ಕಲಬೆರಕೆ ಉತ್ಪನ್ನ ಮಾರಾಟ ಮಾಡಿದರೆ ನಿರ್ದಾಕ್ಷಿಣ್ಯ ಕ್ರಮ: ಜಿಲ್ಲಾಧಿಕಾರಿ ಜಿ. ಜಗದೀಶ್
ಉಡುಪಿ, ನ 11 : ಜನಸಾಮಾನ್ಯರ ಆರೋಗ್ಯದ ಮೇಲೆ ದುಷ್ಮಾರಿಣಾಮ ಬೀರುವಂತಹ ಕಲ ಬೆರೆಕೆ ಉತ್ಪನ್ನಗಳ ತಯಾರಕರು ಸೇರಿದಂತೆ ಮಾರಾಟಗಾರರ ಮೇಲೆ ಕಾನೂನಿನ ಅಡಿಯಲ್ಲಿ ನಿರ್ದಾಕ್ಷö್ಯಣ ಕ್ರಮಗಳನ್ನು ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿ ಜಿ ಜಗದೀಶ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಅವರು ಇಂದು ನಗರದ ಜಿಲ್ಲಾ ಪಂಚಾಯತ್ ಡಾ. ವಿ.ಎಸ್ ಆಚಾರ್ಯ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಆಹಾರ ಸುರಕ್ಷತೆಯ ಸಲಹಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಮಾರುಕಟ್ಟೆಗಳಲ್ಲಿ ಕಲಬೆರಕೆ ಉತ್ಪನ್ನಗಳು ಮಾರಾಟವಾಗುತ್ತಿವೆ ಎಂಬ ದೂರುಗಳು ಕೇಳಿಬರುತ್ತಿವೆ. ಇಂತಹ ಕಲಬೆರಕೆ ರಾಸಾಯನಿಕ ಮಿಶ್ರ ಆಹಾರಗಳ ಸೇವನೆಯಿಂದ ಜನಸಾಮಾನ್ಯರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಿ ಮಾರಕ ರೋಗಗಳು ಉಂಟಾಗುತ್ತವೆ. ಇವುಗಳಿಗೆ ಕಡಿವಾಣ ಹಾಕಲು ಅಧಿಕಾರಿಗಳು ಮುಂದಾಗಬೇಕೆಂದು ಸೂಚನೆ ನೀಡಿದರು.
ಆಹಾರ ಉದ್ಯಮಿಗಳು ತಮ್ಮ ಆಹಾರ ತಯಾರಿಕಾ ಕಾರ್ಯ ಚಟುವಟಿಕೆಗಳನ್ನು ಕೈಗೊಳ್ಳಲು ಎಫ್.ಎಸ್.ಎಸ್.ಐ ಅಡಿಯಲ್ಲಿ ತಪ್ಪದೇ ಕಾನೂನಿನ ಅನ್ವಯ ನೊಂದಣಿ ಮಾಡಿ ಪರವಾನಿಗೆ ಪಡೆಯಬೇಕು. ಮಾಡಿಸಬೇಕು. ತಪ್ಪಿದ್ದಲ್ಲಿ ಅಂತಹವರ ಮೇಲೆ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.
ಜಿಲ್ಲಾಧಿಕಾರಿ ಹೇಳಿದ ಪ್ರಮುಖ ಅಂಶಗಳು
- ಸಿಹಿ ಪದಾರ್ಥ, ಕಾಂಡಿಮೆಂಟ್ಸ್ ತಯಾರಕರು ಹಾಗೂ ಚಿಲ್ಲರೆ ವ್ಯಾಪಾರಿಗಳು ತಪ್ಪದೇ ತಯಾರಿಸಿದ ದಿನಾಂಕ ಹಾಗೂ ಬಳಕೆ ಅವಧಿ ಮುಗಿಯುವ ಅವಧಿಯ ದಿನಾಂಕಗಳನ್ನು ಟ್ರೆöÊನಲ್ಲಿ ಪ್ರದರ್ಶಿಸಬೇಕು. ತಪ್ಪಿದ್ದಲ್ಲಿ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು.
- ಪ್ರಸಾದ ವಿನಿಯೋಗ ಮಾಡುವ ಆರಾಧನಾಲಾಯಗಳು ಕಡ್ಡಾಯವಾಗಿ ನೊಂದಣಿ ಮಾಡುವುದರೊಂದಿಗೆ ಪರವಾನಿಗೆ ಪಡೆಯಬೇಕು. ಪ್ರಸಾದ ತಯಾರಿಕಾ ಕೋಣೆಗಳಲ್ಲಿ ಸಿ.ಸಿಟಿ.ವಿ ಅಳವಡಿಸಬೇಕು. ಯಾವುದೇ ಅನಧೀಕೃತ ವ್ಯಕ್ತಿಗಳು ಪ್ರವೇಶಿಸದಂತೆ ಎಚ್ಚರ ವಹಿಸಬೇಕು.
