ದೇವಸ್ಥಾನ ಹಾಗೂ ದೈವಸ್ಥಾನಗಳ ವ್ಯವಸ್ಥಾಪನಾ ಸಮಿತಿ ರಚನೆಗೆ ಅರ್ಜಿ ಆಹ್ವಾನ

 ದೇವಸ್ಥಾನ ಹಾಗೂ ದೈವಸ್ಥಾನಗಳ ವ್ಯವಸ್ಥಾಪನಾ ಸಮಿತಿ ರಚನೆಗೆ  ಅರ್ಜಿ ಆಹ್ವಾನ
Share this post

ಮಂಗಳೂರು ಅ 27: ಹಿಂದೂ ಧಾರ್ಮಿಕ ದತ್ತಿ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಕಾಯ್ದೆ 1997ರ ಕಲಂ(25) ರನ್ವಯ  ದ.ಕ. ಜಿಲ್ಲೆಯ ಪ್ರವರ್ಗ ‘ಸಿ’ ಗೆ ಸೇರಿದ ದೇವಸ್ಥಾನ ಹಾಗೂ ದೈವಸ್ಥಾನಗಳ  ಪ್ರಸಕ್ತ ಸಾಲಿನ ಜುಲೈ ತಿಂಗಳಿನಲ್ಲಿ ಅವಧಿ ಮುಕ್ತಾಯವಾಗುವ ಸಂಸ್ಥೆಗಳಿಗೆ ಹೊಸದಾಗಿ ವ್ಯವಸ್ಥಾಪನಾ ಸಮಿತಿ ರಚಿಸಲಾಗುತ್ತಿದ್ದು, ಸಮಿತಿಯಲ್ಲಿ ಸದಸ್ಯರಾಗ ಬಯಸುವ ಆಸಕ್ತರಿಂದ ಅರ್ಜಿಗಳನ್ನು ನವೆಂಬರ್ 23 ರೊಳಗೆ ಆಹ್ವಾನಿಸಲಾಗಿದೆ.

 ದೇವಸ್ಥಾನ ಹಾಗೂ ದೈವಸ್ಥಾನಗಳ ವಿವರ ಇಂತಿವೆ:    

ಮಂಗಳೂರು ತಾಲೂಕು

  1. ಕಣ್ಣೂರು ಗ್ರಾಮದ ಶ್ರೀ ಮುಂಡಿತ್ತಾಯ ದೈವಸ್ಥಾನ
  2. ಮದ್ಯ ಗ್ರಾಮದ ಶ್ರೀ ಖಡ್ಡೇಶ್ವರ ಖಡ್ಗೇಶ್ವರಿ ದೇವಿ ದೇವಸ್ಥಾನ
  3. ಧರೆಗುಡ್ಡೆ ಗ್ರಾಮದ ಶ್ರೀ ಶಂಭುಲಿಂಗೇಶ್ವರ ದೇವಸ್ಥಾನ  
  4. ತೋಡಾರು ಗ್ರಾಮದ ಶ್ರೀ ಕೊಡಮಂತ್ತಾಯ ದೈವಸ್ಥಾನ
  5. ತೆಂಕಮಿಜಾರು ಗ್ರಾಮದ ಶ್ರೀ ವಿಷ್ಣುಮೂರ್ತಿ ದೇವಸ್ಥಾನ
  6. ಅಡ್ಡೂರು ಗ್ರಾಮದ ಶ್ರೀ ಮುಖ್ಯಪ್ರಾಣ ದೇವಸ್ಥಾನ
  7. ಕರ್ನಿರೆ ಗ್ರಾಮದ ಶ್ರೀ ಜಾರಂದಾಯ  ದೇವಸ್ಥಾನ
  8. ಕಲ್ಲಮುಂಡ್ಕೂರು ಗ್ರಾಮದ ಶ್ರೀ ಅಬ್ಬಗದಾರಗ ದೈವಸ್ಥಾನ
  9. ಶಿರ್ತಾಡಿ ಗ್ರಾಮದ ಶ್ರೀ ಅರ್ಜುನಾಪುರ ಮಹಾಲಿಂಗೇಶ್ವರ ದೇವಸ್ಥಾನ

