ಕೋರೋನಾ ವೈರಸ್– ಮಾರ್ಗಸೂಚಿ ಪಾಲನೆ ಕಡ್ಡಾಯ -ಜಿಲ್ಲಾಧಿಕಾರಿ ಆದೇಶ

 ಕೋರೋನಾ ವೈರಸ್– ಮಾರ್ಗಸೂಚಿ ಪಾಲನೆ ಕಡ್ಡಾಯ -ಜಿಲ್ಲಾಧಿಕಾರಿ ಆದೇಶ
Share this post

ಮಂಗಳೂರು ಸೆ 23 : ದ.ಕಜಿಲ್ಲೆಯಲ್ಲಿ ಕೋರೋನಾ ವೈರಸ್ ಸೋಂಕು ಹರಡದಂತೆ ಮುಂಜಾಗೃತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಮುಂಜಾಗೃತಾ ಕ್ರಮಗಳು ಹಾಗೂ ಶರತ್ತುಗಳನ್ನು ವಿಧಿಸುವುದುಅಗತ್ಯವಾಗಿರುವುದರಿಂದ ವಿಪತ್ತು ನಿರ್ವಹಣಾ ಕಾಯ್ದೆ 200 ರ ಕಲಂ 21(1)(2)(3) ರಡಿಯಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ದ.ಕಜಿಲ್ಲಾಧಿಕಾರಿ ಹಾಗೂ ಜಿಲ್ಲಾದಂಡಾಧಿಕಾರಿಡಾ: ರಾಜೇಂದ್ರ ಕೆ.ವಿ ಅವರು ಆದೇಶ ಹೊರಡಿಸಿರುತ್ತಾರೆ.

ಅಂಗಡಿ ಪ್ರದೇಶ

ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಗ್ರಾಮಾಂತರ, ನಗರ ಸ್ಥಳೀಯ ಸಂಸ್ಥೆ ಹಾಗೂ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ವ್ಯವಹಾರ ನಡೆಯುವ ಎಲ್ಲಾ ಹೋಟೆಲ್, ರೆಸ್ಟೋರೆಂಟ್‍ಗಳು ವಾಣಿಜ್ಯ ಸಂಕೀರ್ಣಗಳು, ಮಾಲ್‍ಗಳು ಜನಸಂದಣಿ ಸೇರುವ ಪ್ರದೇಶಗಳಲ್ಲಿ ಎಲ್ಲಾಅಂಗಡಿ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸುವ ಎಲ್ಲಾ ಸಿಬ್ಬಂದಿಗಳು ಹಾಗೂ ಸಾರ್ವಜನಿಕರು ಮಾಸ್ಕ್ ಧರಿಸುವುದು ಹಾಗೂ ಸಾಮಾಜಿಕಅಂತರವನ್ನು ಕಾಯ್ದುಕೊಳ್ಳುವುದು ಕಡ್ಡಾಯವಾಗಿರುತ್ತದೆ.

ಯಾವುದೇ ಅಂಗಡಿಗಳಲ್ಲಿ ಮಾಸ್ಕ್‍ ಧರಿಸದಿರುವುದು ಹಾಗೂ ಸಾಮಾಜಕ ಅಂತರವನ್ನು ಕಾಯ್ದುಕೊಳ್ಳದಿರುವುದು ಅಥವಾ ಷರತ್ತುಗಳನ್ನು ಉಲ್ಲಂಘನೆ ಮಾಡಿದ್ದಲ್ಲಿ ಮೊದಲ ಬಾರಿಗೆ ರೂ.1000, ಎರಡನೇ ಮತ್ತು ಮೂರನೇ ಬಾರಿಗೆ ಕ್ರಮವಾಗಿ ರೂ.2000 ಮತ್ತು ರೂ.3000 ದಂಡವನ್ನು ವಿಧಿಸಿ ಎಚ್ಚರಿಗೆ ನೀಡಲು ಹಾಗೂ ಮೂರಕ್ಕಿಂತ ಹೆಚ್ಚು ಬಾರಿ ಷರತ್ತುಗಳನ್ನು ಉಲ್ಲಂಘಸಿದ್ದಲ್ಲಿ ಅಂಗಡಿಗಳ ಪರವಾನಿಗೆಯನ್ನು ರದ್ದು ಪಡಿಸಲು ನಗರ ಸ್ಥಳೀಯ ಸಂಸ್ಥೆಗಳು ತಮ್ಮ ಹಂತದಲ್ಲಿ ಸೂಕ್ತ ಉಪನಿಯಮಗಳನ್ನು ರಚಿಸಿ ಅದನ್ನು ಅನಿಷ್ಟಾನಗೊಳಿಸಬೇಕು.