- ಜಿಲ್ಲೆಗೆ ಹೊರಗಿನಿಂದ ಬರುವ ಹಾಗೂ ಇಲ್ಲಿಂದ ಹೋಗುವ ಮೀನುಗಳು ಕೆಡದಂತೆ ಮಾಡಲು ರಾಸಾಯನಿಕಗಳನ್ನು ಬಳಸುತ್ತಿರುವ ಬಗ್ಗೆ ಕೇಳಿ ಬರುತ್ತಿದ್ದು, ಅಧಿಕಾರಿಗಳು ಆ ಮೀನುಗಳನ್ನು ಪರೀಕ್ಷೆ ಮಾಡಿ ಸೂಕ್ತ ಕ್ರಮ ಕೈಗೊಳ್ಳಬೇಕು.
- ಅಂಗನವಾಡಿಯಲ್ಲಿ ಮಕ್ಕಳಿಗೆ ವಿತರಿಸುವ ಪೌಷ್ಟಿಕ ಆಹಾರದ ಪದಾರ್ಥಗಳನ್ನು ಸಹ ಪರೀಕ್ಷೆಗೆ ಒಳಪಡಿಸುವುದರ ಜೊತೆಗೆ ಆಹಾರ ದಾಸ್ತಾನುಗಳ ಮಳಿಗೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು.
- ಬೀದಿ ಬದಿ ವ್ಯಾಪಾರಿಗಳು, ಹೋಟೆಲ್‌ಗಳು, ಬೇಕರಿಗಳು ಸೇರಿದಂತೆ ಮತ್ತಿತರ ಆಹಾರ ಉತ್ಪನ್ನ ತಯಾರಿಕಾ ಘಕಟಗಳಿಗೆ ಅಧಿಕಾರಿಗಳು ಆಗಿಂದ್ದಾಗೆ ಭೇಟಿ ನೀಡಿ ಸುರಕ್ಷತೆ ಮತ್ತು ಸ್ವಚ್ಛತೆ ಬಗ್ಗೆ ಪರಿಶೀಲಿಸಬೇಕು. ಆಹಾರ ಗುಣಮಟ್ಟದ ಬಗ್ಗೆ ಸಂಶಯ ಬಂದಲ್ಲಿ ಆಹಾರ ಮಾದರಿಗಳನ್ನು ತೆರೆದು ಪರೀಕ್ಷೆಗೆ ಒಳಪಡಿಸಬೇಕು.
- ಹಾಲು ಹಾಗೂ ಹಾಲಿನ ಉತ್ಪನ್ನಗಳು ಕುಡಿಯುವ ನೀರಿನ ಮಾದರಿಗಳನ್ನು ತೆಗೆದು ಪ್ರಯೋಗ ಶಾಲಾ ವಿಶ್ಲೇಷಣೆಗೆ ಕಳುಹಿಸಿ ಫಲಿತಾಂಶದ ಆಧಾರದ ಮೇಲೆ ಅವುಗಳ ಮೇಲೆ ಕ್ರಮ ಕೈಗೊಳ್ಳಬೇಕು.
- ಹೋಟೆಲ್‌ಗಳು ಸೇರಿದಂತೆ ಮತ್ತಿತರ ಎಣ್ಣೆ, ಕರಿದ ಪದಾರ್ಥಗಳನ್ನು ಉತ್ಪಾದಿಸುವವರು ಕರಿದ ಎಣ್ಣೆಯನ್ನೇ ಮರು ಬಳಕೆ ಮಾಡದಂತೆ ಆಹಾರ ತಪಾಸಣಾ ಅಧಿಕಾರಿಗಳು ಸೂಚನೆ ನೀಡಬೇಕು.
- ಪ್ರತೀ ತಿಂಗಳು ಆಹಾರ ಸಂಸ್ಥೆಯ ಅಧಿಕಾರಿಗಳು ನಿಗಧಿಪಡಿಸಿದ ಸಂಖ್ಯೆಯಷ್ಟು ಆಹಾರ ಮಾದರಿಗಳ ಸ್ಯಾಂಪಲ್‌ಗಳನ್ನು ಪರೀಕ್ಷೆಗಳಿಗೆ ಕಡ್ಡಾಯವಾಗಿ ಕಳುಹಿಸಿಕೊಡಬೇಕು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ನವೀನ್ ಭಟ್ ವೈ, ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಸುಧೀರ್ ಚಂದ್ರ ಸೂಡ, ಜಿಲ್ಲಾ ಸರ್ವೇಕ್ಷಣಾ ಅಧಿಕಾರಿ ವಾಸುದೇವ ,ಹಿರಿಯ ಆಹಾರ ಸುರಕ್ಷಿತ ಅಧಿಕಾರಿ ವೆಂಕಟೇಶ್ ಮತ್ತಿತರರು ಉಪಸ್ಥಿತರಿದ್ದರು.