ಕೊಂಚಾಡಿ ಶ್ರೀ ಕಾಶೀ ಮಠದಲ್ಲಿ ಲೋಕ ಕಲ್ಯಾಣಾರ್ಥ ಚಂಡಿಕಾ ಯಾಗ
ಮಂಗಳೂರು ಅ 12 : ಕೊಂಚಾಡಿ ಶ್ರೀ ಕಾಶೀ ಮಠದಲ್ಲಿ ಲೋಕ ಕಲ್ಯಾಣಾರ್ಥ ಶತ ಚಂಡಿಕಾ ಯಾಗವು ಅ 12 ರಿಂದ ಅ 16 ವರೆಗೆ ಶ್ರೀಮತ್ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರ ಉಪಸ್ಥಿತಿಯಲ್ಲಿ ಹಾಗೂ ಮಾರ್ಗದರ್ಶನದಲ್ಲಿ ನಡೆಯಲಿದೆ.
ಪ್ರಪಂಚಕ್ಕೆ ತಗಲಿರುವ ಮಹಾಮಾರಿಯ ಅಂತ್ಯಕ್ಕಾಗಿ, ಜನರ ಆತಂಕ ನಿವಾರಣೆಗಾಗಿ , ಆರ್ಥಿಕ ಪರಿಸ್ಥಿತಿ ಸುಧಾರಣೆಗಾಗಿ ಹಾಗೂ ಎಲ್ಲಾ ರೀತಿಯ ತೊಂದರೆಗಳ ನಿವಾರಣೆಗಾಗಿ ಶ್ರೀ ಮಹಾಲಕ್ಷ್ಮಿಯ ಪ್ರೀತ್ಯರ್ಥ ಶತ ಚಂಡಿಕಾ ಹವನ ನಡೆಯಲಿರುವುದು.
ಶತ ಚಂಡಿಕಾ ಯಾಗದ ಪ್ರಥಮ ದಿನದಂದು ಇಂದು ಶ್ರೀ ಸಂಸ್ಥಾನದ ಆರಾಧ್ಯ ದೇವರಾದ ಶ್ರೀ ವ್ಯಾಸರಘುಪತಿ ನರಸಿಂಹ ದೇವರ ಸನ್ನಿಧಾನದಲ್ಲಿ ಶ್ರೀಗಳವರ ಉಪಸ್ಥಿತಿಯಲ್ಲಿ ಮಹಾ ಪ್ರಾರ್ಥನೆ ನಡೆಯಿತು ಬಳಿಕ ವಿವಿಧ ಗೋತ್ರೆಯ ವೈಧಿಕರಿಗೆ ರತ್ವಿಜಾವರಣ ಹಾಗೂ ದುರ್ಗಾಸಪ್ತಶತಿ ಪಾರಾಯಣ ನಡೆಯಿತು.
ಈ ಯಾಗದಲ್ಲಿ ಚಂಡಿಕಾ ಪಾರಾಯಣ , ಪುಷ್ಪಾಅಂಜಲಿ, ಕುಂಕುಮಾರ್ಚನೆ , ಮಹಾ ಪೂರ್ಣಾಹುತಿ ಸಾಹಿತ್ಯ ( ಸುಹಾಸಿನಿ ) ಕುಮಾರಿ ಪೂಜೆ ಸಮರ್ಪಣೆ ಮಾಡಲಿಚ್ಚಿಸುವವರು ದೇವಾಲಯದ ಆಫೀಸಿನಲ್ಲಿ ತಿಳಿಸ ಬೇಕಾಗಿ ಕೋರಲಾಗಿದೆ ಎಂದು ಕೊಂಚಾಡಿ ಕಾಶಿ ಮಠದ ವ್ಯವಸ್ಥಾಪಕ ಸಮಿತಿಯ ಅಧ್ಯಕ್ಷರಾದ ಡಿ . ವಾಸುದೇವ ಕಾಮತ್ ಹಾಗೂ ಕಸ್ತೂರಿ ಸದಾಶಿವ ಪೈ ತಿಳಿಸಿದ್ದಾರೆ.
ಚಿತ್ರ: ಮಂಜು ನೀರೇಶ್ವಾಲ್ಯ