ಪತ್ರಿಯೊಬ್ಬಅಂಗಡಿ ಮಾಲೀಕರು ಸಾಮಾಜಿಕ ಅಂತರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದು ಹಾಗೂ ನಿಯಮ ಉಲ್ಲಂಘನೆಯಾಗದಂತೆ ಸಾಕಷ್ಟು ಮುಂಜಾಗೃತಾ ಕ್ರಮವಹಿಸಬೇಕು.

ನಗರ ಸ್ಥಳೀಯ ಸಂಸ್ಥೆ ಹಾಗೂ ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯ ಪ್ರತಿಯೊಬ್ಬ ವರ್ತಕರು ತಮ್ಮಅಂಗಡಿಯಲ್ಲಿ ಸಾರ್ವಜಿನಿಕರು ಹೆಚ್ಚಿನ ಸಂಖ್ಯೆಯಲ್ಲಿಏಕಕಾಲದಲ್ಲಿ ಸೇರದಂತೆ ಅಂಗಡಿ ಮುಂಗಟ್ಟಿನ ಮುಂಭಾಗದಲ್ಲಿ ಕನಿಷ್ಟ 6×6 ಅಡಿ ಅಂತರವನ್ನು ಗುರುತಿಸಿ ಗ್ರಾಹಕರಲ್ಲಿ ದೈಹಿಕಅಂತರ ಪಾಲಿಸುವುದನ್ನು ಖಚಿತಪಡಿಸಿಕೊಳ್ಳಬೇಕು.

ನಗರ ಸ್ಥಳೀಯ ಸಂಸ್ಥೆ ಹಾಗೂ ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ವರ್ತಕರು ತಮ್ಮಅಂಗಡಿ ಮುಂಗಟ್ಟಿನಲ್ಲಿ ಮುಂದೆ ಇರುವ ಸ್ಥಳದಲ್ಲಿ ವಾಹನ ಸಂಚಾರಕ್ಕೆ ಬಳಸಲ್ಪಡುವ ರಸ್ತೆಯನ್ನು ಹೊರತುಪಡಿಸಿ, ಉಳಿದ ಸ್ಥಳವನ್ನು ಸಾಮಾಜಿಕ ಅಂತರ ಕಾಯ್ದುಕೊಂಡು ಸಾರ್ವಜನಿಕರಿಗೆ ಅನುಕೂಲವಾಗುವಂತೆ ಬಳಸುವುದು.

ಪ್ರತಿ ಅಂಗಡಿ ಮಾಲೀಕರು ತಮ್ಮಅಂಗಡಿ ಮುಂಭಾಗದಲ್ಲಿ ಸ್ವಯಂಚಾಲಿತ ಸ್ಯಾನಿಟೈಸರ್ ವ್ಯವಸ್ಥೆಯನ್ನು ಅಳವಡಿಸುವುದು ಹಾಗೂ ಗ್ರಾಹಕರನ್ನು ಸ್ಯಾನಿಟೈಸರ್ ಬಳಸಲು ಉತ್ತೇಜಿಸುವುದು. ಪತ್ರಿ ಅಂಗಡಿ ಮಾಲೀಕರು ಪ್ರತಿದಿನ ತಮ್ಮತಮ್ಮ ಅಂಗಡಿಗಳಲ್ಲಿ ಕೆಲಸ ನಿರ್ವಹಿಸುವ ಎಲ್ಲಾ ಸಿಬ್ಬಂದಿಗಳ ಆರೋಗ್ಯತಪಾಸಣೆಯನ್ನು ನಡೆಸುವುದು, ಅಲ್ಲದೇ ಪ್ರತಿ ಮೂರು ದಿನಗಳಿಗೊಮ್ಮೆ ತಮ್ಮ ಅಂಗಡಿಗಳನ್ನು ಸ್ಯಾನಿಟೈಸರ್ ಮಾಡಲುಕ್ರಮವಹಿಸಬೇಕು.

