ಕೆನರಾ ಬ್ಯಾಂಕ್ ಆರ್‍ಸೆಟಿಯಲ್ಲಿ ಕೃತಕ ಆಭರಣ ತಯಾರಿಕೆ ಕುರಿತು ಉಚಿತ ತರಬೇತಿ

 ಕೆನರಾ ಬ್ಯಾಂಕ್ ಆರ್‍ಸೆಟಿಯಲ್ಲಿ ಕೃತಕ ಆಭರಣ ತಯಾರಿಕೆ ಕುರಿತು ಉಚಿತ ತರಬೇತಿ
Share this post

ಉಡುಪಿ, ನ ೦3: ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆ (CBRSETI) ಮಣಿಪಾಲ ಇವರ ವತಿಯಿಂದ ನಿರುದ್ಯೋಗಿ ಸ್ವಉದ್ಯೋಗಾಕಾಂಕ್ಷಿಗಳಿಗಾಗಿ 18 ನವೆಂಬರ್ 2020 ರಿಂದ 13 ದಿನಗಳ “ಕೃತಕ ಆಭರಣಗಳ ತಯಾರಿಕೆ”ಉಚಿತ ತರಬೇತಿಯನ್ನು ಮಣಿಪಾಲದಲ್ಲಿ ಹಮ್ಮಿಕೊಳ್ಳಲಾಗಿದೆ.

ತರಬೇತಿಯಲ್ಲಿ ಊಟ – ವಸತಿ ಸಂಪೂರ್ಣವಾಗಿ ಉಚಿತವಾಗಿದ್ದು; ಸಂಬಂಧಿಸಿದ ಕ್ಷೇತ್ರದ ಬಗ್ಗೆ ವಿಸ್ತಾರವಾಗಿ ತಿಳಿಸುವುದರ ಜೊತೆಗೆ ಉದ್ಯಮಶೀಲತೆ ಹಾಗೂ ವ್ಯಕ್ತಿತ್ವ ವಿಕಸನಕ್ಕೆ ಸಂಬಂಧಿಸಿ ಮಾಹಿತಿ ನೀಡಲಾಗುತ್ತದೆ.

ಉಡುಪಿ, ದಕ್ಷಿಣ ಕನ್ನಡ, ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಗಳ ವ್ಯಾಪ್ತಿಯಲ್ಲಿ ನೆಲೆಸಿರುವ 18 ರಿಂದ 45 ರೊಳಗಿನ ವಯೋಮಾನದ ನಿರುದ್ಯೋಗಿ ಯುವತಿಯರು ಈ ತರಬೇತಿಯಲ್ಲಿ ಭಾಗವಹಿಸಲು ಅರ್ಹರಾಗಿರುತ್ತಾರೆ.

ಆಸಕ್ತ ಅರ್ಹ ಅಭ್ಯರ್ಥಿಗಳು ಕೂಡಲೇ ತಮ್ಮ ಹೆಸರು, ಪೂರ್ಣವಿಳಾಸ, ಪಿನ್ ಕೋಡ್, ಸಂಪರ್ಕಕ್ಕೆ ಲಭ್ಯವಿರುವ ದೂರವಾಣಿ ಸಂಖ್ಯೆ, ವಯಸ್ಸು, ವಿದ್ಯಾರ್ಹತೆ, ಪಡೆಯಲಿಚ್ಚಿಸಿರುವ ತರಬೇತಿಯ ಹೆಸರು, ಮುಂತಾದ ಮಾಹಿತಿಯೊಂದಿಗೆ ಖಾಲಿ ಹಾಳೆಯಲ್ಲಿ ಅರ್ಜಿಯನ್ನು ಬರೆದು ದಿನಾಂಕ ನವೆಂಬರ್ 13 ರೊಳಗೆ ಈ ಕೆಳಗಿನ ವಿಳಾಸಕ್ಕೆ ತಲುಪುವಂತೆ ಕಳುಹಿಸಿಕೊಡಬೇಕು.

ಒಬ್ಬ ಅಭ್ಯರ್ಥಿಗೆ ಒಂದು ತರಬೇತಿಯನ್ನು ಪಡೆಯಲು ಅವಕಾಶವಿರುತ್ತದೆ. ಗ್ರಾಮೀಣ ಪ್ರದೇಶದ ಬಿ.ಪಿ.ಎಲ್ ಕುಟುಂಬದ ಅಭ್ಯರ್ಥಿಗಳಿ ಮೊದಲ ಪ್ರಾಶಸ್ತ್ಯ ನೀಡಲಾಗುವುದು ಎಂದು ಸಂಸ್ಥೆಯ ಪತ್ರಿಕಾ ಪ್ರಕಟಣೆ ತಿಳಿಸಿದೆ.

ಸಂಸ್ಥೆಯ ದೂರವಾಣಿ ಸಂಖ್ಯೆ: 0820-2570455
ವಿಳಾಸ: ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆ, (ಅಃಖSಇಖಿI)
ಕೆನರಾ ಬ್ಯಾಂಕ್ ಪ್ರ್ರಧಾನ ಕಛೇರಿ (ಅನೆಕ್ಸ್) ಸಂಕೀರ್ಣ,
ಮಣಿಪಾಲ – 576104

Subscribe to our newsletter!

Other related posts

error: Content is protected !!