ಉಡುಪಿ ಶ್ರೀಕೃಷ್ಣ ಮಠ: ದರ್ಶನ ಅವಧಿ ವಿಸ್ತರಣೆ

 ಉಡುಪಿ ಶ್ರೀಕೃಷ್ಣ ಮಠ: ದರ್ಶನ ಅವಧಿ ವಿಸ್ತರಣೆ
Share this post

ಉಡುಪಿ ನ.1: ಭಕ್ತರ ಅನುಕೂಲಕ್ಕಾಗಿ ನವೆಂಬರ್ 4ರಿಂದ ಉಡುಪಿ ಶ್ರೀಕೃಷ್ಣ ಮಠದಲ್ಲಿ ದೇವರ ದರ್ಶನದ ಸಮಯ ವಿಸ್ತರಿಸಲಾಗಿದೆ.

ನವೆಂಬರ್ 4ರಿಂದ ಬೆಳಿಗ್ಗೆ 8.30 ರಿಂದ ಬೆಳಿಗ್ಗೆ 10.00 ರವರೆಗೆ ಹಾಗೂ ಈ ಹಿಂದಿನಂತೆ ಮಧ್ಯಾಹ್ನದ ಸಮಯವನ್ನು 2.00 ರಿಂದ ಸಂಜೆ 5.00ರ ಬದಲು 6:00 ಗಂಟೆವರೆಗೆ ವಿಸ್ತರಿಸಿ, ಭಕ್ತಾದಿಗಳಿಗೆ ಹೆಚ್ಚು ಅನುಕೂಲವಾಗುವಂತೆ ಶ್ರೀಕೃಷ್ಣನ ದರ್ಶನ ಲಭಿಸುವ ಅವಕಾಶವನ್ನು ಪರ್ಯಾಯ ಶ್ರೀಪಾದರು ಕಲ್ಪಿಸಿದ್ದಾರೆ ಎಂದು ಶ್ರೀಮಠದ ವ್ಯವಸ್ಥಾಪಕರು ತಿಳಿಸಿದ್ದಾರೆ.

ಕೋವಿಡ್ 19, ಲಾಕ್ ಡೌನ್ ನಿಂದಾಗಿ ಉಡುಪಿ ಶ್ರೀಕೃಷ್ಣ ಮಠದಲ್ಲಿ ಭಕ್ತರಿಗೆ ಮಾರ್ಚ್ 22ರಿಂದ-ಸೆಪ್ಟಂಬರ್ 27ರವರೆಗೆ ದೇವರ ದರ್ಶನದ ವ್ಯವಸ್ಥೆಯನ್ನು ಕನಕನ ಕಿಂಡಿಯಲ್ಲಿ ಮಾಡಲಾಗಿತ್ತು.

ನಂತರ ಪರ್ಯಾಯ ಪೀಠಾಧಿಪತಿಗಳಾದ ಶ್ರೀ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಸೆಪ್ಟೆಂಬರ್ 28ರಿಂದ ಮಧ್ಯಾಹ್ನ 2.00ರಿಂದ ಸಂಜೆ 5.00 ಗಂಟೆಯವರೆಗೆ ಶ್ರೀಕೃಷ್ಣನ ದರ್ಶನದ ವ್ಯವಸ್ಥೆಯನ್ನು ಭಕ್ತರಿಗೆ ಶ್ರೀಮಠದ ಒಳಭಾಗದಲ್ಲಿ ಅವಕಾಶವನ್ನು ಕಲ್ಪಿಸಿದರು.

ಈಗ ಸ್ಥಳೀಯ ಹಾಗೂ ಪರವೂರ ಭಕ್ತರ ಅನುಕೂಲಕ್ಕಾಗಿ ದೇವರ ದರ್ಶನದ ಸಮಯ ವಿಸ್ತರಿಸಲಾಗಿದೆ.

Subscribe to our newsletter!

Other related posts

error: Content is protected !!