ಅಂಗಡಿ ಮಾಲಿಕರು ತಮ್ಮಅಂಗಡಿ ಮುಂಭಾಗದಲ್ಲಿಓರ್ವ ಸಿಬ್ಬಂದಿಯನ್ನು ನಿಯೋಜಿಸಿ ದಿನನಿತ್ಯ ಗ್ರಾಹಕರನ್ನು ಥರ್ಮಲ್ ಸ್ಕ್ಯಾನಿಂಗ್ ಮಾಡುವುದು. ಜ್ವರದ ಲಕ್ಷಣಗಳುಳ್ಳ ಗ್ರಾಹಕರ ಹೆಸರು ದೂರವಾಣಿ ಸಂಖ್ಯೆ ಮತ್ತು ವಿಳಾಸವನ್ನು ರಿಜಿಸ್ಟರ್ ನಲ್ಲಿ ನಮೂದಿಸುವುದು ಹಾಗೂ ತಮ್ಮ ವ್ಯಾಪ್ತಿಯ ಆರೋಗ್ಯಾಧಿಕಾರಿ ಹಾಗೂ ಮಹಾನಗರಪಾಲಿಕೆಗೆ ವರದಿ ನೀಡಬೇಕು.

ಜ್ವರದ ಲಕ್ಷಣಗಳುಳ್ಳ ಗ್ರಾಹಕರ ಕುರಿತು ವರದಿ ಮಹಾನಗರಪಾಲಿಕೆಹಾಗೂ ಆರೋಗ್ಯ ಇಲಾಖೆಗೆ ಸ್ವೀಕೃತವಾದ ತಕ್ಷಣವೇ ಮಹಾನಗರಪಾಲಿಕೆಯಿಂದ / ಜಿಲ್ಲಾಡಳಿತದಿಂದ ಆಂಬುಲೆನ್ಸ್ ವ್ಯವಸ್ಥೆಯನ್ನು ಮಾಡಿಕೋವಿಡ್ ಲಕ್ಷಣಗಳುಳ್ಳ ವ್ಯಕ್ತಿಯನ್ನುಕೋವಿಡ್‍ಕೇರ್ ಸೆಂಟರ್‍ಗೆ ತಪಾಸಣೆಗೆ ಕಳುಹಿಸಬೇಕು.

ಅಂಗಡಿ ಮುಂಗಟ್ಟುಗಳಲ್ಲಿ ಸಾರ್ವಜಿನಿಕರು ಸಾಮಾಜಿಕ ಅಂತರವನ್ನುಕಾಯ್ದುಕೊಂಡಿರುವ ಬಗ್ಗೆ ಸರ್ಕಾರದ ಮಾರ್ಗಸೂಚಿಗಳನ್ನು ಅನುಸರಿಸುತ್ತಿರುವ ಬಗ್ಗೆ ಸಿಸಿಟಿವಿ ಕ್ಯಾಮರಾವನ್ನು ಅಳವಡಿಸಿ ರೆಕಾರ್ಡಿಂಗ್ ಮಾಡವುದು ಸಂಬಂಧಪಟ್ಟ ವರ್ತಕರಜವಾಬ್ದಾರಿಯಾಗಿರುತ್ತದೆ. ಸಿಸಿಟಿವಿ ರೆಕಾರ್ಡಿಂಗ್ ದಾಖಲೆಗಳನ್ನು ಸಂಬಂಧಪಟ್ಟಆರೋಗ್ಯಇಲಾಖಾಧಿಕಾರಿಗೆ ಹಾಗೂ ಆಯುಕ್ತರು ಮಂಗಳೂರು ಮಹಾನಗರಪಾಲಿಕೆ/ ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳಿಗೆ ಸಲ್ಲಿಸಬೇಕು.

ಮೇಲ್ಕಂಡ ಅಧಿಕಾರಿಗಳು ದಾಖಲೆಗಳನ್ನು ನಿಯಮಿತವಾಗಿ ಪರಿಶೀಲಿಸಿ ಸಾಮಾಜಿಕ ಅಂತರವನ್ನು ಹಾಗೂ ಸರ್ಕಾರಿ ಮಾರ್ಗಸೂಚಿಗಳನ್ನು ಪಾಲಿಸುತ್ತಿರುವ ಬಗ್ಗೆ ಖಚಿತ ಪಡಿಸಿಕೊಳ್ಳಬೇಕು. ಉಲ್ಲಂಘಿಸಿದಲ್ಲಿ ದಂಡ ವಿಧಿಸುವುದು/ ಪರವಾನಗಿರದ್ದು ಪಡಿಸುವಂತೆಕ್ರಮ ಕೈಗೊಳಲಾಗುವುದು.

