ಕರ್ನಾಟಕ ರಾಜ್ಯೋತ್ಸವ ಪ್ರಯುಕ್ತ ಅಂತಾರಾಷ್ಟ್ರೀಯ ತುಳು ವಿಚಾರ ಗೋಷ್ಠಿ
ಮಂಗಳೂರು, ಅ 30: ಕರ್ನಾಟಕ ರಾಜ್ಯೋತ್ಸವದ ಪ್ರಯುಕ್ತ ಅಂತಾರಾಷ್ಟ್ರೀಯ ತುಳು ವಿಚಾರ ಗೋಷ್ಠಿ ನವಂಬರ್ 1 ರಂದು 2.30ರಿಂದ ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜು ಹಂಪನ್‌ಕಟ್ಟೆಯ ಶಿವರಾಮ ಕಾರಂತ ಸಭಾಂಗಣದಲ್ಲಿ ನಡೆಯಲಿದೆ.
ಈ ಕಾರ್ಯಕ್ರಮವು ಮಂಗಳೂರು ವಿಶ್ವವಿದ್ಯಾಲಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ತುಳು ಅಧ್ಯಯನ ಪೀಠ, ತುಳು ಸ್ನಾತಕೋತ್ತರ ಅಧ್ಯಯನ ವಿಭಾಗ ವಿವಿ ಸಂಧ್ಯಾ ಕಾಲೇಜು, ನಮ್ಮ ತುಳುನಾಡ್ ಟ್ರಸ್ಟ್ (ರಿ) ಮತ್ತು ತುಳುವರ್ಲ್ಡ್ (ರಿ) ಕುಡ್ಲ ಇವರ ಸಂಯುಕ್ತಾಶ್ರಯದಲ್ಲಿ ನಡೆಯಲಿದೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಂಗಳೂರು ವಿಶ್ವವಿದ್ಯಾನಿಲಯ ಕುಲಪತಿ ಡಾ| ಪಿ.ಎಸ್. ಯಡಪಡಿತ್ತಾಯ ವಹಿಸಲಿದ್ದು, ಉದ್ಘಾಟನೆಯನ್ನು ಶ್ರೀ ವರ್ಧಮಾನ ದುರ್ಗಾಪ್ರಸಾದ ಶೆಟ್ಟಿ ಗಡಿಕಾರರು, ಗೋಳಿದಡಿಗುತ್ತು, ಗುರುಪುರ ಇವರು ನೆರವೇರಿಸಲಿದ್ದಾರೆ.
ಡಾ| ಪುರುಷೋತ್ತಮ ಬಿಳಿಮಲೆ ಪೂರ್ವ ಪ್ರಾಧ್ಯಾಪಕರು ಜೆ. ಎನ್. ಯು. ದೆಹಲಿ, ಸರ್ವೋತ್ತಮ ಶೆಟ್ಟಿ ಅಬುಧಾಬಿ ಸದಸ್ಯರು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ವೀಣಾ ಟಿ. ಶೆಟ್ಟಿ, ಡೆಪ್ಯುಟಿ ಜನರಲ್ ಮ್ಯಾನೇಜರ್ ಎಂ.ಆರ್.ಪಿ.ಎಲ್. ಮಂಗಳೂರು ಮೊದಲಾದವರು ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡುವರು.
ನಂತರ ನಡೆಯುವ ತುಳು ಬಾಸೆ ಕಲ್ಪುನೆಡ್ದ್ ಪ್ರಯೋಜನ ಎಂಬ ವಿಷಯದ ಬಗ್ಗೆ ಶೇಷಶಯನ ಕಾರಿಂಜ ಮಾತನಾಡಲಿದ್ದು, ಅಧ್ಯಕ್ಷತೆಯನ್ನು ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ, ವಹಿಸಲಿದ್ದಾರೆ.
ಎಸ್.ಆರ್.ಬಂಡಿಮಾರ್ ಪ್ರಧಾನ ಸಂಪಾದಕರು, ಟೈಮ್ಸ್ ಆಪ್ ಕುಡ್ಲ, ರಮಾನಂದ ಎಂ. ಶೆಟ್ಟಿ, ಅಧ್ಯಕ್ಷರು, ತುಳು ವಿಭಾಗ ಇಂಡಿಯನ್ ಸೋಷಿಯಲ್ ಕ್ಲಬ್, ಮಸ್ಕತ್-ಓಮನ್, ಶರತ್ ಶೆಟ್ಟಿ ಪಡುಪಲ್ಲಿ ಹರಿಕಥೆಗಾರರು, ನೈಜೀರಿಯಾ ಮೊದಲಾದವರು ವಿಚಾರಗಳನ್ನು ಮಂಡಿಸಲಿದ್ದಾರೆ.
