತ್ತು 40,301 ಪ್ರಾಚೀನ ವಸ್ತುಗಳ ಮೌಲ್ಯ 63.90 ಕೋಟಿ ಎಂದು ನಿರ್ಧರಣೆ ಮಾಡಿತ್ತು. ನಂತರ ಸಿಬಿಐಸಿ ಹೊರಡಿಸಿದ 2019 ರ ವಿಲೇವಾರಿ ಕೈಪಿಡಿಯ ಪ್ಯಾರಾ 17.9 ರ ಪ್ರಕಾರ, ಈ ಮುಟ್ಟುಗೋಲು ಹಾಕಿದ ವಸ್ತುಗಳನ್ನು ಇಲಾಖೆಯಿಂದ ಭಾರತ ಪುರಾತತ್ವ ಸಮೀಕ್ಷೆಗೆ ಹಸ್ತಾಂತರಿಸಲಾಗುತ್ತಿದೆ.

Subscribe to our newsletter!

Other related posts

error: Content is protected !!