ಯಾವುದೇ ಅಂಗಡಿಗಳಲ್ಲಿ ಮಾಸ್ಕ್‍ ಧರಿಸದಿರುವುದು ಹಾಗೂ ಸಾಮಾಜಕ ಅಂತರವನ್ನು ಕಾಯ್ದುಕೊಳ್ಳದಿರುವುದು ಅಥವಾ ಷರತ್ತುಗಳನ್ನು ಉಲ್ಲಂಘನೆ ಮಾಡಿದ್ದಲ್ಲಿ ಮೊದಲ ಬಾರಿಗೆ ರೂ.1000, ಎರಡನೇ ಮತ್ತು ಮೂರನೇ ಬಾರಿಗೆ ಕ್ರಮವಾಗಿ ರೂ.2000 ಮತ್ತು ರೂ.3000 ದಂಡವನ್ನು ವಿಧಿಸಿ ಎಚ್ಚರಿಗೆ ನೀಡಲು ಹಾಗೂ ಮೂರಕ್ಕಿಂತ ಹೆಚ್ಚು ಬಾರಿ ಷರತ್ತುಗಳನ್ನು ಉಲ್ಲಂಘಸಿದ್ದಲ್ಲಿ ಅಂಗಡಿಗಳ ಪರವಾನಿಗೆಯನ್ನು ರದ್ದು ಪಡಿಸಲು ನಗರ ಸ್ಥಳೀಯ ಸಂಸ್ಥೆಗಳು ತಮ್ಮ ಹಂತದಲ್ಲಿ ಸೂಕ್ತ ಉಪನಿಯಮಗಳನ್ನು ರಚಿಸಿ ಅದನ್ನು ಅನಿಷ್ಟಾನಗೊಳಿಸಬೇಕು.

ಸಾರ್ವಜನಿಕ ಸ್ಥಳಗಳಲ್ಲಿ

ಎಲ್ಲಾ ಸಾರ್ವಜನಿಕ ಸ್ಥಳಗಳಲ್ಲಿ ಕೆಲಸದ ಸ್ಥಳಗಳಲ್ಲಿ ಮತ್ತು ಪ್ರಯಾಣದ ಸಮಯದಲ್ಲಿ ಮುಖದ ಹೊದಿಕೆಯನ್ನು ಧರಿಸುವುದು ಕಡ್ಡಾಯವಾಗಿದೆ. ಅಗತ್ಯಾನುಸಾರ ಮುಖದ ಹೊದಿಕೆಯನ್ನು ಧರಿಸದಿದ್ದಲ್ಲಿ ನಗರ ಪ್ರದೇಶಗಳಲ್ಲಿ ರೂ.200 ಮತ್ತು ಇನ್ನುಳಿದ ಪ್ರದೇಶಗಳಲ್ಲಿ ರೂ.100 ದಂಡ ವಿಧಿಸಲಾಗುವುದು.

ಪ್ರತಿ ಅಂಗಡಿಗಳಲ್ಲಿ ಸಂಗ್ರಹವಾಗುವ ತ್ಯಾಜ್ಯಗಳನ್ನು ಘನತ್ಯಾಜ್ಯ ನಿರ್ವಹಣೆ ನಿಯಮಗಳನ್ವಯ ವಿಲೇವಾರಿ ಮಾಡಲುಕ್ರಮವಹಿಸಲಾಗುವುದು.ರಸ್ತೆಗಳಲ್ಲಿ ತ್ಯಾಜ್ಯಗಳನ್ನುಎಸೆಯದಂತೆಕ್ರಮವಹಿಸಲಾಗುವುದು, ಉಲ್ಲಂಘಿಸಿದ್ದಲ್ಲಿ ಹಾಗೂ ಮೇಲೆ ತಿಳಿಸಿದ ನಿಯಮಗಳು, ಹಾಗೂ ಘನತ್ಯಾಜ್ಯ ನಿರ್ವಹಣೆ ನಿಯಮಗಳು ಹಾಗೂ ಮಹಾನಗರಪಾಲಿಕೆ ನಿಯಮಗಳಡಿಯಲ್ಲಿ ದಂಡ ಭರಿಸುಬೇಕು.