ಎರಡನೇ ವಿಚಾರ ಗೋಷ್ಠಿ ತುಳುಭಾಷೆ ಬುಲೆಚ್ಚಿಲ್ ಬುಕ್ಕ ಸಾಧ್ಯತೆ ಎಂಬ ವಿಷಯದ ಬಗ್ಗೆ ಚಂದ್ರಹಾಸ ಬಿ ರೈ ಮಾಜಿ ರಿಜಿಸ್ಟಾರ್ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಇವರು ಮಾತನಾಡಲಿದ್ದು, ಡಾ| ಮಾಧವ ಎಂ.ಕೆ. ಸಂಯೋಜಕರು, ಧರ್ಮಸ್ಥಳ ಮಂಜುನಾಥೇಶ್ವರ ತುಳು ಅಧ್ಯಯನ ಪೀಠ, ಮಂಗಳೂರು ವಿ.ವಿ. ಇವರು ಅಧ್ಯಕ್ಷತೆ ವಹಿಸಲಿದ್ದಾರೆ.
ಡಾ| ನಿರಂಜನ ರೈ ಅಧ್ಯಕ್ಷರು ತುಳುರಾಜ್ಯ ಚಾವಡಿ, ಉಬಾರ್ ಶಾಂತಾರಾಮ್. ವಿ. ಶೆಟ್ಟಿ, ಬೆಂಗಳೂರು, ಸುರೇಂದ್ರ ಮಾರ್ನಾಡ್, ಮುಂಬೈ ಮೊದಲಾದವರು ವಿಚಾರಗಳನ್ನು ಮಂಡಿಸಲಿದ್ದಾರೆ.
ಸಂಜೆ 5 ಘಂಟೆಗೆ ಸಡೆಯುವ ಸಮಾರೋಪ ಸಮಾರಂಭದ ಅಧೈಕ್ಷತೆಯನ್ನು ಪ್ರೊ. ಪಿ.ಎಲ್.ಧರ್ಮ ಕುಲ ಸಚಿವೆರ್, ಪರಿಕ್ಷಾಂಗ ಮಂಗಳೂರು ವಿಶ್ವವಿದ್ಯಾಲಯ ವಹಿಸಲಿದ್ದು, ಸಮಾರೋಪ ಭಾಷಣವನ್ನು ಶ್ರೀ ಹರಿಕೃಷ್ಣ ಪುನರೂರು ಮಾಡಲಿದ್ದು, ಡಾ| ರಾಮಕೃಷ್ಣ ಬಿ.ಎಂ. ಪ್ರಿನ್ಸಿಪಾಲ್, ವಿ.ವಿ.ಸಂಧ್ಯಾ ಕಾಲೇಜು, ಡಾ.| ರವಿ ಶೆಟ್ಟಿ ಮೂಡಂಬೈಲ್ ಕತಾರ್, ಸುರೇಶ್ ಪೂಂಜ ಆಸ್ಟ್ರೆಲಿಯಾ ಮೊದಲಾದವರು ಕಾರ್ಯಕ್ರಮವನ್ನುದ್ದೇಶಿಸಿ ಮಾತವಾಡಲಿರುವರು.
ಕಾರ್ಯಕ್ರಮವು ಕೋವಿಡ್ ಮಾನದಂಡ ಪ್ರಕಾರ ನಡೆಯಲಿದ್ದು, ಹೊರ ರಾಷ್ಟದ ಅತಿಥಿಗಳು ಅಂರ್ತಾಜಾಲ ಮುಖಾಂತರ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಲಿದ್ದಾರೆ.
ಕಾರ್ಯಕ್ರಮದಲ್ಲಿ ನೇರ ಭಾಗವಹಿಸುವವರಿಗೆ ಪ್ರಮಾಣ ಪತ್ರ ನೀಡಲಾಗುವುದು ಎಂದು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ತುಳು ಅಧ್ಯಯನ ಪೀಠದ ಸಂಯೊಜಕ ಡಾ| ಮಾಧವ ಎಂ.ಕೆ. ನಮ್ಮ ತುಳುನಾಡ್ ಟ್ರಸ್ಟ್ (ರಿ) ಅಧ್ಯಕ್ಷೆ ವಿದ್ಯಾಶ್ರೀ ಎಸ್. ಉಳ್ಳಾಲ್ ಮತ್ತು ತುಳುವರ್ಲ್ಡ್ (ರಿ) ಕುಡ್ಲ ಅಧ್ಯಕ್ಷರಾದ ಡಾ. ರಾಜೇಶ್ ಕೃಷ್ಣಆಳ್ವ ಇವರು ತಿಳಿಸಿದ್ದಾರೆ.