ಅಡಿಕೆಯಲ್ಲಿ ಬೇರು ಹುಳದ ಸಮಗ್ರ ಪೀಡೆ ನಿರ್ವಹಣೆಯ ಪ್ರಾತ್ಯಕ್ಷಿಕೆ
ಉಡುಪಿ, ಅ 07 : ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ, ಶಿವಮೊಗ್ಗ, ಭಾರತೀಯ ಕೃಷಿ ಅನುಸಂಧಾನ ಪರಿಷತ್ ನವದೆಹಲಿ, ಐಸಿಎಆರ್-ಕೃಷಿ ವಿಜ್ಞಾನ ಕೇಂದ್ರ, ಬ್ರಹ್ಮಾವರದ ಪ್ರಾತ್ಯಕ್ಷಿಕೆ
“ಅಡಿಕೆಯಲ್ಲಿ ಬೇರು ಹುಳದ ಸಮಗ್ರ ಪೀಡೆ ನಿರ್ವಹಣೆಯ” ತರಬೇತಿ ಕಾರ್ಯಕ್ರಮವು ಶಿರ್ಲಾಲು ಗ್ರಾಮದ ಧರಣೀಂದ್ರ ಜೈನ್ ಮನೆಯ ವಠಾರದಲ್ಲಿ ಮಂಗಳವಾರ ನಡೆಯಿತು.
ಕಾರ್ಯಕ್ರಮದಲ್ಲಿ ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥ ಡಾ. ಬಿ ಧನಂಜಯ, ಅಡಿಕೆ ಬೇರು ಹುಳದ ಹಾನಿಯಿಂದಾಗುವ ನಷ್ಟದ ಬಗ್ಗೆ ರೈತರಿಗೆ ಮಾಹಿತಿ ನೀಡಿದರು.
ಕೀಟಶಾಸ್ತ್ರಜ್ಞ ಡಾ.ಸಚಿನ್ ಯು.ಎಸ್, ಬೇರು ಹುಳದ ಜೀವನ ಚಕ್ರ, ಹಾನಿಯ ಪ್ರಮಾಣ ಮತ್ತು ಲಕ್ಷಣಗಳು ಹಾಗೂ ಸಮಗ್ರ ಪೀಡೆ ನಿರ್ವಹಣೆಯ ವಿವಿಧ ವಿಧಾನಗಳ ಬಗ್ಗೆ ರೈತರಿಗೆ ಸಂಪೂರ್ಣ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಬ್ರಹ್ಮಾವರ ವಲಯ ಕೃಷಿ ಮತ್ತು ತೋಟಗಾರಿಕಾ ಸಂಶೋಧನಾ ಕೇಂದ್ರದ ಸಹ ಸಂಶೋಧನಾ ನಿರ್ದೇಶಕ ಡಾ. ಲಕ್ಷ್ಮಣ, , ಶಿರ್ಲಾಲು ಗ್ರಾಮದ ನಿವೃತ್ತ ಪ್ರಾಂಶುಪಾಲ ಹಾಗೂ ಪ್ರಗತಿಪರ ರೈತ ಗುಣಪಾಲ್ ಕಡಂಬ, ತೋಟಗಾರಿಕೆ ವಿಜ್ಞಾನಿ ಚೈತನ್ಯ ಹೆಚ್ ಎಸ್, ಬೇಸಾಯಶಾಸ್ತ್ರ ವಿಜ್ಞಾನಿ ಡಾ. ನವೀನ್ ಎನ್ ಈ, ಮುಂತಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ರೈತರಿಗೆ ಬೇರು ಹುಳದ ಹತೋಟಿಯ ಪರಿಕರಗಳನ್ನು ವಿತರಿಸಿ ಪ್ರಾತ್ಯಕ್ಷಿಕೆ ನೀಡಲಾಯಿತು.