ಮೀನುಗಳನ್ನು ದೋಣಿ, ಮೀನುಗಾರಿಕೆ ಹಡಗುಗಳಿಂದ ಇಳಿಸುವ ಸಂದರ್ಭಗಳಲ್ಲಿ

ಮೀನುಗಳನ್ನು ದೋಣಿ, ಮೀನುಗಾರಿಕೆ ಹಡಗುಗಳಿಂದ ಇಳಿಸುವ ಸಂದರ್ಭಗಳಲ್ಲಿ ಬಂದರು, ಜಟ್ಟಿಗಳಲ್ಲಿ ಮೀನುಗಾರಿಕೆ ವ್ಯಾಪಾರದ ಸಂದರ್ಭಗಳಲ್ಲಿ ಅಲ್ಲಿ ಸೇರುವ ಜನಗಳು ಸಾಮಜಿಕ ಅಂತರವನ್ನು ಹಾಗೂ ಸರ್ಕಾರಿ ಮಾರ್ಗಸೂಚಿಗಳನ್ನು ತಪ್ಪದೇ ಪಾಲಿಸಬೇಕು. ಉಪನಿರ್ದೇಶಕರು ಮೀನುಗಾರಿಕೆ ಇಲಾಖೆ ದ.ಕ.ಮಂಗಳೂರು ಹಾಗೂ ಬಂದರುಅಧಿಕಾರಿಯವರುಇದರ ಬಗ್ಗೆ ನಿಗಾವಹಿಸಿ ಸಂಬಂಧಪಟ್ಟವರಿಗೆ ಸೂಕ್ತ ತಿಳುವಳಿಕೆ ನೀಡಿ ಸರ್ಕಾರಿ ಮಾರ್ಗಸೂಚಿಗಳನ್ನು ಪಾಲಿಸುವಂತೆ ಅಗತ್ಯಕ್ರಮ ಕೈಗೊಳ್ಳಬೇಕು.

ಮೀನುಗಾರಿಕೆ ವ್ಯಾಪಾರ, ಹಣ್ಣು ಹಂಪಲು, ತರಕಾರಿ ಹಾಗೂ ಇತರೇ ವ್ಯಾಪಾರ ವಹಿವಾಟುಗಳು ನಡೆಸುವ ಸ್ಥಳಗಳಲ್ಲಿ ಆಯುಕ್ತರು, ಮಂಗಳೂರು ಮಹಾನಗರಪಾಲಿಕೆ, ಸ್ಥಳೀಯ ಸಂಸ್ಥೆಯ ಮುಖ್ಯಾಧಿಕಾರಿಗಳು ತಮ್ಮತಮ್ಮ ವ್ಯಾಪ್ತಿಯಲ್ಲಿಓರ್ವ ನೋಡಲ್‍ ಅಧಿಕಾರಿಯನ್ನು ನೇಮಿಸಿ ಪ್ರತಿನಿತ್ಯ ಸರ್ಕಾರಿ ಮಾರ್ಗಸೂಚಿಗಳನ್ನು ಸಾರ್ವಜನಿಕರು, ವರ್ತಕರು ಕಡ್ಡಾಯವಾಗಿ ಪಾಲಿಸುತ್ತಿರುವ ಬಗ್ಗೆ ಖಾತರಿಪಡಿಸಿಕೊಳ್ಳಬೇಕು ಹಾಗೂ ಜಿಲ್ಲಾಡಳಿತದ ಗಮನಕ್ಕೆ ತರಬೇಕು.

ಬಸ್‍ ಪ್ರಯಾಣ

ಕೆ.ಎಸ್.ಆರ್.ಟಿ.ಸಿ ಬಸ್‍ಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರು ತಪ್ಪದೇ ಮಾಸ್ಕ್ ಬಳಸಬೇಕು ಹಾಗೂ ಸರ್ಕಾರಿ ಮಾರ್ಗಸೂಚಿಗಳನ್ನು ತಪ್ಪದೇ ಪಾಲಿಸಬೇಕು.ಇದನ್ನುಉಲ್ಲಂಘಿಸುವ ಪ್ರಯಾಣಿಕರಿಗೆ ಪ್ರಯಾಣಕ್ಕೆ ಅವಕಾಶ ನೀಡದಂತೆ ಬಸ್ಸಿನ ಚಾಲಕ ಹಾಗೂ ನಿರ್ವಾಹಕರಿಗೆ ಜಿಲ್ಲೆಯ ವಿಭಾಗೀಯ ನಿಯಂತ್ರಣಾಧಿಕಾರಿ, ಕೆ.ಎಸ್.ಆರ್.ಟಿ.ಸಿ, ಮಂಗಳೂರು, ಪುತ್ತೂರುಇವರು ಸೂಕ್ತ ನಿರ್ದೇಶನ ನೀಡಬೇಕು.

