ಮಾಸ್ಕ್ ಧರಿಸದ ಸರ್ಕಾರಿ ಬಸ್ ಕಂಡಕ್ಟರ್‌ಗೆ ದಂಡ ವಿಧಿಸಿದ ಜಿಲ್ಲಾಧಿಕಾರಿ ಜಿ.ಜಗದೀಶ್

 ಮಾಸ್ಕ್ ಧರಿಸದ ಸರ್ಕಾರಿ ಬಸ್ ಕಂಡಕ್ಟರ್‌ಗೆ ದಂಡ ವಿಧಿಸಿದ ಜಿಲ್ಲಾಧಿಕಾರಿ ಜಿ.ಜಗದೀಶ್
Share this post

ಉಡುಪಿ, ಅ 17: ಮಾಸ್ಕ್ ಧರಿಸದೇ ಬಸ್ಸಿನಲ್ಲಿ ಕುಳಿತಿದ್ದ ಕಂಡಕ್ಟರ್ ಒಬ್ಬರನ್ನು ತರಾಟೆಗೆ ತೆಗೆದುಕೊಂಡ ಉಡುಪಿ ಜಿಲ್ಲಾಧಿಕಾರಿ ಜಿ ಜಗದೀಶ್ , ತನ್ನ ಜೊತೆ ಇದ್ದ ಪೊಲೀಸ್ ಅಧಿಕಾರಿಗಳ ಬಳಿ ದಂಡ ವಿಧಿಸುವಂತೆ ಹೇಳಿದ ಘಟನೆ ಇಂದು ಉಡುಪಿ ನಗರದಲ್ಲಿ ನಡೆಯಿತು.

ಘಟನೆ ವಿವರ:

ಉಡುಪಿ ಜಿಲ್ಲಾ ನ್ಯಾಯಾಲಯದ ಅವರಣದಲ್ಲಿ ಶನಿವಾರ ನಡೆದ ಕೋವಿಡ್ ಜನಾಂದೋಲನ ಮಾಹಿತಿ ಕಾರ್ಯಕ್ರಮದ ನಂತರ, ಸಮೀಪದ ವಸತಿ ಸಂಕೀರ್ಣದ ಮನೆಗೆ “ನನ್ನ ಕುಟುಂಬ ನನ್ ಜವಾಬ್ದಾರಿ” ಅಭಿಯಾನ ಕಾರ್ಯಕ್ರಮದ ಸ್ಟಿಕ್ಕರ್ ಅಳವಡಿಸಿ ಹೊರ ಬಂದ ಜಿಲ್ಲಾಧಿಕಾರಿ ಜಿ.ಜಗದೀಶ್, ರಸ್ತೆ ದಾಟುವಾಗ ಮುಂದೆ ಹಾದು ಹೋದ ಸರ್ಕಾರಿ ಬಸ್‌ನಲ್ಲಿ ಬಸ್ ಮುಂದುಗಡೆ ಕುಳಿತಿದ್ದ ಕಂಡಕ್ಟರ್ ಮಾಸ್ಕ್ ಧರಿಸದೇ ಕುಳಿತಿರುವನ್ನು ಗಮನಿಸಿದರು.

ಕೂಡಲೇ ಬಸ್ ನಿಲ್ಲಿಸುವಂತೆ ಸೂಚಿಸಿ, ಮಾಸ್ಕನ್ನು ಕತ್ತಿನಿಂದ ಕೆಳಕ್ಕೆ ಸರಿಸಿ ಕುಳಿತಿದ್ದ ಕಂಡಕ್ಟರ್‌ಗೆ ಸ್ಥಳದಲ್ಲೇ ದಂಡ ವಿಧಿಸುವಂತೆ ಸ್ಥಳದಲ್ಲಿದ್ದ ಪೊಲೀಸ್ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ವಾಹನದಲ್ಲಿದ್ದ ಇತರೆ ಪ್ರಯಾಣಿಕರು ಮಾಸ್ಕ್ ಧರಿಸದಿರುವುದನ್ನು ಕಂಡ ಜಿಲ್ಲಾಧಿಕಾರಿ ಅವರಿಗೂ ದಂಡ ವಿಧಿಸುವಂತೆ ಸೂಚಿಸಿದರು.

ಕಂಡಕ್ಟರ್ ಮಾಸ್ಕ್ ಧರಿಸದೇ ಇದ್ದುದಲ್ಲದೇ , ಬಸ್‌ನಲ್ಲಿದ್ದ ಪ್ರಯಾಣಿಕರಿಗೂ ಮಾಸ್ಕ್ ಧರಿಸಲು ಸೂಚಿಸದೆ ಇರುವುದನ್ನು ಕಂಡು ತೀವ್ರ ತರಾಟೆಗೆ ತೆಗೆದುಕೊಂಡರು. ನಂತರ ತನ್ನ ಕತ್ತಲ್ಲಿದ್ದ ಮಾಸ್ಕನ್ನು ಸರಿಯಾಗಿ ಧರಿಸಿದ ಕಂಡಕ್ಟರ್ ಪ್ರಯಾಣ ಮುಂದುವರೆಸಿದರು.

Subscribe to our newsletter!

Other related posts

error: Content is protected !!