ಬಂಟ್ವಾಳ ತಾಲೂಕು –

  1. ಬಾಳ್ತಿಲ ಗ್ರಾಮದ ಕಾಂಪ್ರಬೈಲು ಶ್ರೀ ಅಜ್ಜಾವರ ದೈವಸ್ಥಾನ
  2. ಪಜೀರು ಗ್ರಾಮದ ಶ್ರೀ ಮುಂಡಿತ್ತಾಯ ದೈವಸ್ಥಾನ
  3. ತೆಂಕಬೆಳ್ಳೂರು ಗ್ರಾಮದ ಶ್ರೀ ಕಾವೇಶ್ವರ ದೇವಸ್ಥಾನ
  4. ನರಿಂಗಾನ ಗ್ರಾಮದ ಶ್ರೀ ಮಲರಾಯ ದೈವಸ್ಥಾನ, ಕೈರಂಗಳ ಗ್ರಾಮದ ಶ್ರೀ ಗೋಪಾಲಕೃಷ್ಣ ದೇವಸ್ಥಾನ
  5. ನೆಟ್ಲಮುಡ್ನೂರು ಗ್ರಾಮದ ಶ್ರೀ ಕರಿಂಕ ದುರ್ಗಾಪರಮೇಶ್ವರಿ ದೇವಸ್ಥಾನ
  6. ಪಿಲಾತ್ತಬೆಟ್ಟು ಗ್ರಾಮದ ಕಲ್ಲಬೆಟ್ಟು ಶ್ರೀ ದುರ್ಗಾಪರಮೇಶ್ವರಿ ದೇವಿ ದೇವಸ್ಥಾನ


ಬೆಳ್ತಂಗಡಿ ತಾಲೂಕು –

  1. ಬಡಗಕಾರಂದೂರು ಗ್ರಾಮದ ಶ್ರೀ ಆಳದಂಗಡಿ ಮಹಾಗಣಪತಿ ದೇವಸ್ಥಾನ
  2. ಮಿತ್ತಬಾಗಿಲು ಗ್ರಾಮದ ಶ್ರೀ ಕೂಡಬೆಟ್ಟು ಸದಾಶಿವ ದೇವಸ್ಥಾನ
  3. ಕರಿಮಣೇಲು ಗ್ರಾಮದ ಶ್ರೀ ದೇಲಂಪುರ ಮಹಾಗಣಪತಿ ದೇವಸ್ಥಾನ, ಇಂದಬೆಟ್ಟು ಗ್ರಾಮದ ಶ್ರೀ ಅರ್ಧನಾರೀಶ್ವರ ದೇವಸ್ಥಾನ
  4. ಮಲೆಬೆಟ್ಟು ಕೊಯ್ಯಾತಾರು  ಗ್ರಾಮದ ಶ್ರೀ ಮಹಾಗಣಪತಿ ದೇವಸ್ಥಾನ ಮತ್ತು ಶ್ರೀ ಸುಬ್ರಹ್ಮಣ್ಯ ದೇವಸ್ಥಾನ
  5. ಕಾಳಿಬೆಟ್ಟ ಸವಣಾಲು ಗ್ರಾಮದ ಶ್ರೀ ದುರ್ಗಾಪರಮೇಶ್ವರಿ ದೇವಿ ದೇವಸ್ಥಾನ, ಕಾಳಿಬೆಟ್ಟ

ಪುತ್ತೂರು ತಾಲೂಕು –

  1. ಬನ್ನೂರು ಗ್ರಾಮದ ಸದಾಶಿವ ದೇವಸ್ಥಾನ

ಹೆಚ್ಚಿನ ಮಾಹಿತಿ ಹಾಗೂ ಅರ್ಜಿ ನಮೂನೆಗಾಗಿ  ಜಿಲ್ಲಾ ಧಾರ್ಮಿಕ ಪರಿಷತ್ ಪದನಿಮಿತ್ತ ಕಾರ್ಯದರ್ಶಿ, ಹಿಂದೂ ಧಾರ್ಮಿಕ ದತ್ತಿ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿ ಇಲಾಖೆಯ ಸಹಾಯಕ ಆಯುಕ್ತರು, ದೂ. ಸಂಖ್ಯೆ:0824-2220576  ಸಂಪರ್ಕಿಸಲು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Subscribe to our newsletter!

Other related posts

error: Content is protected !!