ಖಾಸಗಿ ಬಸ್, ಆಟೋ, ಕ್ಯಾಬ್‍ ಪ್ರಯಾಣ

ಖಾಸಗಿ ಬಸ್, ಆಟೋ, ಕ್ಯಾಬ್‍ ಇತ್ಯಾದಿ ವಾಹನಗಳಲ್ಲಿ ಪ್ರಯಾಣಿಕರುಕಡ್ಡಾಯವಾಗಿ ಮಾಸ್ಕ್ ಬಳಸಿ ಸಂಚರಿಸಬೇಕು.ಈ ಬಗ್ಗೆ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ನಿಯಮಿತವಾಗಿ ಪರಿಶೀಲಿಸಿ ಉಲ್ಲಂಘನೆಯಾದ್ದಲ್ಲಿ ವಾಹನದ ಮಾಲೀಕರಿಗೆದಂಡವನ್ನು ವಿಧಿಸಬೇಕು. ಪೊಲೀಸ್ ಇಲಾಖಾ ಅಧಿಕಾರಿಗಳು ಕೂಡಾ ತಮ್ಮ  ಹಂತದಲ್ಲಿಆಗಿದ್ದಾಂಗೆ ವಾಹನ ತಪಾಸಣೆ ಮಾಡಿ ಸರ್ಕಾರಿ ಮಾರ್ಗಸೂಚಿಗಳನ್ನು ಸಾರ್ವಜನಿಕರುಕಡ್ಡಾಯವಾಗಿ ಪಾಲಿಸುತ್ತಿರುವ ಬಗ್ಗೆ ಖಾತರಿಪಡಿಸಿಕೊಳ್ಳಬೇಕು.    

ಎ.ಪಿ.ಎಂ.ಸಿ,  ಮಾರುಕಟ್ಟೆ

ಎ.ಪಿ.ಎಂ.ಸಿ. ಮಾರುಕಟ್ಟೆಗಳಲ್ಲಿ ಸಾರ್ವಜನಿಕರು ಹಾಗೂ ವರ್ತಕರು ಕಡ್ಡಾಯವಾಗಿ ಮಾಸ್ಕ್ ಧರಿಸುವುದು ಹಾಗೂ ಸಾಮಾಜಿಕ ಅಂತರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಕೃಷಿ ಉತ್ಪನ್ನಗಳನ್ನು ಸಾಗಾಣಿಕೆ, ವಾಹನಗಳಿಂದ ಇಳಿಸುವ ಇತ್ಯಾದಿ ಸಂದರ್ಭಗಳಲ್ಲಿ ಸರ್ಕಾರಿ ಮರ್ಗಸೂಚಿಗಳ ಉಲ್ಲಂಘನೆಯಗದಂತೆ ಎ.ಪಿ.ಎಂ.ಸಿ.ಕಾರ್ಯದರ್ಶಿಯವರು ಅಗತ್ಯಕ್ರಮ ಜರುಗಿಸಿ ನಿಗಾವಹಿಸಬೇಕು.

ಸಾರ್ವಜನಿಕರು ಕಡ್ಡಾಯವಾಗಿ ಮಾಸ್ಕ್ ಧರಿಸುವ ಬಗ್ಗೆ ಹಾಗೂ ಎಲ್ಲೆಂದರಲ್ಲಿ ಉಗುಳದಂತೆ ಆಯುಕ್ತರು, ಮಂಗಳೂರು ಮಹಾನಗರಪಾಲಿಕೆ, ಸ್ಥಳೀಯ ಸಂಸ್ಥೆಯ ಮುಖ್ಯಾಧಿಕಾರಿಗಳು ಜನಜಾಗೃತಿ ಮೂಡಿಸಬೇಕು ಹಾಗೂ ತಮ್ಮ ವ್ಯಾಪ್ತಿಯಲ್ಲಿಇದನ್ನು ಉಲ್ಲಂಘಿಸುವ ಸಾರ್ವಜನಿಕರಿಗೆ ದಂಡವನ್ನು ವಿಧಿಸಿ ಅಗತ್ಯ ಕ್ರಮಜರುಗಿಸಲಾಗುವುದು.

ಇದನ್ನೂ ಓದಿ: ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ ನ ಖಾತೆ ತೆರೆಯುವ ಅಭಿಯಾನ

Subscribe to our newsletter!

Other related posts

error: Content is protected !!