ಉಡುಪಿ ಮಕ್ಕಳ ರಕ್ಷಣಾ ಘಟಕ ನೇತೃತ್ವದಲ್ಲಿ ಉತ್ತರ ಕರ್ನಾಟಕದ 17 ಮಕ್ಕಳ ರಕ್ಷಣೆ
ಉಡುಪಿ, ಅ 29: ಇಂದು ಬೆಳ್ಳಂಬೆಳಗ್ಗೆ ಮಕ್ಕಳ ರಕ್ಷಣಾ ಘಟಕ ಹಾಗೂ ಇತರ ಇಲಾಖಾ ಅಧಿಕಾರಿಗಳು ಮಲ್ಪೆ ಬಂದರಿನಲ್ಲಿ 17 ಮಕ್ಕಳನ್ನು ರಕ್ಷಿಸಿದ್ದಾರೆ.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ,.ಕಾರ್ಮಿಕ ಇಲಾಖೆ, ಶಿಕ್ಷಣ ಇಲಾಖೆ .ಪೊಲೀಸ್ ಇಲಾಖೆ .ಮಕ್ಕಳ ಸಹಾಯವಾಣಿ ಅಧಿಕಾರಿಗಳು ಹಾಗೂ, ನಾಗರಿಕ ಸೇವಾ ಟ್ರಸ್ಟ್ -ಉಡುಪಿ ಕಾರ್ಯಕರ್ತರು ಗುರುವಾರ ಸುಮಾರು ಐದು ಘಂಟೆ ಸಮಯಕ್ಕೆ ಉಡುಪಿಯ ಮಲ್ಪೆ ಬಂದರಿಗೆ ತೆರಳಿ ಅಲ್ಲಿ ಮೀನು ಆಯುವ 17 ಮಕ್ಕಳನ್ನು ರಕ್ಷಿಸಿದರು.
“ಈ ಮಕ್ಕಳು ಬಳ್ಳಾರಿ ಮತ್ತು ಕೊಪ್ಪಳ ಮೂಲದವರು. ತಮ್ಮ ತಂದೆ ತಾಯಿ ಜೊತೆ ಉಡುಪಿಯಲ್ಲಿಯೇ ವಾಸ ಇರುವ ಈ ಮಕ್ಕಳು ಮಲ್ಪೆ ಬಂದರಿನಲ್ಲಿ ಮೀನು ಆಯುವ ಕೆಲಸ ಮಾಡುತ್ತಿದ್ದರು,” ಎಂದು ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಕಾನೂನು ಪರಿವೀಕ್ಷಣಾಧಿಕಾರಿ ಪ್ರಭಾಕರ ಆಚಾರ್ ಹೇಳಿದರು.
ಮಕ್ಕಳನ್ನು ಕಲ್ಯಾಣ ಸಮಿತಿ ಮುಂದೆ ಹಾಜರು ಪಡಿಸಲಾಗಿದೆ .
ಸೂಕ್ತವಾದ ದಾಖಲೆಗಳು ನೀಡಿದಲ್ಲಿ ಮಕ್ಕಳನ್ನು ಅವರ ಹೆತ್ತವರೊಂದಿಗೆ ಕಳುಹಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದರು.
ಕಾರ್ಯಾಚರಣೆಯಲ್ಲಿ ಜಿಲ್ಲಾ ಮಕ್ಕಳ ರಕ್ಷಾಣಾಧಿಕಾರಿ ಸದಾನಂದ ನಾಯಕ್,.ಕಾನೂನು ಪರಿವೀಕ್ಷಣಾಧಿಕಾರಿ ಪ್ರಭಾಕರ ಆಚಾರ್ .ರಕ್ಷಾಣಾಧಿಕಾರಿ ಮಹೇಶ್ ದೇವಾಡಿಗ .ಕಾರ್ಮಿಕ ಅಧಿಕಾರಿ ಕುಮಾರ್ .ಕಾರ್ಮಿಕ ನಿರೀಕ್ಷಕ ಪ್ರವೀಣ್ .ಸಾರ್ವಜನಿಕ ಶಿಕ್ಷಣ ಇಲಾಖೆಯ ವಿಷಯ ಪರಿವೀಕ್ಷಕ ನಾಗರಾಜ್ .ರಕ್ಷಣಾ ಘಟಕದ ಸಮಾಜ ಕಾರ್ಯಕರ್ತರಾದ ಯೋಗೀಶ್ .ಸುರಕ್ಷಾ .ಸುನಂದಾ .ಮಹಿಳಾ ಪೊಲೀಸ್ ಠಾಣಾ ಸಿಬ್ಬಂದಿಗಳಾದ ಸಾವಿತ್ರಿ .ಅರುಣಾ .ಮಲ್ಪೆ ಪೊಲೀಸ್ ಠಾಣಾ ಸಿಬ್ಬಂದಿಗಳಾದ ಸವಿತಾ .ಜಗದೀಶ್ .ನಿತ್ಯಾನಂದ ಒಳಕಾಡು .ಶಿಲ್ಪಾ .ಸುಶ್ಮಿತಾ .ಮಕ್ಕಳ ಸಹಾಯವಾಣಿಯ ಕಸ್ತೂರಿ .ತ್ರಿವೇಣಿ, ನೇತ್ರ, ವಿಶ್ವಾಸದಮನೆ ಶಂಕರಪುರ ಸಂಸ್ಥೆಯ ಕ್ರಿಸ್ಟೋಪರ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ಧರು.
ಅಧಿಕಾರಿಗಳು ಹಲವು ಬಾರಿ ದಾಳಿ ಮಾಡಿ ಮಕ್ಕಳನ್ನು ಮಲ್ಪೆಯಲ್ಲಿ ರಕ್ಷಿಸಿದ್ದರೂ ಇಂತಹ ಪ್ರಕರಣಗಳು ಪದೇ ಪದೇ ನಡೆಯುತ್ತಾ ಇರುತ್ತವೆ.